ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಬಹುತೇಕ ಎಲ್ಲಾ ಸ್ಪರ್ಧಿಗಳ ಹೆಸರು ರಿವೀಲ್ ಆಗಿದ್ದು, ಒಬ್ಬೊಬ್ಬರೇ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಬಿಗ್ ಬಾಸ್ನ ಪ್ರತಿ ಸೀಸನ್‌ನಲ್ಲೂ ಹೈಲೆಟ್ ಎಂದರೆ ಕಿಚ್ಚ ಸುದೀಪ್ ಅವರ ಹೊಸ ಲುಕ್, ಹೇರ್ ಸ್ಟೈಲ್ ಮತ್ತು ಪ್ರಮುಖವಾಗಿ ಅವರು ಧರಿಸುವ ಸ್ಟೈಲೀಶ್ ಉಡುಗೆ. ಹೌದು..ಈ ಬಾರಿ ಕೂಡ ಕಿಚ್ಚನ ಡ್ರೆಸ್ ಸ್ಟೈಲ್ನದ್ದೇ ಎಲ್ಲೆಡೆ ಚರ್ಚೆಯಾಗುತ್ತಿದೆ.
ಪ್ರತಿ ಬಾರಿ ಶೋ ಮಾಡುವಾಗ ಡಿಸೈನರ್ಸ್ ತುಂಬಾ ಸಮಯ ಕೊಟ್ಟು ನಿಗಾ ವಹಿಸಿ ಸುದೀಪ್ ಅವರಿಗಾಗಿ ಕೆಲಸ ಮಾಡುತ್ತಾರಂತೆ. ಯಾವ ರೀತಿ ಕಾಸ್ಟ್ಯೂಮ್ ಇರಲಿದೆ ಅನ್ನೋದು ಎಷ್ಟೋ ಬಾರಿ ಸುದೀಪ್ ಅವರಿಗೆ ಗೊತ್ತಿರುವುದಿಲ್ಲ ಎಂದು ಇತ್ತೀಚೆಗೆ ಸುದೀಪ್ ಅವರೇ ಹೇಳಿಕೊಂಡಿದ್ದಾರೆ.
ಅದರಂತೆ ಇಂದು ಬಿಗ್ ಬಾಸ್ 11ರ ಸೀಸನ್ಗೆ ಅದ್ದೂರಿ ಚಾಲನೆ ಸಿಕ್ಕಿದ್ದು, ಸದ್ಯ ನಡೆಯುತ್ತಿರೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಹೊಸ ಲುಕ್ನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚನ ನಯಾ ಖದರ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಿಚ್ಚನ ಫೋಟೋ ಸಖತ್ ವೈರಲ್ ಆಗುತ್ತಿದೆ. ಇನ್ನು ಕಿಚ್ಚ ಧರಿಸೋ ಒಂದೊಂದು ಕಾಸ್ಟ್ಯೂಮ್ ಲಕ್ಷಾಂತರ ರೂ. ಇರಲಿದೆ ಎನ್ನಲಾಗಿದೆ.
ಇದನ್ನೂ ಓದಿ : ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಟ ಧರ್ಮ ಕೀರ್ತಿ ರಾಜ್, ನಟಿ ಅನುಷಾ ರೈ..!