Download Our App

Follow us

Home » ಸಿನಿಮಾ » ಚಿತ್ರರಂಗದಲ್ಲಿ ಯಾರ‍್ಯಾರು ನಶೆ ಏರಿಸಿಕೊಂಡು ಬೊಗಳಿದ್ದರೊ ಅವರಿಗೆಲ್ಲ ಶ್ರೀಮುರಳಿ ಸೆಡ್ಡು..!

ಚಿತ್ರರಂಗದಲ್ಲಿ ಯಾರ‍್ಯಾರು ನಶೆ ಏರಿಸಿಕೊಂಡು ಬೊಗಳಿದ್ದರೊ ಅವರಿಗೆಲ್ಲ ಶ್ರೀಮುರಳಿ ಸೆಡ್ಡು..!

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿ ಕಲಾರಸಿಕರ ಮನದಲ್ಲಿ ಇಂದಿಗೂ ನೆಲೆನಿಂತವರು ಡಾ.ರಾಜ್​ಕುಮಾರ್. ಹೌದು, ಈ ಕಾರಣಕ್ಕಾಗಿಯೇ ಇವತ್ತಿಗೂ ದೊಡ್ಮನೆಗೆ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಆದ ವಿಶೇಷ ಗೌರವವಿದೆ. ಅಣ್ಣಾವ್ರ ಫ್ಯಾಮಿಲಿ ಅಂದ್ರೆ ಜನ ಈಗಲೂ ಅಷ್ಟೇ ಗೌರವ ಕೊಡ್ತಾರೆ. ಆದ್ರೆ ಕೆಲ ಕಿಡಿಗೇಡಿಗಳು ರಾಜಣ್ಣನ ಫ್ಯಾಮಿಲಿ ಬಗ್ಗೆ ಆಗಾಗ ನಾಲಿಗೆ ಹರಿಬಿಡ್ತಾರೆ. ಇದೀಗ ಅಣ್ಣಾವ್ರ ಫ್ಯಾಮಿಲಿ ಅಷ್ಟೇ ಬಿಡಿ, ಮುಗೀತು ಅವರ ಕಾಲ, ಎಂದವರಿಗೆ ರಾಜ್​ಕುಮಾರ್​ ಸಂಬಂಧಿಯಾಗಿರುವ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ತಿರುಗೇಟು ನೀಡಿದ್ದಾರೆ.
ದೊಡ್ಮನೆ ಯುಗ ಮುಗಿಯಿತು ಎನ್ನುವ ಮಾತೇ ಇಲ್ಲ. ಈಗ ಹೊಸ ಹುಲಿ ಬರುತ್ತಿದೆ. ಹುಷಾರಾಗಿರಿ ಎಂದು ನಟ ಶ್ರೀಮುರಳಿ ಎಚ್ಚರಿಕೆ ನೀಡಿದ್ದಾರೆ. ‘ಯುವ’ ಹುಲಿ ಬರ್ತಿದೆ ಎನ್ನುವ  ಮೂಲಕ ಶ್ರೀಮುರಳಿ ರಾಜ್​ಕುಮಾರ್​ ಮೊಮ್ಮಗ ಯುವರಾಜ್​ ಕುಮಾರ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಶ್ರೀಮುರಳಿಯವರು ‘ದೊಡ್ಮನೆ ಯುಗ ಮುಗಿಯಿತು ಅನ್ನಬೇಡಿ. ಈಗ ಹೊಸ ಹುಲಿ ಬರುತ್ತಿದೆ. ಹುಷಾರಾಗಿರಿ’ ಎಂದು ಧಗಧಗಿಸಿಸಲು ಕಾರಣವೇನು? