Download Our App

Follow us

Home » ಸಿನಿಮಾ » ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಡಲು ರೆಡಿಯಾದ ಶಿವಣ್ಣ : ಹೇಳಿದ್ದೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಡಲು ರೆಡಿಯಾದ ಶಿವಣ್ಣ : ಹೇಳಿದ್ದೇನು?

ಕರುನಾಡ ‌ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹುಟ್ಟುಹಬ್ಬಕ್ಕೂ ಮುಂಚೆಯೇ ತಮ್ಮ ಅಭಿಮಾನಿ ದೇವರುಗಳಿಗೆ ಪ್ರೇಮದ ಕಾಣಿಕೆ ಕೊಡಲು ನಟ ಶಿವರಾಜ್‌ ಕುಮಾರ್ ಸಜ್ಜಾಗಿದ್ದಾರೆ. ಖುದ್ದು ಶಿವರಾಜ್‌ ಕುಮಾರ್ ಅವರೇ ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

ಇದೇ ಜುಲೈ 12, ಅಂದರೆ ನಾಳೆ ಶಿವರಾಜ್‌ ಕುಮಾರ್ ಅವರ 62ನೇ ಹುಟ್ಟುಹಬ್ಬ. ಶಿವಣ್ಣನ ಬರ್ತ್‌ಡೇ ಅನ್ನ ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಅಭಿಮಾನಿಗಳಿಗೂ ಗಿಫ್ಟ್ ಕೊಡಲು ಶಿವಣ್ಣ ಸಜ್ಜಾಗಿದ್ದಾರೆ.

ಹೌದು, ಈ ಬಾರಿ ಹುಟ್ಟುಹಬ್ಬದ ದಿನ ಶಿವಣ್ಣನಿಂದ ಅಭಿಮಾನಿಗಳಿಗೆ ಸರ್‌ಪ್ರೈಸ್‌ ಗಿಫ್ಟ್ ಸಿಗಲಿದೆ. ಈ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್ ಅವರು, “ಹುಟ್ಟುಹಬ್ಬ ಎನ್ನುವುದು ತಂದೆ ತಾಯಿ ನಮಗೆ ನೀಡಿರುವ ಗಿಫ್ಟ್. ಅವರಿಗೆ ನಾವು ಯಾವಾಗಲೂ ಚಿರ ಋಣಿಯಾಗಿರಬೇಕು. ಇದೇ ಜುಲೈ 12, ನನ್ನ ಅರವತ್ತೆರಡನೇ ಹುಟ್ಟುಹಬ್ಬ. ಇಷ್ಟು ವರ್ಷಗಳಿಂದ ಸಾವಿರಾರು ಅಭಿಮಾನಿಗಳು ನಮ್ಮ ಮನೆಗೆ ಬಂದು ನನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದೀರಿ. ನಿಮ್ಮ ಅಭಿಮಾನಕ್ಕೆ ನನ್ನ ಧನ್ಯವಾದ. ಈ ಸಲದ ಹುಟ್ಟುಹಬ್ಬಕ್ಕೆ ನಾನು ನಿಮಗೊಂದು ಸ್ಪೆಷಲ್ ಗಿಫ್ಟ್ ಕೊಡಲಿದ್ದೇನೆ. ಅದೇನೆಂದರೆ, ನನ್ನ ಹುಟ್ಟುಹಬ್ಬದ ದಿನ ಬಹು ನಿರೀಕ್ಷಿತ “45” ಚಿತ್ರದ ನನ್ನ ಫಸ್ಟ್ ಲುಕ್ ರಿಲೀಸ್ ಆಗಲಿದೆ. ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ, ಅರ್ಜುನ್ ಜನ್ಯ ಮೊದಲ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಾನು, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿದ್ದೇವೆ. ಈ ಚಿತ್ರ ಇಂಡಿಯನ್ ಸ್ಕ್ರೀನ್ ನಲ್ಲೇ ಉತ್ತಮ ಚಿತ್ರವಾಗಲಿದೆ ಎಂದು ನನ್ನ ನಂಬಿಕೆ. ಅದಕ್ಕೆ ದೇವರ ಆಶೀರ್ವಾದ ಬೇಕು. ಆ ದೇವರು ಎಂದರೆ ಅಪ್ಪಾಜಿ ಹೇಳಿದ ಹಾಗೆ ಅಭಿಮಾನಿಗಳು. ಅಭಿಮಾನಿ ದೇವರುಗಳು ಈ ಚಿತ್ರವನ್ನು ನೋಡಿ ಹಾರೈಸಿ” ಎಂದಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡಿರುವ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ಅಭಿನಯಿಸುತ್ತಿರುವ ಮಲ್ಟಿಸ್ಟಾರರ್ ಸಿನಿಮಾ “45”. ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿರುವ ಶಿವರಾಜಕುಮಾರ್ ಅವರಿಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ “45” ಚಿತ್ರತಂಡ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

ಕನ್ನಡ ಚಿತ್ರರಂಗದ ಮೂವರು ಹೆಸರಾಂತ ನಾಯಕನಟರ ಸಮಾಗಮದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ‌. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ‌. ಬಹು ನಿರೀಕ್ಷಿತ ಈ ಚಿತ್ರಕ್ಕೆ ಸದ್ಯದಲ್ಲೇ ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶ ಮೂವತ್ತು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ. ಇಷ್ಟು ದಿನಗಳ ಕಾಲ ಅಪಾರವೆಚ್ಚದಲ್ಲಿ, ಅದ್ದೂರಿಯಾಗಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿರುವುದು ಕನ್ನಡದಲ್ಲಿ ಇದೇ ಮೊದಲಿರಬಹುದು. ಸೆಪ್ಟೆಂಬರ್ ನಲ್ಲಿ “45” ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಲಿದೆ. ಇನ್ನು ಈ ಚಿತ್ರದ ನಿರ್ದೇಶಕ ಅರ್ಜುನ್ ಜನ್ಯ ಅವರು ಜನಪ್ರಿಯ ಸಂಗೀತ ನಿರ್ದೇಶಕರೇ ಆಗಿರುವುದರಿಂದ ಚಿತ್ರದ ಹಾಡುಗಳ ಬಗ್ಗೆ ಕೂಡ ಸಾಕಷ್ಟು ನಿರೀಕ್ಷೆಯಿದೆ.

ಇದನ್ನೂ ಓದಿ : ‘ಸಿಂಹಾಸನ’ ಚಿತ್ರಕ್ಕೆ ಮುಹೂರ್ತದ ಸಂಭ್ರಮ..!

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಖಾಸಗಿ ಬಸ್ಸನ್ನೇ ಕದ್ದು ಎಸ್ಕೇಪ್ ಆಗಿರೋ ಖತರ್ನಾಕ್ ಕಳ್ಳರು..!

ಚಿತ್ರದುರ್ಗ : ಖಾಸಗಿ ಬಸ್​​ವೊಂದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾಯಕನಹಟ್ಟಿ ಮೂಲದ SRE ಬಸ್ ಮಾಲೀಕ ಸಯ್ಯದ್

Live Cricket

Add Your Heading Text Here