Download Our App

Follow us

Home » ಮೆಟ್ರೋ » ಬೆಂಗಳೂರಿನ ದೊಡ್ಡ ಗಣಪತಿ ದೇಗುಲದಲ್ಲಿ ವಿಘ್ನನಿವಾರಕನಿಗೆ ವಿಶೇಷ ಅಲಂಕಾರ..!

ಬೆಂಗಳೂರಿನ ದೊಡ್ಡ ಗಣಪತಿ ದೇಗುಲದಲ್ಲಿ ವಿಘ್ನನಿವಾರಕನಿಗೆ ವಿಶೇಷ ಅಲಂಕಾರ..!

ಬೆಂಗಳೂರು : ಕರ್ನಾಟಕದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಯನ್ನು ಕೂರಿಸಿ, ವಿಶೇಷ ಅಲಂಕಾರ ಮಾಡಿ ಗಣಪನನ್ನು ಪೂಜಿಸಲಾಗುತ್ತಿದೆ. ಸರ್ವ ವಿಘ್ನಗಳನ್ನು ನಿವಾರಣೆ ಮಾಡು ಎಂದು ವಿಘ್ನನಿವಾರಕನಲ್ಲಿ ಭಕ್ತರು ಪಾರ್ಥಿನೆ ಸಲ್ಲಿಸುತಿದ್ದಾರೆ.

ಒಂದೆಡೆ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತೊಂದು ಕಡೆ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ಜೋರಾಗಿದೆ. ಅದರಂತೆ ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಸಿದ್ದ ದೊಡ್ಡಗಣಪತಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಪೂಜೆ ಪುನಸ್ಕಾರ ಜರುಗಿದೆ.

200 ರೂ.ಮುಖಬೆಲೆಯ 180 ನೋಟುಗಳನ್ನು ಬಳಸಿ ಗಣೇಶನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ನೋಟು, ನಾಣ್ಯಗಳಿಂದ ದೊಡ್ಡ ಗಣಪತಿಗೆ ಸಿಂಗಾರಗೊಂಡಿದ್ದು, ಬಣ್ಣ-ಬಣ್ಣ ಹೂಗಳಿಂದ ದೇಗುಲ ಕಂಗೊಳಿಸುತ್ತಿದೆ.

ಮುಂಜಾನೆಯಿಂದಲೇ ದೊಡ್ಡಗಣಪನಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಹಬ್ಬದ ಪ್ರಯುಕ್ತ ಗಣೇಶನಿಗೆ ಬೆಳ್ಳಿ ಅಲಂಕಾರವನ್ನು ಮಾಡಲಾಗಿದ್ದು, ಗಣೇಶ ಹಬ್ಬದ ಪ್ರಯುಕ್ತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಘ್ನೇಶ್ವರನ ದರ್ಶನ ಪಡೆಯುತ್ತಿದ್ದಾರೆ.

ಬಸವನಗುಡಿಯಲ್ಲಿರುವ 18 ಅಡಿ ಎತ್ತರದ 16 ಅಡಿ ಅಗಲದ ದೊಡ್ಡ ಗಣಪತಿಗೆ 500 ವರ್ಷಗಳ ಇತಿಹಾಸವಿದೆ. ಭಕ್ತರು ಬೆಳಗ್ಗೆಯಿಂದ ದೇಗುಲಕ್ಕೆ ಬಂದು ಕಜ್ಜಾಯ, ಕಡುಬು, ಖರ್ಜಿಕಾಯಿ ಸೇರಿ ವಿವಿಧ ಪ್ರಸಾದ ಅರ್ಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಚಿಕ್ಕಮಗಳೂರು : ಗಣಪತಿ ತರಲು ಹೋಗ್ತಿದ್ದ ಟಾಟಾ ಏಸ್​​ ಪಲ್ಟಿ – ಇಬ್ಬರು ಸ್ಥಳದಲ್ಲೇ ಸಾವು..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here