Download Our App

Follow us

Home » ಮೆಟ್ರೋ » ಹೆಣ್ಮಕ್ಳೇ ಹುಷಾರ್.. ಹಾದಿ ಬೀದಿಲಿ ಸಿಗೋ ಬ್ಯೂಟಿ ಪ್ರಾಡಕ್ಟ್ಸ್​ನಿಂದ​​ ಸ್ಕಿನ್ ಕ್ಯಾನ್ಸರ್ ಬರೋ ಸಾಧ್ಯತೆ…!

ಹೆಣ್ಮಕ್ಳೇ ಹುಷಾರ್.. ಹಾದಿ ಬೀದಿಲಿ ಸಿಗೋ ಬ್ಯೂಟಿ ಪ್ರಾಡಕ್ಟ್ಸ್​ನಿಂದ​​ ಸ್ಕಿನ್ ಕ್ಯಾನ್ಸರ್ ಬರೋ ಸಾಧ್ಯತೆ…!

ಬೆಂಗಳೂರು : ಸದಾ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವ ಹೆಣ್ಣು ಮಕ್ಕಳಿಗೆ ಬ್ಯೂಟಿ ಪ್ರಾಡಕ್ಟ್​​ ಅಂದ್ರೆ ಎಲ್ಲಿಲ್ಲದ ಒಲವು. ಹಾದಿ ಬೀದಿಯಲ್ಲಿ ಕಡಿಮೆ ಬೆಲೆಗೆ ಸಿಗುವ ಕಾಸ್ಮೆಟಿಕ್ ಇದ್ರೆ ಕೆಲ ಹೆಣ್ಣು ಮಕ್ಜಳು ಹಿಂದೆ-ಮುಂದೆ ಯೋಚಿಸದೇ ಖರೀದಿಸುತ್ತಾರೆ. ಆದ್ರೆ ಚೀಪ್ ಕಾಸ್ಮೆಟಿಕ್ ಬಳಸುವ ಹೆಂಗಳೆಯರಿಗೆ ಇದೀಗ ಶಾಕ್ ಎದುರಾಗಿದೆ. ರಸ್ತೆ ಬದಿಯಲ್ಲಿ ಮಾರಾಟವಾಗ್ತಿರೋ ಚೀಪ್ ಕಾಸ್ಮೆಟಿಕ್ ಬಳಸಿದರೆ ಸ್ಕಿನ್ ಕ್ಯಾನ್ಸರ್ ಬರೋ ಸಾಧ್ಯತೆಯಿದೆ. 

ಹೌದು.. ಗಾಂಧಿನಗರ, ಉಪ್ಪಾರಲೇಟೆ, ಮಲ್ಲೇಶ್ವರಂ ಸೇರಿದಂತೆ ಕೆಲವು ಏರಿಯಾಗಳಲ್ಲಿ ಬ್ರಾಂಡೆಡ್ ಹೆಸರಲ್ಲಿ ಚೀಪ್ ಬ್ಯೂಟಿ ಪ್ರಾಡಕ್ಟ್​ಗಳ ಮಾರಾಟವಾಗ್ತಿದೆ. ಈ ಪ್ರಾಡಕ್ಟ್​ಗಳು ಸ್ಕಿನ್​​ಗೆ ‌ಹಾನಿಕಾರಕ ಅಷ್ಟೇ ಅಲ್ಲದೇ ಇದರಿಂದ ಸ್ಕಿನ್ ಕ್ಯಾನ್ಸರ್ ಬರುವ ಸಾಧ್ಯತೆಯಿದೆ.

ರಸ್ತೆಯಲ್ಲಿ ಅರ್ದ ಬೆಲೆಗೆ ಸಿಗುವ ಕಾಜಲ್, ಐ-ಲೈನರ್, ಫೌಂಡೇಶನ್, ಕ್ರೀಮ್, ಲಿಪ್ ಸ್ಟಿಕ್, ಬ್ಲಷ್ ಯೂಸ್ ಮಾಡಿದಲ್ಲಿ ಕ್ಯಾನ್ಸರ್ ಬರುವ ಚಾನ್ಸ್ ಇದೆ. ಹೈಫೈ ಬ್ರಾಂಡ್​​ಗಳ ಅಚ್ಚು ಕಾಪಿಯಂತೆ ಕಂಡರು ಇವು ಅಸಲಿ ಬ್ರ್ಯಾಂಡ್​​ಗಳಲ್ಲ. ಪೊಲೀಸರು, ಆರೋಗ್ಯ ಇಲಾಖೆ ಈ ಬಗ್ಗೆ ಕೇರ್ ಲೆಸ್ ಮಾಡಿದ್ದಾರೆ. ನೀವೂ ಕಡಿಮೆ ಬೆಲೆಗೆ ಬ್ರಾಂಡೆಡ್ ಬ್ಯೂಟಿ ಪ್ರಾಡಕ್ಟ್ ಖರೀದಿ ಮಾಡ್ತಿದ್ರೆ ಹುಷಾರ್ ಆಗಿರಿ.

ಇದನ್ನೂ ಓದಿ : ರಾಜ್ಯದಲ್ಲಿ ರಣಕೇಕೆ ಹಾಕ್ತಿದೆ ಡೇಂಜರ್​ ಡೆಂಘೀ – 12 ದಿನದಲ್ಲಿ 4000ಕ್ಕೂ ಹೆಚ್ಚು ಕೇಸ್ ಪತ್ತೆ..!

Leave a Comment

DG Ad

RELATED LATEST NEWS

Top Headlines

ತೆರೆಮೇಲೆ ಅಬ್ಬರಿಸಿದ “ಬಘೀರ” – ಸೂಪರ್ ಹೀರೋ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ..!

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ.

Live Cricket

Add Your Heading Text Here