Download Our App

Follow us

Home » ಜಿಲ್ಲೆ » ಕೋಲಾರದಲ್ಲಿ ಭಯಾನಕ ಆ್ಯಕ್ಸಿಡೆಂಟ್..​ ಡಿವೈಡರ್​ಗೆ ಡಿಕ್ಕಿಯಾಗಿ 3 ಪಲ್ಟಿಯಾದ ಕಾರು – ದೃಶ್ಯ CCTVಯಲ್ಲಿ ಸೆರೆ..!

ಕೋಲಾರದಲ್ಲಿ ಭಯಾನಕ ಆ್ಯಕ್ಸಿಡೆಂಟ್..​ ಡಿವೈಡರ್​ಗೆ ಡಿಕ್ಕಿಯಾಗಿ 3 ಪಲ್ಟಿಯಾದ ಕಾರು – ದೃಶ್ಯ CCTVಯಲ್ಲಿ ಸೆರೆ..!

ಕೋಲಾರ : ಜಿಲ್ಲೆಯ ಮಾಲೂರಿನಲ್ಲಿ ಭಯಾನಕ ಆ್ಯಕ್ಸಿಡೆಂಟ್​ ಸಂಭವಿಸಿದೆ. ಕಾರು ಡಿವೈಡರ್​ಗೆ ಡಿಕ್ಕಿಯಾಗಿ ಮೂರು ಪಲ್ಟಿಯಾಗಿದ್ದು, ಅಪಘಾತದ ಭೀಕರ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಾಲೂರು ಪಟ್ಟಣದ ವಂಶೋದಯ ಆಸ್ಪತ್ರೆ ಬಳಿ ಅಪಘಾತ ನಡೆದಿದ್ದು, ಮಾಲೂರು-ಬೆಂಗಳೂರು ರಸ್ತೆಯ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದಿದೆ. ಕಾರ್​​ನಲ್ಲಿದ್ದ ಎಲ್ಲರೂ ಸೇಫ್​​​ ಆಗಿದ್ದಾರೆ. ಕಾರು ಮಾಲೂರಿನ ಸದಾನಂದ್ ಎಂಬುವರಿಗೆ ಸೇರಿದ್ದಾಗಿದೆ.

ಕಾರ್​​ನಲ್ಲಿ ಸದಾನಂದ್ ದಂಪತಿ, ಇಬ್ಬರು ಮಕ್ಕಳಿದ್ದರು. ರಸ್ತೆ ಗುಂಡಿ ತಪ್ಪಿಸುವಾಗ ನಿಯಂತ್ರಣ ತಪ್ಪಿದ ಕಾರು​​​ ಪಲ್ಟಿಯಾಗಿದೆ. ಘಟನಾ ಸಂಬಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬೆಂಗಳೂರು : ಗ್ರಾಹಕರ ವಿಚಾರಕ್ಕೆ ಬಟ್ಟೆ ಅಂಗಡಿ ಮಾಲೀಕನ ಮೇಲೆ ಹಲ್ಲೆ.. ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

Leave a Comment

DG Ad

RELATED LATEST NEWS

Top Headlines

ಧಾರವಾಡದಲ್ಲಿ ಜಿಮ್‌ಗೆ ನುಗ್ಗಿದ ಕೋತಿ – ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್.. ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಧಾರವಾಡ : ಕೋತಿಯೊಂದು ಜಿಮ್‌ಗೆ  ನುಗ್ಗಿದ ಘಟನೆ ಧಾರವಾಡದ ಸೈದಾಪುರದ ಕಿಂಗ್‌ಡಮ್ ಜಿಮ್​​ನಲ್ಲಿ ನಡೆದಿದೆ. ಕೋತಿ ಜಿಮ್‌ಗೆ ಬಂದ ಪರಿಣಾಮ ಯುವಕರು ಹೌಹಾರಿ ಹೊರ ಬಂದಿದ್ದಾರೆ. ಮೊದಲ‌

Live Cricket

Add Your Heading Text Here