Download Our App

Follow us

Home » ಸಿನಿಮಾ » ಅಮೆರಿಕದತ್ತ ಹೊರಡುವ ಮುನ್ನ ಯುವ ಪತ್ನಿ ಶ್ರೀದೇವಿ ಹೇಳಿದ್ದೇನು? ಡಿವೋರ್ಸ್ ಕಥೆ ಏನಾಯ್ತು?

ಅಮೆರಿಕದತ್ತ ಹೊರಡುವ ಮುನ್ನ ಯುವ ಪತ್ನಿ ಶ್ರೀದೇವಿ ಹೇಳಿದ್ದೇನು? ಡಿವೋರ್ಸ್ ಕಥೆ ಏನಾಯ್ತು?

ಬೆಂಗಳೂರು :  ನಟ ರಾಘವೇಂದ್ರ ರಾಜ್​​ಕುಮಾರ್​ರವರ ಮಗ ಯುವರಾಜ್ ಕುಮಾರ್ ಜೂನ್ 6ನೇ ತಾರೀಖು ಡಿವೋರ್ಸ್​​ಗೆ ಅರ್ಜಿ ಸಲ್ಲಿಸಿ, ಕೋರ್ಟ್​ ಮೆಟ್ಟಿಲೇರಿದ್ದರು. ಮಾತ್ರವಲ್ಲದೆ ಪತ್ನಿಯ ಕುರಿತಾಗಿ ಅನೇಕ ಆರೋಪಗಳನ್ನು ಮಾಡಿದ್ದರು. ಹೀಗಾಗಿ ಫ್ಯಾಮಿಲಿ ಕೋರ್ಟ್​ ಮುಂದಿನ‌ ವಿಚಾರಣೆಯನ್ನು ಜುಲೈ 4ಕ್ಕೆ‌ ಮುಂದೂಡಿತ್ತು. ಅದರಂತೆಯೇ ಇಂದು ವಿಚಾರಣೆ ನಡೆಯಲಿದೆ.

ಈಗಾಗಲೇ ಕಳೆದ 15 ದಿನದಿಂದ ಕರ್ನಾಟಕದಲ್ಲಿದ್ದ ಯುವ ಪತ್ನಿ ಶ್ರೀದೇವಿ ಮತ್ತೆ ಅಮೆರಿಕದತ್ತ ಹೊರಟಿದ್ದಾರೆ. ವಿದೇಶಕ್ಕೆ ಹೊರಡುವ ಮುನ್ನ  ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿರುವ ಶ್ರೀದೇವಿ ಅವರು, ಕಳೆದ 15 ದಿನದಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜೊತೆ ಇದ್ದಾಗ, ನನ್ನ ಖಾಸಗಿ ಬದುಕನ್ನು ಗೌರವಿಸಿ, ನನ್ನ ಘನತೆಯನ್ನು ಕಾಪಾಡುವಲ್ಲಿ, ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತ ನಡೆ ತೋರಿದ ಮಾಧ್ಯಮದವರೂ ಸೇರಿ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ಸತ್ಯ-ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಂಬಿದ್ದೇನೆ, ಅದಕ್ಕಾಗಿ ಹೋರಾಡುವೆ. ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ನಾನು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಉನ್ನತ ಶಿಕ್ಷಣಕ್ಕಾಗಿ ಹಾರ್ವರ್ಡ್​ಗೆ ಹೋಗ್ತೇನೆ, ಅಮೆರಿಕದಲ್ಲಿ ನನ್ನ ಕಾಯಕ ಮುಂದುವರಿಸುವೆ. ಸಮಯ ಬಂದಾಗ ಕರ್ನಾಟಕಕ್ಕೆ ಮತ್ತೆ ಬರುವೆ ಎಂದು ಶ್ರೀದೇವಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಇಂದು ಬಿಜೆಪಿಯ ಮಹತ್ವದ ರಾಜ್ಯ ಕಾರ್ಯಕಾರಣಿ ಸಭೆ – ಹಿರಿಯ ನಾಯಕ ನಿತಿನ್​ ಗಡ್ಕರಿ ಸೇರಿ ಹಲವರು ಭಾಗಿ..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here