ಬಿಗ್ ಬಾಸ್ ಸೀಸನ್ 11ರ ಓಪನಿಂಗ್ ಅದ್ದೂರಿಯಾಗಿ ನಡೆಯುತ್ತಿದ್ದು, ಕಿಚ್ಚ ಸುದೀಪ್ ಅವರು ಹೊಸ ಸೀಸನ್ನ ಸ್ಪರ್ಧಿಗಳಿಗೆ ಸ್ವಾಗತ ಕೋರಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ ಧರ್ಮ ಕೀರ್ತಿರಾಜ್ ಹಾಗೂ ನಟಿ ಅನುಷಾ ರೈ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಹಲವು ವರ್ಷಗಳಿಂದ ಧರ್ಮ ಕೀರ್ತಿ ರಾಜ್ ಅವರು ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಅವರ ತಂದೆ ಕೀರ್ತಿರಾಜ್ ಸ್ಯಾಂಡಲ್ವುಡ್ನಲ್ಲಿ ಫೇಮಸ್ ವಿಲನ್. ಆದರೆ ಧರ್ಮ ಅವರು ಲವರ್ಬಾಯ್ ರೀತಿಯ ಪಾತ್ರಗಳಿಂದ ಜನಪ್ರಿಯತೆ ಪಡೆದರು. ನವಗ್ರಹ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ ಜೊತೆ ಜೋಡಿಯಾಗಿ ನಟಿಸಿದ್ದರು.
ಅನುಷಾ ರೈ ಅವರು ಆರಂಭದಲ್ಲಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಆ ಬಳಿಕ ದೊಡ್ಡ ಪರದೆಗೆ ಕಾಲಿಟ್ಟರು. ಧೈರ್ಯಂ ಸರ್ವತ್ರ ಸಾಧನಂ, ಬಿಎಂಡಬ್ಲ್ಯೂ, ಅಬ್ಬಬ್ಬಾ, ಖಡಕ್, ರೈಡರ್, ದಮಯಂತಿ ಮೊದಲಾದ ಸಿನಿಮಾಗಳಲ್ಲಿ ಅವರು ಸಣ್ಣ-ಪುಟ್ಟ ಪಾತ್ರ ಮಾಡಿರುವ ಅನುಷಾ ರೈ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ : ಶಿವಣ್ಣ, ಉಪೇಂದ್ರ-ರಾಜ್ ಬಿ ಶೆಟ್ಟಿ ನಟನೆಯ ’45’ ಸಿನಿಮಾದ ಚಿತ್ರೀಕರಣ ಮುಕ್ತಾಯ..!
Post Views: 128