ಕಾರವಾರ : ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಕ್ಕೆ ಕೊನೆಗೂ ಫಲ ಸಿಕ್ಕಿದೆ. ಗುಡ್ಡ ಕುಸಿತದಿಂದ ಲಾರಿ ಸಮೇತ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್ ಶವವನ್ನ ಮುಳುಗು ತಜ್ಞರು ಪತ್ತೆ ಹಚ್ಚಿದ್ದಾರೆ.
ಗುಡ್ಡ ಕುಸಿತದ ಸಂದರ್ಭದಲ್ಲಿ ಅಪಾರ ಪ್ರಮಾಣದ ಮಳೆಯಾಗುತ್ತಿದ್ದ ಕಾರಣ ಗಂಗಾವಳಿ ನದಿ ಪ್ರವಾಹದಲ್ಲಿ ಲಾರಿ ಸಮೇತ ಅರ್ಜುನ್ ನಾಪತ್ತೆಯಾಗಿದ್ದರು. ಇದೀಗ ಮುಳುಗು ತಜ್ಞರ ಸತತ ಪ್ರಯತ್ನದಿಂದ 73 ದಿನಗಳ ನಂತರ ಲಾರಿ ಸಮೇತ ಅರ್ಜುನ್ ಮೃತದೇಹ ಪತ್ತೆಯಾಗಿದೆ.
ಜುಲೈ 16 ರಂದು ಸಂಭಿವಿಸಿದ್ದ ಗುಡ್ಡ ಭೂಕುಸಿತದಲ್ಲಿ ಕೇರಳದ ಮೂಲದ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಅರ್ಜುನ್ಗಾಗಿ ಸತತ ಕಾರ್ಯಾಚರಣೆ ನಡೆಸಿದ್ರು ಯಾವುದೇ ಸುಳಿವು ಸಿಕ್ಕಿರಲಿಲ್ಲ ಆದರೆಇದೀಗ ಗಂಗಾವಳಿ ನದಿಯಲ್ಲಿ ನಡೆಸಿದ 3ನೇ ಹಂತದ ಕಾರ್ಯಾಚರಣೆಯ 6ನೇ ದಿನ ಶವ ಮತ್ತು ಲಾರಿ ಎರಡನ್ನೂ ಪತ್ತೆ ಹಚ್ಚಲಾಗಿದೆ.
ಇದನ್ನೂ ಓದಿ : ಆಫೀಸ್ ಚೇರ್ ಬಳಸಿ ಆಟೋ ಓಡಿಸುವ ಚಾಲಕ – ಅರೇ.. ಹೀಗೂ ಮಾಡಬಹುದಲ್ವಾ ಎಂದ ನೆಟ್ಟಿಗರು..!