ಟಿವಿ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ, ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದೆ. ಅಂತೂ ಇಂತೂ ಪ್ರೇಕ್ಷಕರ ಕುತೂಹಲಕ್ಕೆ ತೆರೆಬಿದ್ದಿದ್ದು, ಬಿಗ್ ಬಾಸ್ ಕನ್ನಡ ಸೀಸನ್ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 29ರಂದು ಕಾರ್ಯಕ್ರಮ ಆರಂಭವಾಗಲಿದ್ದು, ಸಾಕಷ್ಟು ಕುತೂಹಲ ಹುಟ್ಟಿಸಿದ್ದ ನಿರೂಪಕ ಯಾರೆನ್ನುವ ಪ್ರಶ್ನೆಗೆ ಪ್ರೋಮೊ ಬಿಟ್ಟು ಆಯೋಜಕರು ಸಸ್ಪೆನ್ಸ್ ರಿವೀಲ್ ಮಾಡಿದ್ದಾರೆ.
ಕಳೆದ 10 ಸೀಸನ್‌ಗಳನ್ನು ಅದ್ಭುತವಾಗಿ ನಿರೂಪಣೆ ಮಾಡುತ್ತಾ ಬಂದಿರುವ ನಟ ಕಿಚ್ಚ ಸುದೀಪ್ ಅವರೇ ಈ ಬಾರಿಯೂ ಬಿಗ್ ಬಾಸ್‌ಗೆ ಸಾರಥಿ ಆಗಿದ್ದಾರೆ. ಕಾರ್ಯಕ್ರಮದ ಪ್ರೋಮೊ ರಿಲೀಸ್ ಆದ ಬೆನ್ನಲ್ಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೂ ಜೋರಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ. ಸ್ಪರ್ಧಿಗಳು ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಹೆಚ್ಚಾಗಿದ್ದು, ಇಂತವರೇ ಹೋಗಬಹುದು ಅಂತ ಟ್ರೋಲಿಗರು ಗೆಸ್ ಮಾಡುತ್ತಿದ್ದಾರೆ. ಆದರೆ, ಬಿಗ್ ಬಾಸ್ ಸೀಸನ್ 11ರ ಗ್ರಾಂಡ್ ಓಪನಿಂಗ್ ದಿನವೇ ಈ ಬಾರಿ ದೊಡ್ಮನೆಯೊಳಗೆ ಯಾರೆಲ್ಲಾ ಹೋಗಲಿದ್ದಾರೆ ಅನ್ನೋದು ಕನ್ಫರ್ಮ್ ಆಗಲಿದೆ.
ಇನ್ನು, ಪ್ರತಿಯೊಂದು ವಾವ್ ಎಲಿಮೆಂಟ್ ಹೊಂದಿರುವ ಸೀಸನ್ ಇದಾಗಿರಲಿದೆ ಎಂದು ವೀಕ್ಷಕರು ಗೆಸ್ ಮಾಡುತ್ತಿದ್ದಂತೆ ಒಂದೆರಡು ಬೇಸರದ ಎಲಿಮೆಂಟ್ಗಳು ಕೂಡ ರಿವೀಲ್ ಆಗಿದೆ. ಪ್ರತಿ ಸೀಸನ್ ಬಿಗ್ ಬಾಸ್ ರಿಯಾಲಿಟಿ ಶೋನ್ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಟಿವಿಯಲ್ಲಿ ಇಡೀ ದಿನದ ಘಟನೆಯನ್ನು ಕೇವಲ ಒಂದು ಗಂಟೆ ಎಪಿಸೋಡ್ ರೀತಿಯಲ್ಲಿ ನೋಡಲು ಬೋರಾಗುತ್ತದೆ ಎನ್ನುವವರು ಆಗಾಗ ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ನೋಡುತ್ತಿದ್ದರು. ಕೆಲವೊಂದು ಘಟನೆಗಳ ಬಗ್ಗೆ ಕ್ಲಾರಿಟಿ ಇಲ್ಲದಿದ್ದಾಗಲೂ ಸ್ಪರ್ಧಿಗಳು ಕುಟುಂಬಸ್ಥರು ಹಿಂದೆ ಮುಂದೆ ತಿಳಿದುಕೊಳ್ಳಲು ಲೈವ್ ನೋಡುತ್ತಿದ್ದರು.
ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಫ್ರೀ ಟೈಮ್ನಲ್ಲಿ ಲೈವ್ ಆನ್ ಮಾಡಿಕೊಂಡು ಕೆಲಸ ಮಾಡುತ್ತಿದ್ದರು. ಅಷ್ಟರ ಮಟ್ಟಕ್ಕೆ ಬಿಗ್ ಬಾಸ್ ಕ್ರೇಜ್ ಹುಟ್ಟುಹಾಕಿತ್ತು. ಆದರೀಗ 24/7 ಲೈವ್ ಇರುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಚರ್ಚೆಗಳು ನಡೆಯುತ್ತಿದೆ. ಈ ಬಾರಿ ವಾಹಿನಿ ಕಾರ್ಯಕ್ರಮ ಲೈವ್ ಪ್ರಸಾರ ಮಾಡದಿರಲು ನಿರ್ಧರಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಈ ವಿಚಾರ ಬಿಗ್ ಬಾಸ್ ಫ್ಯಾನ್ಸ್ಗೆ ಸದ್ಯ ಬೇಸರ ತಂದಿದೆ.
ಅದರಂತೆ ಇನ್ನೊಂದು ವಿಚಾರವೂ ಬಿಗ್ ಬಾಸ್ ಪ್ರಿಯರಿಗೆ ಬೇಸರ ತಂದಿದೆ. ಸಂಚಿಕೆಯಲ್ಲಿ ಪ್ರಸಾರವಾಗದ ಕೆಲವೊಂದು ದೃಶ್ಯಗಳನ್ನು ಅನ್‌ಸೀನ್ ಕ್ಲಿಪ್ಸ್‌ಗಳಲ್ಲಿ ಈ ಮೊದಲು ನೋಡಬಹುದಿತ್ತು. ಟಿಆರ್‌ಪಿಗೋಸ್ಕರ ಹಾಟ್ ಆಂಡ್ ಸೆನ್ಸೇಷನ್ ಕ್ರಿಯೇಟ್ ಮಾಡುವ ದೃಶ್ಯಗಳನ್ನು ಮಾತ್ರ ಸಂಚಿಕೆಯಲ್ಲಿ ಪ್ರಸಾರ ಮಾಡುತ್ತಿದ್ದರು. ಆದರೆ ಅಡುಗೆ ಮನೆ, ಬಾತ್‌ರೂಮ್, ಬೆಡ್ ರೂಮ್ ಮತ್ತು ಗಾರ್ಡನ್ ಏರಿಯಾದಲ್ಲಿ ನಡೆಯುವ ಮಾತಿನ ಚಕಾಮಕಿ ಕಾಮಿಡಿ ಮತ್ತು ಟೈಮ್ ಪಾಸ್, ತರಲೆ ಕೆಲಸಗಳು ನೋಡಲು ಎಕ್ಸಟ್ರಾ ಕ್ಲಿಪ್ ಅಗತ್ಯವಿತ್ತು. ಆದ್ರೀಗ ಈ ಸೀಸನ್ನಲ್ಲಿ ಅದ್ಯಾವುದು ಇರುವುದಿಲ್ಲ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಎಷ್ಟು ಸತ್ಯ ಎಷ್ಟು ಸುಳ್ಳು ಗೊತ್ತಿಲ್ಲ.. ಈ ವಿಚಾರ ಕೇಳಿ ವೀಕ್ಷಕರು ಬೇಸರ ಮಾಡಿಕೊಂಡಿರುವುದಂತೂ ನಿಜ.
ಇದನ್ನೂ ಓದಿ : ಬೀದರ್ನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಭರ್ಜರಿ ಕಾರ್ಯಾಚರಣೆ.. ಕೋಟಿ-ಕೋಟಿ ಮೌಲ್ಯದ ಗುಟ್ಕಾ ವಶಕ್ಕೆ..!