Download Our App

Follow us

Home » ಅಪರಾಧ » ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದ ಕಾಮುಕ..!

ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದ ಕಾಮುಕ..!

ಬೆಂಗಳೂರು : ಬೆಂಗಳೂರಿನ ವಿವಿ ಪುರಂನಲ್ಲಿ ಕಾಮುಕನೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಯುವತಿಯರು ಹೆಚ್ಚಾಗಿರುವ ಕಾಲೇಜು ಟಾರ್ಗೆಟ್ ಮಾಡಿ ಆ ರಸ್ತೆಗೆ ಇಳಿಯುವ ಕಾಮುಕ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಯುವತಿಯರಿರುವ ಕಡೆ ಬೈಕ್ ನಿಲ್ಲಿಸಿ ಖಾಸಗಿ ಅಂಗ ತೋರಿಸಿ ಪರಾರಿ ಆಗ್ತಿದ್ದಾನೆ.

ಬೈಕ್ ನಂಬರ್ ಪ್ಲೇಟ್​​ನ್ನ ಟೇಪ್ ನಿಂದ ಮುಚ್ಚಿ ಕಾಮುಕ ಈ ಕೃತ್ಯವೆಸಗಿದ್ದಾನೆ. ವಿದ್ಯಾರ್ಥಿನಿಯೊಬ್ಬಳು ಕಾಮುಕನ ಕೃತ್ಯವನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾಳೆ. ವಿದ್ಯಾರ್ಥಿನಿಯರು ವಿ.ವಿ.ಪುರಂ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಕಾಮುಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ವಿಡಿಯೋಗೆ ಕಮೆಂಟ್‌ ಮಾಡಿರುವ ನೆಟ್ಟಿಗರು, ಇದು ನಾಚಿಕೆಗೇಡಿನ ಸಂಗತಿ ಆತನನ್ನು ಆದಷ್ಟು ಬೇಗ ಬಂಧಿಸಬೇಕು. ಆತನ ಗಾಡಿಯ ಸಂಖ್ಯೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ ಬೇಕೆಂದೆ ಆರಂಭದ ಎರಡು ನಂಬರ್‌ ಅನ್ನು ಮುಚ್ಚಿದ್ದಾನೆ ಎಂದು ಶೀಘ್ರ ಬಂಧನಕ್ಕೆ ಒತ್ತಾಯಿಸಿದ್ದಾರೆ. ಮತ್ತೊಬ್ಬರು ಕಮೆಂಟ್‌ ಮಾಡಿ, ಹುಡುಗಿಯರಿಗೆ ತುಂಬಾ ಸಾರಿ ಹೀಗೆ ಆಗ್ತಿದೆ, ನಮ್ಮ ಮನೆಯ ಹತ್ತಿರ ಹುಡುಗಿಯರು ಈ ತರಹದ ಸನ್ನಿವೇಶಗಳನ್ನು ಎದುರಿಸಿದ್ದಾರೆ ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ರಣಾರ್ಭಟ – ಹಲವೆಡೆ ಮನೆಗಳು ಜಲಾವೃತ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here