Download Our App

Follow us

Home » ರಾಜಕೀಯ » ರಾಜ್ಯದಲ್ಲಿ ಜೋರಾಗ್ತಿದೆ ರಾಜಕೀಯ ರಂಗಿನಾಟ – ಪಾದಯಾತ್ರೆ vs ಸಮಾವೇಶಕ್ಕೆ ಕೈ-ಕಮಲ ಸಜ್ಜು..!

ರಾಜ್ಯದಲ್ಲಿ ಜೋರಾಗ್ತಿದೆ ರಾಜಕೀಯ ರಂಗಿನಾಟ – ಪಾದಯಾತ್ರೆ vs ಸಮಾವೇಶಕ್ಕೆ ಕೈ-ಕಮಲ ಸಜ್ಜು..!

ಬೆಂಗಳೂರು : ಮುಡಾ ಹಗರಣದ ವಿರುದ್ಧ ಹೋರಾಟ ಮಾಡ್ತಿರುವ ರಾಜ್ಯ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆ ವಿಚಾರದಲ್ಲಿ ಮನಸ್ತಾಪ ಏರ್ಪಟ್ಟು ನಾವು ಪಾದಯಾತ್ರೆ ಬರೋದಿಲ್ಲ ಅಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಮನವೊಲಿಕೆಯೂ ಯಶಸ್ವಿಯಾಗಿದೆ. ನಾಳೆ ಬೆಳಗ್ಗೆಯಿಂದ ಪಾದಯಾತ್ರೆಗೆ ಚಾಲನೆ ಸಿಗಲಿದೆ.

ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ವರ್ಷಕ್ಕೆ ಹಗರಣಗಳು ಹೆಗಲೇರಿದ್ದು, ವಾಲ್ಮೀಕಿ ಹಾಗೂ ಮುಡಾ ಹಗರಣಗಳು ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ. ವಿಪಕ್ಷಗಳು ಇದೇ ಅಸ್ತ್ರ ಹಿಡಿದು ಚಕ್ರವ್ಯೂಹ ರಚಿಸಿದ್ದು, ಸಿಎಂ ಸಿದ್ದರಾಮಯ್ಯನ್ನು ಇಕ್ಕಟ್ಟಿಗೆ ಸಿಲುಕಿಸಲು ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆಗೆ ಸಜ್ಜಾಗಿದೆ.

ಮತ್ತೊಂದೆಡೆ ಕಾಂಗ್ರೆಸ್ ಕೂಡ ಪ್ರತಿದಿನವೂ ಜನಾಂದೋಲನ ಕಾರ್ಯಕ್ರಮ ಮಾಡುತ್ತಾ ಬಿಜೆಪಿ-ಜೆಡಿಎಸ್​ ಪಾದಯಾತ್ರೆಗೆ ಕೌಂಟರ್ ಕೊಡಲು ತಂತ್ರ ರೂಪಿಸಿದೆ. ಬಿಜೆಪಿ ಪಾದಯಾತ್ರೆಗೆ ದಳಪತಿ ಸಾಥ್​ ನೀಡುತ್ತಿದ್ದಂತೆ ಡಿಸಿಎಂ ಡಿಕೆಶಿ ಅಲರ್ಟ್​ ಆಗಿದ್ದು, ಕಳೆದ ರಾತ್ರಿ ಏಕಾಏಕಿ ಸುದ್ದಿಗೋಷ್ಟಿ ನಡೆಸಿದ ಡಿಕೆಶಿ ದೊಸ್ತಿ ಪಾದಯಾತ್ರೆಗೆ ಕೌಂಟರ್ ನೀಡಿದ್ದಾರೆ.

ಬಿಜೆಪಿ ಪಾದಯಾತ್ರೆಯ ಮಾರ್ಗದಲ್ಲಿ ಇಂದಿನಿಂದ ನಾವೂ ಕೂಡ ಸಮಾವೇಶ ಮಾಡುತ್ತೇವೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರಿನಲ್ಲಿ ಸಮಾವೇಶ ಮಾಡುತ್ತೇವೆ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಕೇಳುತ್ತೇವೆ, ಉತ್ತರ ಕೊಡಲಿ ಅಂತ ಡಿಕೆಶಿ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ಹಾಗೂ ಬೆಂಗಳೂರಿನಲ್ಲಿ ಪಾದಯಾತ್ರೆಗೆ ಅವಕಾಶ ಇಲ್ಲ ಎಂದಿದ್ದಾರೆ.

ನಾಳೆಯಿಂದ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್​ ಪಾದಯಾತ್ರೆ ಶುರುವಾಗಲಿದೆ. ಆದ್ರೆ ಇವತ್ತಿನಿಂದಲೇ ಪ್ರತಿ ಹೆಜ್ಜೆಯಲ್ಲೂ ಪಾದಯಾತ್ರೆಗೆ ಟಕ್ಕರ್​ ಕೊಡಲು ಕಾಂಗ್ರೆಸ್ ನಾಯಕುರ ಅಖಾಡಕ್ಕೆ ಇಳಿಯಲಿದ್ದಾರೆ. ಇವತ್ತು ಬಿಡದಿಯಲ್ಲಿ ಬೃಹತ್ ಸಭೆ ನಡೆಸುವ ಮೂಲಕ ತಿರುಗೇಟು ನೀಡಲು ಕೈ ಪಡೆ ಸಜ್ಜಾಗಿದೆ.

ಇದನ್ನೂ ಓದಿ :ಬೆಂಗಳೂರು : ಕ್ಲಾಸ್​ಮೇಟ್‌ಗಳಿಂದಲೇ ಅಶ್ಲೀಲ ಮೆಸೇಜ್‌.. ಮನನೊಂದ ಗೃಹಿಣಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ..!  

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here