ಬೆಂಗಳೂರು : ಲೈಂಗಿಕ ಕಿರುಕುಳದ ಆರೋಪದ ಮೇಲೆ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಯುವತಿಯ ದೂರಿನ ಮೇರೆಗೆ ನರ್ಸಿಂಘಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಿವುಡ್ನಿಂದ ಸ್ಯಾಂಡಲ್ವುಡ್ವರೆಗೂ ಕೆಲಸ ಮಾಡಿರೋ ಜಾನಿ ಮಾಸ್ಟರ್, ಅನೇಕ ಸ್ಟಾರ್ಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಕನ್ನಡದ ಅಕೀರ ಸಿನಿಮಾಗೆ ಮೊದಲು ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದ ಜಾನಿ ಮಾಸ್ಟರ್ ಸುದೀಪ್, ಅಲ್ಲು ಅರ್ಜುನ್, ಪುನೀತ್ ಸಿನಿಮಾಗಳಿಗೂ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದರು. ಆದರೆ ಇದೀಗ ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ವಿರುದ್ದ ನರ್ಸಿಂಘಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಆರೋಪದಲ್ಲಿ FIR ದಾಖಲು ದಾಖಲಾಗಿದೆ.
ಯುವತಿ ನೀಡಿರುವ ದೂರಿನಲ್ಲಿ, ಚೆನ್ನೈ, ಮುಂಬೈ, ಹೈದರಾಬಾದ್ಗೆ ಜಾನಿ ಮಾಸ್ಟರ್ ಜೊತೆ ಹೋಗಿದ್ದೆ. ಶೂಟಿಂಗ್ಗಾಗಿ ವಿವಿಧ ನಗರಗಳಿಗೆ ಹೋದಾಗ ಜಾನಿ ಮಾಸ್ಟರ್ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರು ನರ್ಸಿಂಘಿಯಲ್ಲಿರುವ ತನ್ನ ನಿವಾಸದಲ್ಲಿ ಹಲವಾರು ಬಾರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರೆ ಹೇಳಿದ್ದಾಳೆ. ಯುವತಿಯ ದೂರಿನ ಮೇರೆಗೆ FIR ದಾಖಲಿಸಿದ ಪೊಲೀಸರು ಲೈಂಗಿಕ ಕಿರುಕುಳ ತಡೆ (PoSH) ಕಾಯ್ದೆಯಡಿ ಆಂತರಿಕ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಸ್ನಾನ ಮಾಡೋ ವೀಡಿಯೋ ಶೇರ್ ಮಾಡಿದ ವೈಷ್ಣವಿ ಗೌಡ – ಕ್ಯಾಮರಮೆನ್ ಅದೃಷ್ಟವಂತ ಎಂದ ನೆಟ್ಟಿಗರು..!