Download Our App

Follow us

Home » ಕ್ರೀಡೆ » ಆಸೀಸ್ ವೇಗಿಗಳ ಆರ್ಭಟಕ್ಕೆ ಟೀಂ ಇಂಡಿಯಾ ತತ್ತರ – ಬ್ಯಾಟಿಂಗ್ ಪರೇಡ್.. 185ಕ್ಕೆ ಆಲೌಟ್!

ಆಸೀಸ್ ವೇಗಿಗಳ ಆರ್ಭಟಕ್ಕೆ ಟೀಂ ಇಂಡಿಯಾ ತತ್ತರ – ಬ್ಯಾಟಿಂಗ್ ಪರೇಡ್.. 185ಕ್ಕೆ ಆಲೌಟ್!

ಸಿಡ್ನಿ : ಆಸ್ಟೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್​-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್​ನಲ್ಲಿ ಮೊದಲ ದಿನವೇ ಭಾರತ ಮುಗ್ಗರಿಸಿದೆ. ಆಸೀಸ್​ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ 185 ರನ್​ಗೆ ಸರ್ವ ಪತನ ಕಂಡಿದೆ. ಇಡೀ ತಂಡದಲ್ಲಿ ಯಾವೊಬ್ಬ ಭಾರತೀಯ ಬ್ಯಾಟರ್ ಕೂಡ ಅರ್ಧಶತಕ ಗಳಿಸಿಲ್ಲ. ವಿಕೆಟ್ ಕೀಪರ್ ರಿಷಭ್ ಪಂತ್ 40 ರನ್​ಗಳಿಸಿದ್ದೇ ಗರಿಷ್ಠ ಸ್ಕೋರ್. ರವೀಂದ್ರ ಜಡೇಜಾ 26 ರನ್​ ಹಾಗೂ 10ನೇ ಬ್ಯಾಟರ್ ಆಗಿದ್ದ ನಾಯಕ ಬುಮ್ರಾ 22 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಬ್ಯಾಟಿಂಗ್ ಪರೇಡ್ ನಡೆಸಿದ ಟೀಂ ಇಂಡಿಯಾ ಆಟಗಾರರು – ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್​ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಕನ್ನಡಿಗ ಕೆ.ಎಲ್​ ರಾಹುಲ್ ಕೇವಲ 4 ರನ್​ಗೆ ಪೆವಿಲಿಯನ್​ಗೆ ಮರಳಿದರು. ಬಳಿಕ ಕಳೆದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್​ಗಳಲ್ಲಿ ಅರ್ಧಶತಕ ಸಿಡಿಸಿದ್ದ ಜೈಸ್ವಾಲ್ ಕೂಡ 10 ರನ್​ಗಳಿಸಿ ಬೋಲ್ಯಾಂಡ್​ಗೆ ವಿಕೆಟ್ ಒಪ್ಪಿಸಿದರು.

ಕೊನೆ ಟೆಸ್ಟ್​​ನಲ್ಲಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದ ಶುಭ್​ಮನ್​ ಗಿಲ್ 20 ರನ್​ಗಳಿಸಿ​ ಭೋಜನ ವಿರಾಮದ ಕೊನೆಯ ಎಸೆತದಲ್ಲಿ ಲಿಯಾನ್ ಬೌಲಿಂಗ್​ನಲ್ಲಿ ಸ್ಲಿಪ್​ ಫೀಲ್ಡರ್​ ಕೈಗೆ ಕ್ಯಾಚ್​ ನೀಡಿ ಔಟಾದರು. ದೌರ್ಬಲ್ಯ ಮೆಟ್ಟಿ ನಿಂತು 69 ಎಸೆತಗಳನ್ನು ತಾಳ್ಮೆಯಿಂದ ಎದುರಿಸಿದ್ದ ವಿರಾಟ್ ಕೊಹ್ಲಿ, ಈ ಪಂದ್ಯದಲ್ಲೂ ಮತ್ತದೇ ತಪ್ಪು ಮಾಡಿ ವಿಕೆಟ್ ಕೈಚೆಲ್ಲಿದರು. ಬೊಲ್ಯಾಂಡ್ ಎಸೆತ ಔಟ್​ ಸೈಡ್ ಆಫ್​ ಸ್ಟಂಪ್​ ಎಸೆತವನ್ನ ಆಡಲು ಹೋಗಿ ಎಡ್ಜ್​ ಆಗಿ ಕ್ಯಾಚ್ ಔಟ್ ಆದರು.

