ಕಾಲಿವುಡ್ನ ಸ್ಟಾರ್ ಹೀರೋ ಸೂರ್ಯ ಸದ್ಯ ಕಂಗುವ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರ ನವೆಂಬರ್ 14 ರಂದು ಬಿಡುಗಡೆಯಾಗಲಿದೆ. ಇದೇ ವೇಳೆ ನಟನ ಸೆನ್ಸೇಷನಲ್ ವಿಚಾರವೊಂದು ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಹೌದು.. ಸ್ಟಾರ್ ಜೋಡಿ ಎಂದೇ ಖ್ಯಾತಿ ಪಡೆದಿರುವ ನಟ ಸೂರ್ಯ ಹಾಗೂ ಜ್ಯೋತಿಕಾ ಅವರು, ಸದ್ಯ ಚೆನ್ನೈ ತೊರೆದು ಮುಂಬೈನಲ್ಲಿ ನೆಲೆಸಿದ್ದಾರೆ. ಯಾಕೆ ಈ ಕಪಲ್ಸ್ ಚೆನ್ನೈ ಬಿಟ್ಟು ಹೋಗಿದ್ದು? ಯಾಕೆ ಮುಂಬೈ ಸೇರಿಕೊಂಡು ಅಲ್ಲಿ ಜೀವನ ನಡೆಸುತ್ತಿರುವುದು ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹಲವರು ಟೀಕೆ ಸಹ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಈ ಕುರಿತು ‘ಸ್ಟಾರ್ ನಟರಾಗಿರುವ ಸೂರ್ಯ ಅವರಿಗೆ ತಮಿಳುನಾಡು ಹಾಗೂ ಚೆನ್ನೈ ಎಲ್ಲವನ್ನೂ ಕೊಟ್ಟಿದೆ. ಆದರೆ ಅವರು ಈ ನಲೆವನ್ನೇ ಬಿಟ್ಟು ಮುಂಬೈಗೆ ಶಿಫ್ಟ್ ಆಗಿ ತಾಯ್ನೆಲಕ್ಕೇ ದ್ರೋಹವೆಸಗಿದ್ದಾರೆ’ ಎಂದು ಕುಟುಕಿದ್ದಾರೆ. ಇನ್ನೂ ಕೆಲವರು ಅವರು ತಮಿಳು ಸಿನಿಮಾರಂವನ್ನೇನೂ ಬಿಟ್ಟಿಲ್ಲ. ಆದರೆ, ಮನೆಯನ್ನು ಮುಂಬೈಗೆ ಶಿಫ್ಟ್ ಮಾಡಿದ್ದಾರೆ ಅಷ್ಟೇ. ಅದರಲ್ಲೇನು ಪ್ರಾಬ್ಲಂ?’ ಎಂದು ನಟ ಸೂರ್ಯ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಒಬ್ಬರು ಕೇಳಿರುವ ಪ್ರಶ್ನೆಗೆ ಸ್ವತಃ ಸ್ಟಾರ್ ನಟ ಸೂರ್ಯ ಅವರೇ ಇದೀಗ ಉತ್ತರಿಸಿದ್ದು, ’25 ವರ್ಷದ ಹಿಂದೆ ಅವಳು (ಜ್ಯೋತಿಕಾ) ನನಗೋಸ್ಕರ ತನ್ನ ಕೆರಿಯರ್, ಫ್ರಂಡ್ಸ್ ಮತ್ತು ಸಂಬಂಧಿಕರನ್ನು ಬಿಟ್ಟು ಮುಂಬೈನಿಂದ ಚೆನ್ನೈಗೆ ಬಂದಳು. ಈಗ ನಾನು ಅವಳಿಗೋಸ್ಕರ ಚೆನ್ನೈ ಬಿಟ್ಟು ಮುಂಬೈಗೆ ಶಿಫ್ಟ್ ಆಗಿದ್ದೇನೆ..’ ಎಂದಿದ್ದಾರೆ.
ಅಲ್ಲಿಗೆ ನಟ ಸೂರ್ಯ ಅವರು ತಮ್ಮ ಪತ್ನಿ ಜ್ಯೋತಿಕಾ ಆಸೆಯಂತೆ ಚೆನ್ನೈ ಬಿಟ್ಟು ಮುಂಬೈಗೆ ತಮ್ಮ ವಾಸ ಬದಲಿಸಿದ್ದಾರೆ ಎಂಬುದು ಖಾತ್ರಿ ಆದಂತಾಯಿತು. ಇನ್ನಾದರೂ ಏನೇನೋ ಊಹಿಸಿ ಮಾತನಾಡುವ ಬಾಯಿಗಳು ಬಂದ್ ಆದರೆ ಒಳ್ಳೆಯದು ಎಂದು ನಟ ಸೂರ್ಯ ಹಾಗೂ ಜ್ಯೋತಿಕಾ ಫ್ಯಾನ್ಸ್ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲಿಗರ ಕಾಲೆಳೆದಿದ್ದಾರೆ.
ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ ಡಬಲ್ ಮರ್ಡರ್.. ಬೆಚ್ಚಿಬಿದ್ದ ಬೆಂಗಳೂರಿಗರು..!