Download Our App

Follow us

Home » ಅಪರಾಧ » ಆನ್​​ಲೈನಲ್ಲಿ ಲಕ್ಷ-ಲಕ್ಷ ಹಣ ಕಳ್ಕೊಂಡು ಸಾಲ ತೀರಿಸಲು ಈ ಭೂಪ ಮಾಡಿದ್ದೇನು ಗೊತ್ತಾ?

ಆನ್​​ಲೈನಲ್ಲಿ ಲಕ್ಷ-ಲಕ್ಷ ಹಣ ಕಳ್ಕೊಂಡು ಸಾಲ ತೀರಿಸಲು ಈ ಭೂಪ ಮಾಡಿದ್ದೇನು ಗೊತ್ತಾ?

ಹುಬ್ಬಳ್ಳಿ : ಆನ್​​ಲೈನಲ್ಲಿ ಲಕ್ಷ-ಲಕ್ಷ ಹಣ ಕಳೆದುಕೊಂಡಿದ್ದ ಹುಬ್ಬಳ್ಳಿಯ ವ್ಯಕ್ತಿಯೊಬ್ಬ ಸಾಲ ತೀರಿಸಲು ಬ್ಯಾಂಕ್ ದರೋಡೆ ಮಾಡಿದ್ದಾನೆ. ಗೋಪನಕೊಪ್ಪದ ಮಂಜುನಾಥ ಹಬೀಬ್ ದರೋಡೆ ಮಾಡಿದಾತ.

ಯೂಟ್ಯೂಬ್ ನೋಡಿ ಬ್ಯಾಂಕ್ ದರೋಡೆಗೆ ಪ್ಲ್ಯಾನ್ ಮಾಡಿದ್ದ. ಷೇರು ಮಾರುಕಟ್ಟೆಯಲ್ಲೂ ಹಣ ಹೂಡಿಕೆ ಮಾಡಿ‌ ಲಾಸ್ ಆಗಿದ್ದ. ನಿತ್ಯ ಸಾಲಗಾರರ ಕಾಟ ತಾಳಲಾರದೇ ಹುಬ್ಬಳ್ಳಿಯ‌ APMC ಬಳಿ ಇರೋ ಯೂನಿಯನ್ ಬ್ಯಾಂಕ್ ದರೋಡೆ ಮಾಡಲು ಪ್ಲ್ಯಾನ್ ಮಾಡಿದ್ದ.

ಸಂಜೆ ಸುಮಾರಿಗೆ ಬ್ಯಾಂಕ್​ಗೆ ನುಗ್ಗಿ ಸಿಬ್ಬಂದಿಗಳಿಗೆ ಚಾಕು ತೋರಿಸಿ‌ ದರೋಡೆಗೆ ಪ್ಲ್ಯಾನ್ ಮಾಡಿದ್ದ. ಕೂಡಲೇ ಅಲರ್ಟ್ ಆದ ಸಿಬ್ಬಂದಿ, ಪೊಲೀಸರಿಗೆ‌ ಮಾಹಿತಿ ನೀಡಿದ್ದಾರೆ. ಸದ್ಯ ಹುಬ್ಬಳ್ಳಿಯ ನವನಗರ ಪೊಲೀಸರು ಮಂಜುನಾಥ ಹಬೀಬ್​ನನ್ನು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ದೊಡ್ಡ ಗಣಪತಿ ದೇಗುಲದಲ್ಲಿ ವಿಘ್ನನಿವಾರಕನಿಗೆ ವಿಶೇಷ ಅಲಂಕಾರ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here