Download Our App

Follow us

Home » ರಾಜ್ಯ » ರಾಜ್ಯದ ಜನರಿಗೆ ಮಿಲ್ಕ್​ ಶಾಕ್ ​​​: ನಂದಿನಿ ಹಾಲಿನ ದರ ಏರಿಕೆ – ಎಷ್ಟು ರೂ. ಗೊತ್ತಾ?

ರಾಜ್ಯದ ಜನರಿಗೆ ಮಿಲ್ಕ್​ ಶಾಕ್ ​​​: ನಂದಿನಿ ಹಾಲಿನ ದರ ಏರಿಕೆ – ಎಷ್ಟು ರೂ. ಗೊತ್ತಾ?

ಬೆಂಗಳೂರು : ಸತತ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಆಘಾತ ನೀಡಿದೆ. ನಂದಿನಿ ಹಾಲಿನ ದರ ಹೆಚ್ಚಿಸಿ ಕೆಎಂಎಫ್ (KMF) ಮಹತ್ವದ ನಿರ್ಧಾರ ಪ್ರಕಟಿಸಿದೆ. ಕೆಎಂಎಫ್ ಮುಖ್ಯ ಕಚೇರಿಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸುದ್ದಿಗೋಷ್ಠಿ ನಡೆಸಿ ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ದಾರೆ.

ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್​​ಗೆ 50 ಎಂಎಲ್​​ ಹಾಲು ಹೆಚ್ಚುವರಿಯಾಗಿ ಸೇರಿಸಲಾಗುವುದು. ಸದ್ಯ ಲೀಟರ್ ಹಾಲಿಗೆ ಇರುವ 42 ರೂಪಾಯಿ ಇರುವ ದರವನ್ನು 2 ರೂಪಾಯಿ ಹೆಚ್ಚಳ ಮಾಡಲಾಗುವುದು. ನಾಳೆಯಿಂದ ಈ ದರ ನಾಳೆಯಿಂದ ಅನ್ವಯವಾಗಲಿದೆ ಎಂದು ಭೀಮಾನಾಯ್ಕ್ ತಿಳಿಸಿದರು. ಕೆಎಂಎಫ್​ ಎಂಡಿ ಎಂಕೆ ಜಗದೀಶ್, ಆಡಳಿತ ಮಂಡಳಿ ಸದಸ್ಯರು ಸಹ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಹಾಲಿನ‌ ಹೊಸ ದರ ಹೀಗಿದೆ..

  • ನೀಲಿ ಪ್ಯಾಕೆಟ್ ಹಾಲು – 42 ರಿಂದ 44ಕ್ಕೆ ಏರಿಕೆ
  • ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) – 43 ರಿಂದ 45ಕ್ಕೆ ಏರಿಕೆ
  • ಆರೆಂಜ್ ಪ್ಯಾಕೆಟ್ ಹಾಲು – 46ರಿಂದ 48ಕ್ಕೆ ಏರಿಕೆ
  • ಆರೆಂಜ್ ಸ್ಪೆಷಲ್ ಹಾಲು – 48 ರಿಂದ 50ಕ್ಕೆ ಏರಿಕೆ
  • ಗ್ರೀನ್​​ (ಸ್ಪೆಷಲ್​​) – 48 ರಿಂದ 50ಕ್ಕೆ ಏರಿಕೆ
  • ಸಮೃದ್ದಿ ಹಾಲು – 51ರಿಂದ 53ಕ್ಕೆ ಏರಿಕೆ
  • ಶುಭಂ ಗೋಲ್ಡ್ ಹಾಲು – 49 ರೂ.ನಿಂದ 51ಕ್ಕೆ ಏರಿಕೆ
  • ಸಂತೃಪ್ತಿ ಹಾಲು – 55 ರಿಂದ 57ಕ್ಕೆ ಏರಿಕೆ
  • ಶುಭಂ ಡಬಲ್ ಟೋನ್ಡ್ ಹಾಲು – 41 ರಿಂದ 43ಕ್ಕೆ ಏರಿಕೆ

ಇದನ್ನೂ ಓದಿ : ಉಮಾಪತಿಗೌಡಗೆ ಬೆದರಿಕೆ ಹಾಕಿದ್ದ ಡೇಂಜರ್​ ಗ್ಯಾಂಗ್​​ನ ಮೆಂಬರ್​​ ಚೇತನ್​​ ಅರೆಸ್ಟ್​​​..!

 

 

 

 

 

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here