Download Our App

Follow us

Home » ಸಿನಿಮಾ » ಹ್ಯಾಟ್ರಿಕ್ ಹೀರೋಗೆ ಅನಾರೋಗ್ಯ.. ದಿಢೀರ್ ಆಗಿದ್ದೇನು? ಟ್ರೀಟ್ಮೆಂಟ್​​ಗಾಗಿ 1 ತಿಂಗಳು ಅಮೆರಿಕಾಗೆ ಹೋಗ್ಬೇಕು ಎಂದ ಶಿವಣ್ಣ..!

ಹ್ಯಾಟ್ರಿಕ್ ಹೀರೋಗೆ ಅನಾರೋಗ್ಯ.. ದಿಢೀರ್ ಆಗಿದ್ದೇನು? ಟ್ರೀಟ್ಮೆಂಟ್​​ಗಾಗಿ 1 ತಿಂಗಳು ಅಮೆರಿಕಾಗೆ ಹೋಗ್ಬೇಕು ಎಂದ ಶಿವಣ್ಣ..!

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವಣ್ಣ ಭೈರತಿ ರಣಗಲ್ ಸಿನಿಮಾ ಮೂಲಕ ಜನರನ್ನು ರಂಜಿಸಲು ರೆಡಿ ಆಗಿದ್ದಾರೆ. ಇತ್ತೀಚಿಗಷ್ಟೇ ಭೈರತಿ ರಣಗಲ್ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ. ಈ ನಡುವೆ ಶಿವಣ್ಣನಿಗೆ ಆರೋಗ್ಯ ಸರಿಯಿಲ್ಲ ಅನ್ನೋ ವಿಚಾರ ಬಯಲಾಗಿದೆ.

ಈ ಬಗ್ಗೆ ಶಿವಣ್ಣ ಅವರೇ ಸ್ವತಃ ವಿಷಯ ಬಹಿರಂಗ ಮಾಡಿದ್ದು, ನನಗೆ ಹೆಲ್ತ್‌ ಇಶ್ಯೂ ಇದೆ. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ, ನಾನು ಮನುಷ್ಯನೇ ನನಗೂ ಪ್ರಾಬ್ಲಂ ಆಗಿದೆ. ಟ್ರೀಟ್ಮೆಂಟ್ ತಗೋತ್ತಾ ಇದ್ದೀನಿ. ಆದರೆ, ಕೆಲಸಕ್ಕೆ ಏನೂ ತೊಂದರೆ ಇಲ್ಲ. ಇತ್ತೀಚಿಗೆ 45 ಚಿತ್ರದ ಶೂಟಿಂಗ್ ಕೂಡ ಮಾಡಿದ್ದೇನೆ. ಆ ರೀತಿ ಏನೂ ಸಮಸ್ಯೆ ಇಲ್ಲ. ಎಲ್ಲವೂ ನಡೆಯುತ್ತಿದೆ. ಎಲ್ಲರಿಗೂ ಇರೋ ವಿಷಯ ಹೇಳೋದೇ ಒಳ್ಳೆಯದು. ಎಲ್ಲರೂ ಧೈರ್ಯ ತುಂಬಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಮೊದಲಿಗೆ ನನಗೂ ಇದನ್ನು ಕೇಳಿ ಗಾಬರಿಯಾಯ್ತು, ಈ ವಿಚಾರ ಸುದೀಪ್‌, ಯಶ್‌, ರಕ್ಷಿತಾ ಅವರಿಗೂ ಗೊತ್ತಿದೆ. ಯುಎಸ್‌‌ನಲ್ಲಿ ಒಂದು ಅಪ್‌ರೇಷನ್ ಆಗಬೇಕಿದೆ. ಒಂದು ತಿಂಗಳ ಕಾಲ ಅಮೆರಿಕಾಗೆ ಹೋಗಬೇಕಾಗಬಹುದು. ಅಭಿಮಾನಿಗಳಿಗೆ ಫೋಟೋ ತೆಗೆದುಕೊಳ್ಳುವಾಗ ದೂರ ನಿಂತುಕೊಳ್ಳಿ ಅಂತ ಹೇಳ್ತಿದ್ದೇನೆ. ನನ್ನಿಂದ ಅವರಿಗೂ ಇನ್ಫೆಕ್ಷನ್‌ ಆಗಬಹುದು ಅಂತ ಹಾಗೆ ಹೇಳುತ್ತಿದ್ದೇನೆ. ಯಾರು ಬೇಜಾರು ಮಾಡಿಕೊಳ್ಳಬೇಡಿ ಎಂದಿದ್ದಾರೆ.

