Download Our App

Follow us

Home » ರಾಜ್ಯ » SSLC ಫಲಿತಾಂಶ ಪ್ರಕಟ – ಉಡುಪಿ ಜಿಲ್ಲೆ ಪ್ರಥಮ.. ರಿಸಲ್ಟ್ ನೋಡಲು ಈ ವೆಬ್​ಸೈಟ್​ಗೆ ಭೇಟಿ ನೀಡಿ..!

SSLC ಫಲಿತಾಂಶ ಪ್ರಕಟ – ಉಡುಪಿ ಜಿಲ್ಲೆ ಪ್ರಥಮ.. ರಿಸಲ್ಟ್ ನೋಡಲು ಈ ವೆಬ್​ಸೈಟ್​ಗೆ ಭೇಟಿ ನೀಡಿ..!

ರಾಜ್ಯದಲ್ಲಿ SSLC ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ರಾಜ್ಯದ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬಹು ದಿನಗಳಿಂದ ಕಾಯುತ್ತಿದ್ದ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಫಲಿತಾಂಶವನ್ನು ಪ್ರಕಟಿಸಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀಯವರು ಈ ಬಾರಿಯ ಎಸ್​ಎಸ್​ಎಲ್​ಸಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಇವರ ಜೊತೆಗೆ ನಿರ್ದೇಶಕ ಗೋಪಾಲಕೃಷ್ಣ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ರಿತೇಶ್ ಕುಮಾರ್ ಸಿಂಗ್ ಜೊತೆಯಾಗಿ ಪತ್ರಿಕಾಗೋಷ್ಠಿ ನಡೆಸಿ ​ಫಲಿತಾಂಶ ಅನೌನ್ಸ್​ ಮಾಡಿದ್ದಾರೆ. ವಿದ್ಯಾರ್ಥಿಯ ನೋಂದಾಯಿತ ಮೊಬೈಲ್​ ನಂಬರ್​ಗೂ ಸಹ ಫಲಿತಾಂಶದ ವಿವರದ ಎಸ್​ಎಂಎಸ್​ ಕಳುಹಿಸಲಾಗುವುದು ಎಂದು ಮಂಜುಶ್ರೀ ಅವರು ತಿಳಿಸಿದ್ದಾರೆ.

ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ-1ನ್ನು ಮಾರ್ಚ್‌ 25 ರಿಂದ ಏಪ್ರಿಲ್ 6, 2024 ರವರೆಗೆ 4,41,910 ಬಾಲಕರು ಮತ್ತು 4,28,058 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ಹೊರಬಿದ್ದ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, 6,34,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಶೇ.73.40ಷ್ಟು ಫಲಿತಾಂಶ ಬಂದಿದೆ.

2024ನೇ ಸಾಲಿನ SSLC ವಿದ್ಯಾರ್ಥಿಗಳು ನೀವಾಗಿದ್ದರೆ, ಫಲಿತಾಂಶ ನೋಡಲು ಯಾವುದೇ ಗೊಂದಲ ಬೇಡ. ಆರಾಮವಾಗಿ ಫಲಿತಾಂಶವನ್ನು ಪರಿಶೀಲಿಸಬಹುದು.

https://karresults.nic.in

sslc.karnataka.gov.in

kseab.karnataka.gov.in

ಮೇಲಿನ ಮೂರು ವೆಬ್​ಸೈಟ್​ನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಪರಿಶೀಲಿಸಬಹುದಾಗಿದೆ. ಇವು ಮೂರು ಸರ್ಕಾರಿ ವೆಬ್​ಸೈಟ್​ಗಳಾಗಿವೆ.

ಇದನ್ನೂ ಓದಿ : ಪ್ರಜ್ವಲ್​​ ರೇವಣ್ಣ ಪೆನ್​ಡ್ರೈವ್​​​ ಕೇಸ್​ – ದೇವರಾಜೇಗೌಡ, ಕಾರ್ತಿಕ್​ಗೆ ಮತ್ತೆ SIT ನೋಟಿಸ್..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here