Download Our App

Follow us

Home » ಸಿನಿಮಾ » ‘ಪೆನ್​ಡ್ರೈವ್’ ಸಿನಿಮಾದಲ್ಲಿ ನಟಿಸಲಿದ್ದಾರೆ ತನಿಷಾ ಕುಪ್ಪಂಡ : ಈ ಚಿತ್ರದ ಕಥೆ ಏನು?

‘ಪೆನ್​ಡ್ರೈವ್’ ಸಿನಿಮಾದಲ್ಲಿ ನಟಿಸಲಿದ್ದಾರೆ ತನಿಷಾ ಕುಪ್ಪಂಡ : ಈ ಚಿತ್ರದ ಕಥೆ ಏನು?

ಇತ್ತೀಚಿಗೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ವಿಚಾರ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಸದ್ಯ ಪ್ರಜ್ವಲ್ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಈ ನಡುವೆ ಪೆನ್​ಡ್ರೈವ್ ಶೀರ್ಷಿಕೆ ಅಡಿಯಲ್ಲಿ ಸಿನಿಮಾವೊಂದು ಬರುತ್ತಿದೆ. ಆದರೆ, ಈ ಚಿತ್ರಕ್ಕೂ ಅವರ ಕಥೆಗೂ ಯಾವುದೇ ಲಿಂಕ್ ಇಲ್ಲ ಎಂದು ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಹೇಳಿದ್ದಾರೆ. ನಾಳೆಯೇ ಈ ಚಿತ್ರದ ಶೀರ್ಷಿಕೆ ಅನಾವರಣವಾಗಲಿದೆ.

ಲಯನ್ ಆರ್​. ವೆಂಕಟೇಶ್ ಮತ್ತು ಲಯನ್ ಎಸ್ ವೆಂಕಟೇಶ್​ ನಿರ್ಮಿಸುತ್ತಿರುವ ‘ಪೆನ್​ಡ್ರೈವ್’ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಅಭಿನಯಿಸುತ್ತಿದ್ದಾರೆ ಅನ್ನೋದೆ ವಿಶೇಷ. ರಾಧಿಕಾ, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಭಾಗ್ಯ, ಗೀತಪ್ರಿಯಾ, ಗೀತಾ ಮೊದಲಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ನಾಳೆ ಬೆಳಿಗ್ಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಆಗಲಿದೆ.

ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರು ಈ ಚಿತ್ರದ ಟೈಟಲ್​ನ ಅನಾವರಣ ಮಾಡಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದ ತನಿಷಾ ಕುಪ್ಪಂಡ ಅವರು ‘ಬಿಗ್ ಬಾಸ್’ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದರು. ಈ ಕಾರಣದಿಂದಲೇ ಅವರಿಗೆ ಪೆನ್​ಡ್ರೈವ್ ಸಿನಿಮಾದಲ್ಲಿ ನಟಿಸೋಕೆ ಅವಕಾಶ ಸಿಕ್ಕಿದೆ.

ಈ ಸಿನಿಮಾದ ಬಗ್ಗೆ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಮಾತನಾಡಿದ್ದಾರೆ. ಇದೊಂದು ಪಕ್ಕಾ ಸಸ್ಪೆನ್ಸ್​ ಥ್ರಿಲ್ಲರ್ ಸಿನಿಮಾ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಈ ಚಿತ್ರವನ್ನು ಮಾಡಬೇಕು ಎನ್ನುವ ಆಲೋಚನೆ ಮೊದಲೇ ಇತ್ತು. ಆದರೆ, ಟೈಟಲ್ ರಿಜಿಸ್ಟರ್ ಮಾಡಿರಲಿಲ್ಲ. ಈಗ ಪೆನ್​ಡ್ರೈವ್ ವಿಚಾರ ಚರ್ಚೆಯಲ್ಲಿರುವುದರಿಂದ ಸ್ವಲ್ಪ ಬೇಗ ಸಿನಿಮಾ ಮಾಡಬೇಕು ಎನಿಸಿತು ಅಷ್ಟೇ ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಶೆಡ್​ನಲ್ಲಿ ಮತ್ತೊಂದು ಮರ್ಡರ್ ​​- ದರ್ಶನ್​​ ಕೇಸ್​ ಎಫೆಕ್ಟ್​​​ನಿಂದ ಕೊಲೆ ಅಡ್ಡೆಯಾಗ್ತಿವೆ ಶೆಡ್​..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here