Download Our App

Follow us

Home » ಸಿನಿಮಾ » 15 ಹೀರೋಯಿನ್​ಗಳ ವಿರುದ್ಧ ತನಿಖೆ ಮಾಡಲು ಸರ್ಕಾರಕ್ಕೆ ರಹಸ್ಯ ಪತ್ರ.. ಸ್ಯಾಂಡಲ್​ವುಡ್​​ ಸೆನ್ಸೇಷನ್ ನ್ಯೂಸ್..!

15 ಹೀರೋಯಿನ್​ಗಳ ವಿರುದ್ಧ ತನಿಖೆ ಮಾಡಲು ಸರ್ಕಾರಕ್ಕೆ ರಹಸ್ಯ ಪತ್ರ.. ಸ್ಯಾಂಡಲ್​ವುಡ್​​ ಸೆನ್ಸೇಷನ್ ನ್ಯೂಸ್..!

ಚಿತ್ರರಂಗದಲ್ಲಿ ಮತ್ತೆ ಮೀಟೂ ಚರ್ಚೆ ಜೋರಾಗಿದೆ. ಮಲಯಾಳಂ ಸಿನಿಮಾ ಇಂಡಸ್ಟ್ರಿ ಕುರಿತ ಹೇಮಾ ಸಮಿತಿ ವರದಿ ಬಳಿಕ ಇಂಡಸ್ಟ್ರಿಯಲ್ಲಿ ಅಲ್ಲೋಲ-ಕಲ್ಲೋಲವೇ ಆಗಿದೆ. ಅನೇಕ ನಟಿಯರು ತನಗಾದ ಅವಮಾನದ ಬಗ್ಗೆ ಧೈರ್ಯವಾಗಿ ಮಾತಾಡ್ತಿದ್ದಾರೆ. ಇದೇ ವೇಳೆ ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚನೆ ಆಗ್ಬೇಕು ಎನ್ನುವ ಕೂಗು ಜೋರಾಗಿದೆ. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸಮಿತಿ ರಚಿಸಬೇಕು ಎಂದು ಚಂದನವನದ ಖ್ಯಾತ ನಟ ನಟಿಯರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಬೆನ್ನಲ್ಲೇ ಇದೀಗ ಸ್ಯಾಂಡಲ್​​​​ವುಡ್ ಕಾಸ್ಟಿಂಗ್ ಕೌಚ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಿನಿಮಾ, ಸೀರಿಯಲ್​​ಗಳಲ್ಲಿ ನಟಿಸಿರುವವರ ಬಗ್ಗೆ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಈ ಕುರಿತು ಇಬ್ಬರು ನಟಿಯರು ಸರ್ಕಾರಕ್ಕೆ ರಹಸ್ಯ ಪತ್ರ ಬರೆದಿದ್ದಾರೆ. 5 ಮಂದಿ ಸಿನಿಮಾರಂಗದ ಬಡ್ಡಿಂಗ್ ಹೀರೋಯಿನ್​ಗಳ ಹಾಗೂ 10 ಮಂದಿ ಸೀರಿಯಲ್ ಹೀರೋಯಿನ್​ಗಳ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಿ ತನಿಖೆ ನಡೆಸುವಂತೆ ಇಬ್ಬರು ನಟಿಯರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ರಹಸ್ಯ ಪತ್ರ ಬರೆದಿರುವುದನ್ನು ನಟಿಯರು ಬಿಟಿವಿಗೆ ಖಚಿತಪಡಿಸಿದ್ದು, ತಮ್ಮ ಹೆಸರು ಬಹಿರಂಗಪಡಿಸದಂತೆ ಷರತ್ತು ಹಾಕಿದ್ದಾರೆ. ಕಳೆದ 3 ವರ್ಷದ ಅವಧಿಯಲ್ಲಿ ನಡೆದಿರೋ ದಂಧೆಯ ಇಂಚಿಂಚೂ ವಿವರಣೆ ನೀಡಿ, ಒಂದು ಅಥವಾ ಎರಡು ಸಿನಿಮಾ ಮಾಡಿರುವ ಐವರು ಬಡ್ಡಿಂಗ್​ ಹೀರೋಯಿನ್​ಗಳು ಹಾಗೂ ಸೀರಿಯಲ್​ಗಳಲ್ಲಿ ಲೀಡ್ ರೋಲ್ ಮಾಡಿರುವ 10 ಮಂದಿ ನಟಿ ಮಣಿಯರ ಕುರಿತು ಸರ್ಕಾರಕ್ಕೆ ಸೀಕ್ರೆಟ್​ ಪತ್ರ ಬರೆಯಲಾಗಿದೆ.

ಹಲವು ಪೊಲಿಟಿಷಿಯನ್​​ಗಳು ಅಥವಾ ಅವರ ಮಕ್ಕಳೇ ಇವರ ಟಾರ್ಗೆಟ್ ಆಗಿದ್ದು, ರಿಯಲ್ ಎಸ್ಟೇಟ್ ಬ್ಯುಸಿನೆಸ್​ ಮ್ಯಾನ್​ಗಳು, ