Download Our App

Follow us

Home » ಅಪರಾಧ » ಶಿವಮೊಗ್ಗ : ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಟೆಂಡೆಂಟ್ ಚಂದ್ರಶೇಖರ್ ಆತ್ಮಹ*ತ್ಯೆ..!

ಶಿವಮೊಗ್ಗ : ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಟೆಂಡೆಂಟ್ ಚಂದ್ರಶೇಖರ್ ಆತ್ಮಹ*ತ್ಯೆ..!

ಶಿವಮೊಗ್ಗ : ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಟೆಂಡೆಂಟ್ ಚಂದ್ರಶೇಖರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇಲಾಖಾ ಸಚಿವರು ಹಾಗೂ ಅಧಿಕಾರಿಗಳ ಹೆಸರು ಬರೆದಿಟ್ಟು ಚಂದ್ರಶೇಖರ್ ಸೂಸೈಡ್ ಮಾಡಿಕೊಂಡಿದ್ದಾರೆ.

ಚಂದ್ರಶೇಖರ್ ಶಿವಮೊಗ್ಗದ ವಿನೋಬನಗರದ ಕೆಂಚಪ್ಪ ಲೇಔಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ​ಚಂದ್ರಶೇಖರ್ ಡೆತ್​ನೋಟ್​ನಲ್ಲಿ ಬೆಚ್ಚಿಬೀಳೋ ಹಗರಣ ಬಯಲಾಗಿದೆ. MPMನಲ್ಲಿ ಚಂದ್ರಶೇಖರ್ ಸ್ಯಾಲರಿ ಡಿಪಾರ್ಟ್​ಮೆಂಟ್​ನಲ್ಲಿದ್ದರು, ನಿಗಮದಲ್ಲಿ 187 ಕೋಟಿ ಹಗರಣಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರಿಗೆ ಸಿಕ್ಕ ಡೆತ್​ನೋಟ್​ನಲ್ಲಿ ಬ್ರಹ್ಮಾಂಡ ಹಗರಣದ ಉಲ್ಲೇಖವಾಗಿದೆ.

187 ಕೋಟಿ ಮೌಲ್ಯದ ಹಗರಣವನ್ನು ಚಂದ್ರಶೇಖರ್ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. 85 ಕೋಟಿ ರೂ. ಹಣವನ್ನು ಕಾನೂನು ಬಾಹಿರವಾಗಿ ವರ್ಗಾಯಿಸಿದ್ದಾರೆ, ಅವರು ಮಾಡಿದ ತಪ್ಪನ್ನು ತಮ್ಮ ಮೇಲೆ ಹಾಕಲು ಹೊರಟಿದ್ದಾರೆ ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆ. 6 ಪುಟಗಳ ಡೆತ್ ನೋಟ್​ನಲ್ಲಿ ಮ್ಯಾನೇಜಿಂಗ್​​ ಡೈರೆಕ್ಟರ್​​ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್ ಉನಗಣ್ಣನವರ್, ಯೂನಿಯನ್​ ಬ್ಯಾಂಕ್​​ ಚೀಫ್​ ಮ್ಯಾನೇಜರ್​​​ ಶುಚಿಸ್ಮಿತ ರಾವತ್​​​ ಹೆಸರನ್ನು ಉಲ್ಲೇಖಿಸಿದ್ದಾರೆ. ಐಪಿಸಿ ಸೆಕ್ಷನ್​​ 306ರ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ.

85 ಕೋಟಿ ಹಣ ವರ್ಗಾವಣೆಗೆ ನಾನು ಕಾರಣ ಅಲ್ಲ, ಸಚಿವರ ಮೌಖಿಕ ಸೂಚನೆ ಮೇರೆಗೆ ಉಪಖಾತೆ ತೆರೆಯಲಾಗಿತ್ತು. ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್​ನಲ್ಲಿ ಸಬ್-ಅಕೌಂಟ್ ಓಪನ್ ಮಾಡಿ ನಂತರ ನಿಗಮದ ಅಕೌಂಟ್​ನನ್ನು ಎಂಜಿ ರೋಡ್​ಗೆ ವರ್ಗಾಯಿಸಲಾಗಿದೆ. ಮಾರ್ಚ್ 4 ರಂದು 25 ಕೋಟಿ, 6ರಂದು 25 ಕೋಟಿ ವರ್ಗಾಯಿಸಲಾಗಿದೆ. ಮಾರ್ಚ್ 21ರಂದು 44 ಕೋಟಿ ವರ್ಗಾಯಿಸಲಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ.

ಜೊತೆಗೆ ಖಜಾನೆಯಿಂದ 43.33 ಕೋಟಿ, 21ರಂದು 50 ಕೋಟಿ ಟ್ರಾನ್ಸ್​ಫರ್ ಆಗಿದೆ ಎಂದು ಡೆತ್​ನೋಟ್​ನಲ್ಲಿ ಚಂದ್ರಶೇಖರ್ ಸಂಪೂರ್ಣ ವ್ಯವಹಾರದ ಮಾಹಿತಿ ಬರೆದಿದ್ದಾರೆ. ಒತ್ತಡ ಹೇರಿ ತಮ್ಮಿಂದ ಚೆಕ್ ಬರೆಸಲಾಗಿದೆ ಎಂದು ನಿಗಮದ ಅಧಿಕಾರಿಗಳ ಮೇಲೆ ಚಂದ್ರಶೇಖರ್ ಆರೋಪ ಮಾಡಿದ್ದಾರೆ.

 

ಇದನ್ನೂ ಓದಿ : ಕಲಬುರಗಿಯಲ್ಲಿ ಬೈಕ್-ಕೆಕೆಆರ್​ಟಿಸಿ ಬಸ್ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಮೂವರು ಸಾ*ವು..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here