Download Our App

Follow us

Home » ರಾಜ್ಯ » ಶಿರೂರು ಗುಡ್ಡ ಕುಸಿತ : 10ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ, ಪತ್ತೆಯಾದ ಲಾರಿಯನ್ನು ಮೇಲೆತ್ತಲು ಸಕಲ ಸಿದ್ಧತೆ..!

ಶಿರೂರು ಗುಡ್ಡ ಕುಸಿತ : 10ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ, ಪತ್ತೆಯಾದ ಲಾರಿಯನ್ನು ಮೇಲೆತ್ತಲು ಸಕಲ ಸಿದ್ಧತೆ..!

ಉತ್ತರ ಕನ್ನಡ : ಜಿಲ್ಲೆಯ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರ ರಕ್ಷಣಾ ಕಾರ್ಯಾಚರಣೆ ಇಂದು 10ನೇ ದಿನಕ್ಕೆ ಕಾಲಿಟ್ಟಿದೆ. ದುರಂತದಲ್ಲಿ ಒಟ್ಟು 10 ಮಂದಿ ನಾಪತ್ತೆಯಾಗಿದ್ದು, ಇದುವರೆಗೆ 7 ಮಂದಿಯ ಶವ ಪತ್ತೆಯಾಗಿದೆ. ಜತೆಗೆ ಮಣ್ಣಿನಲ್ಲಿ ಹುದುಗಿರುವ ಕೇರಳದ ಲಾರಿ ಪತ್ತೆಯಾಗಿದ್ದು, ಅದನ್ನು ಮೇಲಕ್ಕೆ ಎತ್ತಲು ಪ್ರಯತ್ನ ನಡೆಯುತ್ತಿದೆ.

ಕಾರ್ಯಾಚರಣೆ ವೇಳೆ ಲಾರಿಯ ಬಗ್ಗೆ ಬುಧವಾರ ಮಹತ್ವದ ಸುಳಿವು ಸಿಕ್ಕಿದ್ದು, ನಾಪತ್ತೆಯಾಗಿದ್ದ ಕೇರಳದ ಬೆಂಜ್ ಲಾರಿಯನ್ನು ರೆಡಾರ್​​ ಡ್ರೋನ್, GPRS ಟ್ರ್ಯಾಕ್ ಬೂಮ್ ಹಿಟಾಚಿ ಪತ್ತೆ ಮಾಡಿದೆ. ಗಂಗಾವಳಿ ನದಿ ತೀರದ 20 ಮೀಟರ್ ದೂರದಲ್ಲಿ 60 ಅಡಿ ಆಳದಲ್ಲಿ ತಲೆ ಕೆಳಗಾದ ಸ್ಥಿತಿಯಲ್ಲಿ ಲಾರಿ ಪತ್ತೆಯಾಗಿದೆ.

ಬೂಮ್ ಹಿಟಾಚಿ ಲಾರಿಯ ಸುಳಿವು ನೀಡುತ್ತಿದ್ದಂತೆ ಸ್ಥಳಕ್ಕೆ ತೆರಳಿದ NDRF ಸಿಬ್ಬಂದಿ ಇರುವಿಕೆಯನ್ನ ಖಚಿತಪಡಿಸಿದ್ದಾರೆ. ಸ್ವತಃ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಬೋಟ್​ನಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಸೇನೆ, ನೌಕಾಪಡೆ ಹಾಗೂ ಸ್ಯಾಟಲೈಟ್ ತಂತ್ರಜ್ಞಾನದಲ್ಲಿ ಟ್ರಕ್ ಮಾದರಿ ವಸ್ತು ಇರುವುದು ಪತ್ತೆಯಾಗಿದ್ದರಿಂದ ಪರಿಶೀಲನೆಯನ್ನು ತೀವ್ರಗೊಳಿಸಲಾಗಿತ್ತು.

ಪ್ರತಿಕೂಲ ಹವಾಮಾನ, ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಬುಧವಾರ ಇಳಿದು ಪರಿಶೀಲಿಸಲು ಸಾಧ್ಯವಾಗಿರಲಿಲ್ಲ. ಇಂದು ಮಳೆ ಕಡಿಮೆಯಿದ್ದಲ್ಲಿ ನೌಕಾನೆಲೆ ಮುಳುಗು ತಜ್ಞರು ಸಮೀಪಕ್ಕೆ ತೆರಳಿ ಶೋಧಿಸಲಿದ್ದಾರೆ.

ಲಾರಿ ಒಳಗೆ ಸಿಲುಕಿಕೊಂಡಿರುವ ಚಾಲಕ ಅರ್ಜುನ್ಗಾಗಿ ಹುಡುಕಾಟ ಮುಂದುವರಿಯಲಿದೆ. ಕ್ಯಾಬಿನ್​ನಲ್ಲಿ ಅವರಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಿ ಬಳಿಕ ಲಾರಿಯನ್ನು ಮೇಲಕ್ಕೆತ್ತಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿ ಪಾತ್ರದಲ್ಲಿ ಬಿದ್ದಿರುವ ಮಣ್ಣನ್ನ ತೆರವುಗೊಳಿಸಿ ಲಾರಿ ಒಳಗೆ ಶೋಧ ಕಾರ್ಯ ನಡೆಯಲಿದೆ. ಇದೇ ವೇಳೆ ನಾಪತ್ತೆಯಾದ ಜಗನ್ನಾಥ ಹಾಗೂ ಲೋಕೇಶ್​ ಅವರಿಗಾಗಿಯೂ ಸೇನೆ, NDRF ಮತ್ತು ನೌಕಾಪಡೆಗಳು ಹುಡುಕಾಟ ನಡೆಸಲಿವೆ.

ಇದನ್ನೂ ಓದಿ : ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸಿದ ಆರೋಪ – ಹಾಸನ ಹೂಡ ಕಮೀಷನರ್ ರಮೇಶ್ ವಿರುದ್ದ FIR ದಾಖಲು..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here