ಬಳಿಕ ಜಡೇಜಾ ಹಾಗೂ ರಿಷಭ್ ಪಂತ್​ 48 ರನ್​ಗಳ ಜೊತೆಯಾಟ ನಡೆಸಿದರು. 98 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 40 ರನ್​ಗಳಿಸಿದ್ದ ಪಂತ್ ಎಂದಿನಂತೆ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಸುಲಭವಾಗಿ ಕ್ಯಾಚ್ ನೀಡಿ ಔಟಾದರು. ಇವರ ವಿಕೆಟ್​ನೊಂದಿಗೆ ಭಾರತದ ಪತನಕ್ಕೆ ಕಾರಣವಾಯಿತು. ನಂತರದ ಎಸೆತದಲ್ಲಿ ನಿತೀಶ್ ರೆಡ್ಡಿ ಖಾತೆ ತೆರೆಯದೇ ಗೋಲ್ಡನ್ ಡಕ್ ಆದರೆ, ವಾಷಿಂಗ್ಟನ್ ಸುಂದರ್ 30 ಎಸೆತಗಳಲ್ಲಿ 14, ಪ್ರಸಿದ್ಧ ಕೃಷ್ಣ 3 ರನ್​ಗಳಿಗೆ ಔಟಾದರು, ನಾಯಕ ಬುಮ್ರಾ 17 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 22 ರನ್​ಗಳಿಸಿದರು.

ಆಸ್ಟ್ರೇಲಿಯಾ ಪರ ಸ್ಕಾಟ್ ಬೊಲ್ಯಾಂಡ್ 31ಕ್ಕೆ4 , ಮಿಚೆಲ್ ಸ್ಟಾರ್ಕ್​ 49ಕ್ಕೆ 3, ಪ್ಯಾಟ್ ಕಮಿನ್ಸ್ 37ಕ್ಕೆ 2 ಹಾಗೂ ನೇಥನ್ ಲಿಯಾನ್ 19ಕ್ಕೆ 1ವಿಕೆಟ್ ಪಡೆದರು.

ಇದನ್ನೂ ಓದಿ : 450 ಕೋಟಿ ​ಹಗರಣ – ಶುಭ್​ಮನ್ ಗಿಲ್ ಸೇರಿ ನಾಲ್ವರು ಸ್ಟಾರ್ ಕ್ರಿಕೆಟಿಗರಿಗೆ CID ಸಮನ್ಸ್!

Leave a Comment

DG Ad

RELATED LATEST NEWS

Top Headlines

ಮಾಲೂರು ತಹಶೀಲ್ದಾರ್​​​​ ಮತ್ತೊಂದು ಕರ್ಮಕಾಂಡ ರಿವೀಲ್​ – 8 ಕೋಟಿ ಮೌಲ್ಯದ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ!

ಕೋಲಾರ : ಮಾಲೂರು ತಹಶೀಲ್ದಾರ್​​​​ ರಮೇಶ್ ಕುಮಾರ್​​ ಅವರ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಇತ್ತೀಚೆಗಷ್ಟೇ 100 ಕೋಟಿ ಹಗರಣದ ಆರೋಪ ಹೊತ್ತಿದ್ದ ತಹಶೀಲ್ದಾರ್​​​​ ರಮೇಶ್​ ಕುಮಾರ್​​ ವಿರುದ್ಧ

Live Cricket

Add Your Heading Text Here