Download Our App

Follow us

Home » ರಾಜಕೀಯ » ಬೈ ಎಲೆಕ್ಷನ್​ ಭರಾಟೆ : ಸಂಡೂರಿನಲ್ಲಿ ಅನ್ನಪೂರ್ಣ ಪರ ಇಂದು ಸಿಎಂ ಸಿದ್ದರಾಮಯ್ಯ ಮತಬೇಟೆ..!

ಬೈ ಎಲೆಕ್ಷನ್​ ಭರಾಟೆ : ಸಂಡೂರಿನಲ್ಲಿ ಅನ್ನಪೂರ್ಣ ಪರ ಇಂದು ಸಿಎಂ ಸಿದ್ದರಾಮಯ್ಯ ಮತಬೇಟೆ..!

ಬಳ್ಳಾರಿ : ರಾಜ್ಯದಲ್ಲಿ ಬೈ ಎಲೆಕ್ಷನ್ ಕಾವು ಜೋರಾಗಿದೆ. ಕಾಂಗ್ರೆಸ್ ಮತ್ತು ಎನ್‌ಡಿಎ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮೂರು ಕ್ಷೇತ್ರಗಳಲ್ಲಿ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದೆ.

ಸಂಡೂರು ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರ ಪರವಾಗಿ ಸಿಎಂ ಸಿದ್ದರಾಮಯ್ಯ ಅವರು ಇಂದು ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಜಿಂದಾಲ್‌ ಏರ್‌ ಸ್ಟ್ರಿಪ್‌ಗೆ ತೆರಳುವ ಸಿಎಂ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಆಯೋಜಿಸಿರುವ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಬೊಮ್ಮಘಟ್ಟ, ಚೋರನೂರು, ಬಂಡ್ರಿ, ಯಶವಂತ ನಗರ, ಬಂಡ್ರಿ, ಯಶವಂತನಗರ, ಕೃಷ್ಣಾನಗರ, ಸುಶೀಲಾ ನಗರ, ತಾರಾನಗರಲ್ಲಿ ಸಿಎಂ ಪ್ರಚಾರ ನಡೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಸಂಸದರಾದ ಇ ತುಕಾರಾಂ, ಸಚಿವ ಸಂತೋಷ್‌ ಲಾಡ್‌ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಸಾಥ್​ ನೀಡಲಿದ್ದು, ಸಂಡೂರಿನಲ್ಲಿಯೇ ಇಂದು ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಶುಕ್ರವಾರದಂದು ಬನ್ನಿಹಟ್ಟಿ, ಏಳುಬೆಂಚಿ, ದರೋಜಿ, ಕುಡುತಿನಿ, ತೋರಣಗಲ್ಲು ಮತ್ತು ವಡ್ಡುವಿನಲ್ಲಿ ಅನ್ನಪೂರ್ಣ ಪರ ಮತಬೇಟೆ ನಡೆಸಲಿದ್ದಾರೆ. ಬಳಿಕ ರಾತ್ರಿ ಬೆಂಗಳೂರಿಗೆ ವಾಪಸ್​ ಆಗಲಿದ್ದಾರೆ.

ಇದನ್ನೂ ಓದಿ : ಅಗರಬತ್ತಿ ಹಿಡಿದು ತಮಗೆ ತಾವೇ ಪೂಜೆ ಮಾಡಿಕೊಂಡ ಚೈತ್ರಾ.. ದೊಡ್ಮನೆ ಮಂದಿಯೆಲ್ಲಾ ಶಾಕ್..!​

Leave a Comment

DG Ad

RELATED LATEST NEWS

Top Headlines

ಹಸೆಮಣೆ ಏರಲು ಸಜ್ಜಾದ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು.. ವರ ಯಾರು? ಮದುವೆ ಯಾವಾಗ?

ಪಿವಿ ಸಿಂಧು ತಮ್ಮ ಬದುಕಿನ ಹೊಸ ಪಯಣಕ್ಕೆ ಸಿದ್ಧರಾಗಿದ್ದಾರೆ. ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತರಾಗಿರುವ ಬ್ಯಾಡ್ಮಿಂಟನ್ ತಾರೆ, ಶೀಘ್ರದಲ್ಲೇ ವಿವಾಹ ಆಗಲಿದ್ದಾರೆ. ಸಿಂಧು ಅವರ ತಂದೆ

Live Cricket

Add Your Heading Text Here