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪುನೀತ್ ರಾಜ್‌ಕುಮಾರ್ ಸ್ಯಾಂಡಲ್​ವುಡ್​ನಲ್ಲಿ ಅಣ್ಣಾವ್ರ ಜಾಗವನ್ನು ತುಂಬಲು ಸಜ್ಜಾಗಿದ್ದರು. ಸೇಮ್ ಟು ಸೇಮ್ ಅಣ್ಣಾವ್ರ ರೀತಿ ವಿಭಿನ್ನ ಪಾತ್ರಗಳನ್ನು ಮಾಡುತ್ತ ಚಿತ್ರರಂಗದಲ್ಲಿ ಗುರುತುಸಿಕೊಂಡಿದ್ದರು. ಮಾಸ್, ಕ್ಲಾಸ್, ಫ್ಯಾಮಿಲಿ ಮ್ಯಾನ್, ಆಕ್ಷನ್ ಹೀರೋ, ಲವ್ವರ್ ಬಾಯ್ ಎಲ್ಲವೂ ಅಪ್ಪು ಸಿನಿಮಾಗಳಲ್ಲಿ ಇದ್ದವು. ಪುನೀತ್ ಅವರನ್ನ ಕರುನಾಡ ಮಗನೆಂದೇ ಜನ ಒಪ್ಪಿಕೊಂಡಿದ್ದರು. ಅಪ್ಪು ಅಭಿನಯದ ರಾಜಕುಮಾರ ಸಿನಿಮಾದಲ್ಲಂತೂ ಅಕ್ಷರಶಃ ಪುನೀತ್ ಥೇಟ್ ಅಣ್ಣಾವ್ರನ್ನೇ ಮೈ ಮೇಲೆ ಆವಾಹಿಸಿಕೊಂಡಿದ್ದರು.
ಆದ್ರೆ ವಿಧಿಯ ಆಟ ಬೇರೇನೆ ಆಗಿತ್ತು. ದೇವರು ಅದ್ಯಾಕೊ ಕ್ರೂರಿಯಾಗಿಬಿಟ್ಟ. ಕೆಲವೇ ಕೆಲವು ನಿಮಿಷಗಳಲ್ಲಿ ಅಪ್ಪು ಈ ಲೋಕಕ್ಕೆ ವಿದಾಯ ಹೇಳಬೇಕಾಯಿತು. ಆ ನೋವಲ್ಲಿ ಇಡೀ ದೊಡ್ಮನೆ ಮುಳುಗಿತ್ತು. ರಾಜ್ಯವೇ ಎದೆ ಎದೆ ಬಡಿದುಕೊಂಡಿತು. ರಾಜ್ಯಾದ್ಯಂತ ವಾರಗಟ್ಟಲೆ ಒಲೆ ಊರಿಯಲಿಲ್ಲ. ಅಭಿಮಾನಿಗಳಿಗೆ ಅದೇಷ್ಟೋ ದಿನ ನಿದ್ದೆ ಹತ್ತಲಿಲ್ಲ. ಆ ಕ್ಷಣದಲ್ಲಿ ಎಷ್ಟೋ ಮಂದಿ ಸಾಕು ಈ ಜನ್ಮ ಎಂದಿದ್ದು ಕೂಡ ಸುಳ್ಳಲ್ಲ. ಅಪ್ಪು ಅವರ ಅಗಲಿಕೆಯ ಬಳಿಕ ಕೆಲವು ಕಿಡಿಗೇಡಿಗಳು ಬೊಗಳಲು ಕೂಡ ಆರಂಭಿಸಿದ್ದವು. `ಅಣ್ಣಾವ್ರ ಸಾಮ್ರಾಜ್ಯ ಅಷ್ಟೇ…ಇನ್ನು… ಮುಗೀತು ಬಿಡಿ…’ ಎಂದು ಎಲುಬಿಲ್ಲದ ನಾಲಿಗೆ ಅಲ್ಲಾಡಿದ್ದವು. ಅದಕ್ಕೆ ಈಗ ಉತ್ತರ ಎನ್ನುವಂತೆ ಶ್ರೀಮುರಳಿ ಗುಡುಗಿದ್ದಾರೆ. ‘ಯುವ’  ಹುಲಿ ಬರ್ತಿದೆ, ನೋಡ್ತಾ ಇರಿ ಎಂದು ಹೇಳಿದ್ದಾರೆ.
ಯುವ ರಾಜ್​ಕುಮಾರ್ ಚಿತ್ರರಂಗಕ್ಕೆ ಎಂಟ್ರಿ : ರಾಜ್​ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್​ಕುಮಾರ್ ಮಗ ಯುವ ರಾಜ್​ಕುಮಾರ್​ ಇದೀಗ ‘ಯುವ’ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿದ್ದಾರೆ. ಯುವ ರಾಜ್​ಕುಮಾರ್ ಅವರನ್ನು ಇಂಡಸ್ಟ್ರಿಗೆ ಅದ್ಧೂರಿಯಾಗಿ ಪರಿಚಯಿಸುವ ಆಸೆ ಪುನೀತ್ ರಾಜ್​ಕುಮಾರ್ ಅವರಿಗೂ ಇತ್ತು. ಅಪ್ಪುಗಾಗಿಯೇ ಮಾಡಿದ್ದ ಯುವ ಸಿನಿಮಾ ಕಥೆ ಇದೀಗ ಯುವ ರಾಜ್​ಕುಮಾರ್ ಪಾಲಾಗಿದೆ. ಯುವ ಸಿನಿಮಾವನ್ನು ಆನಂದ್​ ರಾಮ್​ ನಿರ್ದೇಶನ ಮಾಡ್ತಿದ್ರೆ. ಹೊಂಬಾಳೆ ಫಿಲ್ಮ್ಸ್​ ಚಿತ್ರ ನಿರ್ಮಾಣ ಮಾಡ್ತಿದೆ. ​ಯುವ ಸಿನಿಮಾಗಾಗಿ ದೊಡ್ಮನೆ ಅಭಿಮಾನಿಗಳು ಕೂಡ ಕಾಯ್ತಿದ್ದಾರೆ.
