Download Our App

Follow us

Home » ರಾಜಕೀಯ » ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಒಬ್ಬರೇ ಫಿಟ್ : ಜಯದೇವ್​ ನಾಯ್ಕ್​​​..!

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಒಬ್ಬರೇ ಫಿಟ್ : ಜಯದೇವ್​ ನಾಯ್ಕ್​​​..!

ದಾವಣಗೆರೆ : ಮುಖ್ಯಮಂತ್ರಿ ಬದಲಾವಣೆ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಠಿ ಮಾಡುವ ವಿಚಾರ ರಾಜ್ಯ ಕಾಂಗ್ರೆಸ್​​​ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಒಬ್ಬರೇ ಫಿಟ್ ಎಂದು ತಾಂಡಾ ಅಭಿವೃದ್ಧಿ ನಿಗಮ ನೂತನ ಅಧ್ಯಕ್ಷ ಜಯದೇವ್ ನಾಯ್ಕ್ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಪರವಾಗಿ ದಾವಣಗೆರೆಯಲ್ಲಿ ಬ್ಯಾಟಿಂಗ್​ ಮಾಡಿದ ಜಯದೇವ್​ ನಾಯ್ಕ್​​​ ಅವರು, ಸಿಎಂ ಆಗ್ಬೇಕು ಅನ್ನೋದು ಎಲ್ಲರ ಆಸೆ ಸಹಜ. ಆದರೆ ಸಿದ್ದರಾಮಯ್ಯ ಬಡವರ ಹಸಿವನ್ನು ನೀಗಿಸಿದವರು, ಸಮರ್ಥವಾಗಿ ಆಡಳಿತ ಮಾಡಿದ್ದಾರೆ, ಉತ್ತಮ ಆಡಳಿತ ಮಾಡಿದ್ದಾರೆ ಎಮದು ತಿಳಿಸಿದ್ದಾರೆ.

ಇನ್ನು ಸಿಎಂ ಮಾಡುವ ವಿಚಾರ ಹೈಕಮಾಂಡ್​​ಗೆ ಬಿಟ್ಟಿದ್ದು. ಸಿಎಂ ಬದಲಾವಣೆ ಮಾಡುವುದು ಸುಲಭದ ವಿಚಾರವಲ್ಲ. ಸದ್ಯ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಸಮರ್ಥವಾಗಿದ್ದಾರೆ ಎಂದು
ದಾವಣಗೆರೆಯಲ್ಲಿ ಜಯದೇವ್ ನಾಯ್ಕ್ ಹೇಳಿದ್ದಾರೆ.

ಇದನ್ನೂ ಓದಿ : ಪಾನಿಪುರಿ ಬೆನ್ನಲ್ಲೇ ಶವರ್ಮಾದಲ್ಲೂ ಅಪಾಯಕಾರಿ ಬಾಕ್ಟೀರಿಯಾ ಪತ್ತೆ : ಬ್ಯಾನ್​ಗೆ ಚಿಂತನೆ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here