Download Our App

Follow us

Home » ಅಪರಾಧ » 4 ವರ್ಷದ ಮಗುವನ್ನ ಕೊಂದು ಸೂಟ್​ಕೇಸ್​ನಲ್ಲಿ ತುಂಬಿದ್ದ ತಾಯಿ..

4 ವರ್ಷದ ಮಗುವನ್ನ ಕೊಂದು ಸೂಟ್​ಕೇಸ್​ನಲ್ಲಿ ತುಂಬಿದ್ದ ತಾಯಿ..

ಚಿತ್ರದುರ್ಗ : ತಾಯಿಯೊಬ್ಬಳು 4 ವರ್ಷದ ಮಗುವನ್ನ ಕೊಂದು ಸೂಟ್​ಕೇಸ್​ನಲ್ಲಿ ತುಂಬಿದ್ದಾಳೆ. ಮಗು ಕೊಂದ ತಾಯಿಯ ಸೀಕ್ರೆಟ್​  ಭಯಾನಕವಾಗಿದೆ.  4 ವರ್ಷದ ಕಂದನನ್ನು ತಾಯಿಯೇ ಕೊಂದಿದ್ಯಾಕೆ..? ಗೋವಾ TO ಬೆಂಗಳೂರು, ಮರ್ಡರ್​​ನ ಮಿಸ್ಟರಿ ಏನು..? ಈ ಸ್ಟೋರಿ ಓದಿ..

ತಾಯಿ ಮಗನನ್ನು ಗೋವಾ ರೂಂನಲ್ಲಿ ಕೊಲೆ ಮಾಡಿ, ಸೂಟ್​ಕೇಸ್​ನಲ್ಲಿ ಶವ ತುಂಬಿದ್ದಳು. ಬೆಂಗಳೂರಿಗೆ ಟ್ಯಾಕ್ಸಿಯಲ್ಲೇ ಸೂಟ್​ಕೇಸ್​ ತರುತ್ತಿದ್ದಳು.  ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸರು ಗೋವಾದಿಂದ ಬರ್ತಿದ್ದ ಟ್ಯಾಕ್ಸಿ ತಪಾಸಣೆ ಮಾಡಿದ್ದಾರೆ. ಪೊಲೀಸರು ಮೈಂಡ್​ ಫುಲ್​​ AI ಆ್ಯಪ್​​​ ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಆಗಿರುವ ಸುಚನಾ ಸೇಠ್​ ಎಂಬಾಕೆಯನ್ನು ವಶಕ್ಕೆ ಪಡೆದಿದ್ದಾರೆ.

ಸುಚನಾ ಸೇಠ್​ ಗೋವಾ ಹೋಟೆಲ್​​ನಲ್ಲಿದ್ದು, ಹಳೆ ಪತಿ ಇದೇ ಹೋಟೆಲ್​​ ರೂಂಗೆ ಬರ್ತಾ ಇದ್ದ. ಹಳೆ ಪತಿಗೆ ಮಗು ಇರೋದು ಗೊತ್ತಾಗುತ್ತೆ ಅಂತಾ ಕೊಲೆ ಮಾಡಿದ್ದಾರೆ. ಹೋಟೆಲ್ ರೂಮಿನಲ್ಲಿ ರಕ್ತದ ಕಲೆಗಳು ಪತ್ತೆ ಆಗಿದ್ದವು.

 

ಇನ್ನು ಹೋಟೆಲ್ ಸಿಬ್ಬಂದಿ ಗೋವಾ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ನಂಬರ್ ಹುಡುಕಿ ಸುಚನಾ ಪ್ರಯಾಣಿಸುತ್ತಿದ್ದ ಟ್ಯಾಕ್ಸಿ ಡ್ರೈವರ್​ಗೆ ಕರೆ ಮಾಡಿದ್ದಾರೆ. ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಪೊಲೀಸರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಚಾಲಕ ಟ್ಯಾಕ್ಸಿ ನಿಲ್ಲಿಸಿದ್ದು ಐಮಂಗಲ ಪೊಲೀಸರಿಗೆ ಆರೋಪಿ ಸುಚನಾಳನ್ನು ಒಪ್ಪಿಸಿದ್ದಾರೆ.

ಇದನ್ನೂ ಓದಿ : ಅಪಘಾತದಲ್ಲಿ ಗಾಯಗೊಂಡಿದ್ದ ಯಶ್​ ಅಭಿಮಾನಿ ಸಾ*ವು..

Leave a Comment

DG Ad

RELATED LATEST NEWS

Top Headlines

ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್ – ಶೀಘ್ರವೇ KMFನಿಂದ ‘ನಂದಿನಿ ದೋಸೆ ಹಿಟ್ಟು’ ಬಿಡುಗಡೆ..!

ಬೆಂಗಳೂರು : ದೋಸೆ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಶೀಘ್ರವೇ ಕೆಎಂಎಫ್​ನಿಂದ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ನಂದಿನಿ ಬ್ರ್ಯಾಂಡ್ ಅಡಿ

Live Cricket

Add Your Heading Text Here