Download Our App

Follow us

Home » ಕ್ರೀಡೆ » IPL ಮುಗೀತು, ಇನ್ಮುಂದೆ ಟಿ20 ವಿಶ್ವಕಪ್ ಹಬ್ಬ – ಮೊಬೈಲ್‌ನಲ್ಲಿ ಫ್ರೀಯಾಗಿ ಮ್ಯಾಚ್ ನೋಡೋದೇಗೆ? ​

IPL ಮುಗೀತು, ಇನ್ಮುಂದೆ ಟಿ20 ವಿಶ್ವಕಪ್ ಹಬ್ಬ – ಮೊಬೈಲ್‌ನಲ್ಲಿ ಫ್ರೀಯಾಗಿ ಮ್ಯಾಚ್ ನೋಡೋದೇಗೆ? ​

ಒಂಬತ್ತನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಜೂನ್ 1ರಿಂದ ಆರಂಭವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಈ ಮಹಾ ಟೂರ್ನಿಯ ಪಂದ್ಯಗಳು ನಡೆಯಲಿದ್ದು, ಇದೇ ಮೊದಲ ಬಾರಿಗೆ 20 ತಂಡಗಳು ಟಿ20 ವಿಶ್ವಕಪ್​ನಲ್ಲಿ ಭಾಗವಹಿಸುತ್ತಿವೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಐಸಿಸಿ ಟ್ರೋಫಿಗಾಗಿ ಸೆಣಸಾಡಲಿದೆ.

ಟಿ20 ವಿಶ್ವಕಪ್ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ನಡುವೆ ಟಿ20 ವಿಶ್ವಕಪ್ ಪಂದ್ಯಗಳನ್ನು ಮೊಬೈಲ್‌ನಲ್ಲಿ ಲೈವ್ ಆಗಿ, ಫ್ರೀಯಾಗಿ ನೋಡುವುದು ಹೇಗೆ ಎಂಬ ಪ್ರಶ್ನೆ  ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಕಾಡುತ್ತಿದೆ.

ಇತ್ತೀಚಿಗೆ ನಡೆದ ಐಪಿಎಲ್ ಪಂದ್ಯಗಳನ್ನು ನಾವು ಮೊಬೈಲ್‌ನಲ್ಲಿ ಜಿಯೋ ಸಿನಿಮಾ ಆ್ಯಪ್​ ಮೂಲಕ ಫ್ರೀಯಾಗಿ ನೋಡಿದ್ದೆವು. ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್​ನಲ್ಲಿ ನೋಡುತ್ತಿದ್ದೇವು. ಆದ್ರೆ ಟಿ20 ವಿಶ್ವಕಪ್ ಪಂದ್ಯಗಳನ್ನು ಜಿಯೋ ಸಿನಿಮಾದಲ್ಲಿ ನೋಡಲು ಸಾಧ್ಯವಿಲ್ಲ.

ಹಾಗಾದ್ರೆ ವಿಶ್ವಕಪ್ ಪಂದ್ಯಗಳನ್ನು ಫ್ರೀಯಾಗಿ ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ? ಮೊಬೈಲ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಫ್ರೀಯಾಗಿ ವೀಕ್ಷಿಸಲು ನೀವು ಡಿಸ್ನಿ ಹಾಟ್ ಸ್ಟಾರ್‌ ಆ್ಯಪ್​​ ಡೌನ್​ಲೊಡ್ ಮಾಡಬೇಕಾಗುತ್ತದೆ. ಈ ಬಾರಿ ಟಿ20 ವಿಶ್ವಕಪ್ ಪ್ರಸಾರದ ಹಕ್ಕನ್ನು ಡಿಸ್ನಿ ಹಾಟ್ ಸ್ಟಾರ್‌ ಖರೀದಿಸಿದೆ. ಉಳಿದಂತೆ ಸ್ಟಾರ್ ಸ್ಪೋರ್ಟ್ಸ್​ನಲ್ಲಿ ಟಿವಿಯಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ಕ್ರಿಕೆಟ್ ಪ್ರಿಯರಿಗೆ ಸಂತಸದ ಸುದ್ದಿ ನೀಡಿರುವ ಡಿಸ್ನಿ ಹಾಟ್ ಸ್ಟಾರ್‌, ಎಲ್ಲಾ ವಿಶ್ವಕಪ್ ಪಂದ್ಯಗಳನ್ನು ಸಂಪೂರ್ಣ ಉಚಿತವಾಗಿ ವೀಕ್ಷಿಸಲು ಲಭ್ಯವಿರುತ್ತದೆ ಎಂದು ಘೋಷಿಸಿದೆ. ನೀವು ಫ್ರೀಯಾಗಿ ಪಂದ್ಯ ವೀಕ್ಷಿಸಲು ಡಿಸ್ನಿ ಹಾಟ್​ಸ್ಟಾರ್ ಆಪ್ ಡೌನ್​ಲೋಡ್ ಮಾಡಿಕೊಳ್ಳಬೇಕು ಅಷ್ಟೆ. ಆ್ಯಪ್​ನ ಚಂದದಾರರಾಗಬೇಕಿಲ್ಲ. ಬೇರೆ ಯಾವುದೇ ರೀತಿಯಾಗಿ ಹಣ ಪಾವತಿಸಬೇಕಿಲ್ಲ. ನೀವು ಅಭ್ಯಾಸ ಪಂದ್ಯಗಳನ್ನು ಸಹ ಲೈವ್ ಆಗಿ ವೀಕ್ಷಿಸಬಹುದು. ಭಾರತ ತಂಡ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಆ ನಂತರ ಟಿ20 ವಿಶ್ವಕಪ್ 2024 ರ ರೋಚಕ ಪ್ರಯಾಣ ಆರಂಭವಾಗಲಿದೆ.

ಇದನ್ನೂ ಓದಿ : ಬಾಗಲಕೋಟೆಯಲ್ಲಿ ಭಯಾನಕ ಕೊ*ಲೆ : ಯುವತಿಯ ರುಂಡ-ಮುಂಡ ಬೇರ್ಪಡಿಸಿರುವ ಹಂತಕರು..!

 

 

 

 

 

 

Leave a Comment

DG Ad

RELATED LATEST NEWS

Top Headlines

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್

Live Cricket

Add Your Heading Text Here