ಶ್ರೀಮುರುಳಿ ಹೇಳಿದ್ದು ಇಷ್ಟೇ. ‘ಹೊಸ ಹುಲಿ ಬರುತ್ತಿದೆ. ಹುಷಾರಾಗಿರಿ’ ಎಂದು. ಆದರೆ ಅದರಲ್ಲಿ ಅದೆಷ್ಟೋ ವರ್ಷಗಳ ಕಿಚ್ಚು ಕೆರಳಿತ್ತು. ಮನಸೊಳಗೆ ಹುದುಗಿಸಿಟ್ಟಿದ್ದ ನೋವು, ಅಸಮಾಧಾನ, ಸಂಕಟ ಎಲ್ಲವನ್ನೂ ಅದೊಂದು ಮಾತಿನಲ್ಲಿ ಶ್ರೀಮುರುಳಿ ಹೇಳಿದ್ದಾರೆ. ಅಪ್ಪು ಹೋದ ಮೇಲೆ ನಮ್ಮದೇ ಸಾಮ್ರಾಜ್ಯ ಎಂದು ವಿಕೃತಿ ತೋರಿಸಿದವರಿಗೆ ಮುರುಳಿ ಮರಳಿ ಮರಳಿ ಹೊರಳಿ ಏಳದಂತೆ ಉತ್ತರ ನೀಡಿದ್ದಾರೆ.
ಯುವರಾಜ್‌ಕುಮಾರ್ ಯುವನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಯಾರ‍್ಯಾರು ನಶೆ ಏರಿಸಿಕೊಂಡು ಬೊಗಳಿದ್ದರೊ ಅವರಿಗೆಲ್ಲ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ. ಬಣ್ಣದ ಲೋಕ ಅಂದರೆ ಅಸೂಯೆ, ಕೋಪ, ಅಸಹನೆ ಇದ್ದದ್ದೇ. ಆದರೆ ಅದ್ಯಾವಾಗ ದ್ವೇಷಕ್ಕೆ ತಿರುಗುತ್ತದೋ ಆಗಿನಿಂದಲೇ ಆರಂಭ ರಕ್ತಪಾತದ ಸಂಚು, ಸ್ಕೆಚ್ಚು. ಅಂಥ ದೇಹಗಳಿಗೆ ನೀರಿಳಿಸಲು ಯುವ ಮೈ ಕೊಡವಿ ಎದ್ದು ನಿಂತಿದ್ದಾರೆ. ಅಪ್ಪು ಬಿಟ್ಟು ಹೋದ ಸಿಂಹಾಸನ ಖಾಲಿಯಾಗಿದೆ. ಅದರ ಮೇಲೆ ನೀವೇ ಕೂರಬೇಕು ಎನ್ನುತ್ತಿದ್ದಾರೆ ಜನ. ಬರೀ ಅಪ್ಪು ರಾಜ್ ಅಭಿಮಾನಿಗಳು ಮಾತ್ರ ಅಲ್ಲ. ಸಕಲ ಕನ್ನಡಿಗರು ಇದನ್ನೆ ಜಪ ಮಾಡುತ್ತಿದ್ದಾರೆ.

ಇದನ್ನೂ ಓದಿ : ಪಾಕಿಸ್ತಾನದ ಪರ ಘೋಷಣೆ ನಿಜವೇ ಆಗಿದ್ದರೆ ಅಂಥವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ, ಗಂಭೀರ ಕ್ರಮ ಕೈಗೊಳ್ಳುತ್ತೇವೆ – ಸಿಎಂ ಸಿದ್ದರಾಮಯ್ಯ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here