Download Our App

Follow us

Home » ಅಪರಾಧ » ED ಸುಳಿಯಲ್ಲಿ ಸಿಲುಕಿರುವ​ ನಾಗೇಂದ್ರ, ದದ್ದಲ್​ಗೆ SIT ಮತ್ತೆ ಶಾಕ್ – ವಿಚಾರಣೆಗೆ ಬರುವಂತೆ ಮೂರನೇ ಬಾರಿ ನೋಟಿಸ್​..!

ED ಸುಳಿಯಲ್ಲಿ ಸಿಲುಕಿರುವ​ ನಾಗೇಂದ್ರ, ದದ್ದಲ್​ಗೆ SIT ಮತ್ತೆ ಶಾಕ್ – ವಿಚಾರಣೆಗೆ ಬರುವಂತೆ ಮೂರನೇ ಬಾರಿ ನೋಟಿಸ್​..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮಂತ್ರಿ ಬಿ.ನಾಗೇಂದ್ರ ಹಾಗೂ ಶಾಸಕ ದದ್ದಲ್​ಗೆ ಎಸ್ಐಟಿ ಮತ್ತೆ ನೋಟಿಸ್ ನೀಡುವ ಮೂಲಕ ಶಾಕ್​ ನೀಡಿದೆ. ನಿನ್ನೆ ವಿಚಾರಣೆಗೆ ಗೈರಾದ ಹಿನ್ನೆಲೆ ನೋಟಿಸ್ ಜಾರಿಗೊಳಿಸಲಾಗಿದ್ದು, ಇಂದು(ಜು.11) ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ಈ ಮೂಲಕ ಇಬ್ಬರಿಗೂ ಮೂರನೇ ಬಾರಿ ಎಸ್ಐಟಿ ನೋಟಿಸ್ ಜಾರಿ ಮಾಡಿದಂತಾಗಿದೆ. ಖುದ್ದು ನಾಗೇಂದ್ರ, ದದ್ದಲ್ ಅವರೇ ​SITಯಿಂದ ನೋಟಿಸ್ ಸ್ವೀಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ನಾಗೇಂದ್ರ, ದದ್ದಲ್​ SIT ವಿಚಾರಣೆ ಎದುರಿಸಿದ್ದು, ಜುಲೈ 9ರಂದು ನಾಗೇಂದ್ರಗೆ ಸುಮಾರು 8 ಗಂಟೆಗಳ ಕಾಲ SIT ಡ್ರಿಲ್​ ನಡೆಸಿತ್ತು. ಅಂದು SIT ಕೇಳಿದ ಸಾಲು ಸಾಲು ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ಕಾರಣ (ಜು.10) ನಿನ್ನೆ ವಿಚಾರಣೆಗೆ ಬರುವಂತೆ SIT ನೋಟಿಸ್ ಕೊಟ್ಟಿತ್ತು. ಆದ್ರೆ ನಿನ್ನೆ ಬೆಳ್ಳಂಬೆಳಗ್ಗೆ ED ರೇಡ್​ ಮಾಡಿದ ಕಾರಣದಿಂದಾಗಿ ಇಬ್ಬರೂ ವಿಚಾರಣೆಗೆ ಬಂದಿರಲಿಲ್ಲ.

ಹಾಗಾಗಿ ನಾಗೇಂದ್ರ, ದದ್ದಲ್​ ಇಂದು SIT ಮುಂದೆ ವಿಚಾರಣೆಗೆ ಇಂದು ಹಾಜರಾಗ್ತಾರಾ​​​​ ಎಂಬ ಚರ್ಚೆಗಳು ನಡೆಯುತ್ತಿದ್ದು, ED ವಿಚಾರಣೆ ಮುಂದುವರೆಸಿದ್ರೆ ಎಸ್​ಐಟಿ ಮುಂದೆ ಹಾಜರಾಗೋದು ಕಷ್ಟ ಎಂದು ಹೇಳಲಾಗುತ್ತಿದೆ.

ಇನ್ನು, ನಿನ್ನೆ ಮಾಜಿ ಮಂತ್ರಿ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಾಗೇಂದ್ರ ಅವರ ಪಿಎ ಹರೀಶ್‌ನನ್ನು ಬಂಧಿಸಿ  ವಿಚಾರಣೆಗೊಳಪಡಿಸಿದ್ದರು. ಬಳಿಕ ತಡರಾತ್ರಿ ವಿಚಾರಣೆ ಮುಗಿದ ನಂತರ ರಿಲೀಸ್​ ವಾಪಸ್​ ಕಳುಹಿಸಿದ್ದರು. ಇನ್ನು ಇಲ್ಲಿಯವರೆಗೆ ವಾಲ್ಮೀಕಿ ನಿಗಮ ಹಗರಣ ಕೇಸ್​ಗೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ಜೊತೆಗೆ ಎಸ್ಐಟಿಯಿಂದ ಇದುವರೆಗೂ ಒಟ್ಟು 35 ಕೋಟಿಗೂ ಹೆಚ್ಚು ಮೌಲ್ಯದ ನಗದು, ಚಿನ್ನಾಭರಣ ಹಾಗೂ ಬ್ಯಾಂಕ್‌ಗಳಲ್ಲಿದ್ದ ಹಣವನ್ನ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ : ಮುಸ್ಲಿಂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೇಸ್ – ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ..!

 

 

Leave a Comment

DG Ad

RELATED LATEST NEWS

Top Headlines

ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಪ್ರಕರಣ – AE ವಿನಯ್​​ ಅಮಾನತು ಮಾಡಿ BBMP ಕಮಿಷನರ್​​ ಆದೇಶ..!

ಬೆಂಗಳೂರು : ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಕೇಸ್​​ನಲ್ಲಿ ಮೊದಲ ತಲೆದಂಡವಾಗಿದೆ. ಹೊರಮಾವು ವಿಭಾಗ ಸಹಾಯಕ ಕಾರ್ಯ ನಿರ್ವಹಕ ಕೆ.ವಿನಯ್ ಅಮಾನತು ಮಾಡಿ BBMP ಕಮಿಷನರ್​​ ಆದೇಶ ಹೊರಡಿಸಿದ್ದಾರೆ.

Live Cricket

Add Your Heading Text Here