ಆಪರೇಷನ್ ಆದ್ಮೇಲೆ ಮುಗಿತು ನೋಡಿ. ಏನೂ ತೊಂದರೆ ಆಗೋದಿಲ್ಲ. ಎಂದಿನಂತೆ ನಿಮ್ಮ ಶಿವಣ್ಣ ಆಕ್ಟೀವ್ ಆಗಿಯೇ ಇರ್ತಾರೆ. ಏನೂ ತೊಂದರೆ ಇರೋದೇ ಇಲ್ಲ. ಎಲ್ಲವೂ ಎಂದಿನಂತೆ ಅಂತ ಶಿವಣ್ಣ ಹೇಳಿಕೊಂಡಿದ್ದಾರೆ.

ಈ ವಿಚಾರ ಮುಚ್ಚಿಡುವುದು ಬೇಡ ಅಂತ ಗೀತಾಗೂ ಹೇಳಿದೆ. ಯಾಕೆ ಇದನ್ನು ಹೈಡ್ ಮಾಡ್ಬೇಕು ಬೇಡ. 2 ತಿಂಗಳು ನಾನು ಸುಮ್ನೆ ಇರೋದು ಕಷ್ಟ. ಎಲ್ಲ ಸರಿ ಹೋಗುತ್ತೆ. ಎಲ್ಲವೂ ಸರಿಯಾಗಿ ಹೋಗ್ತಿದೆ. ಎಲ್ಲರಿಗೂ ಮ್ಯಾಟರ್‌ ಗೊತ್ತಿರಬೇಕು. ಜನಗಳಿಗೆ ಈ ವಿಚಾರ ಗೊತ್ತಿರಬೇಕು ಎಂದು ಶಿವಣ್ಣ ಹೇಳಿದ್ದಾರೆ.

ಇದನ್ನೂ ಓದಿ : ಬೈ ಎಲೆಕ್ಷನ್​ ಭರಾಟೆ : ಸಂಡೂರಿನಲ್ಲಿ ಅನ್ನಪೂರ್ಣ ಪರ ಇಂದು ಸಿಎಂ ಸಿದ್ದರಾಮಯ್ಯ ಮತಬೇಟೆ..!

Leave a Comment

DG Ad

RELATED LATEST NEWS

Top Headlines

ನನ್ನ ಸರ್ಕಾರ ಕಿತ್ತಾಕ್ಬೇಕು ಅಂತಾ 50 MLAಗಳಿಗೆ ಬಿಜೆಪಿ ತಲಾ 50 ಕೋಟಿ ರೂ. ಆಫರ್ – ಸಿಎಂ ಸಿದ್ದು ಬಿಗ್​ ಬಾಂಬ್..!​​​

ಮೈಸೂರು : ಕಾಂಗ್ರೆಸ್‌ನ 50 MLAಗಳಿಗೆ ತಲಾ 50 ಕೋಟಿ ರೂ. ಆಮಿಷವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ಹೇಗಾದ್ರೂ ಮಾಡಿ ನನ್ನ ಸರ್ಕಾರವನ್ನು ಕಿತ್ತಾಕ್ಬೇಕು ಅಂತಾ ಯತ್ನಿಸಿತ್ತು.

Live Cricket

Add Your Heading Text Here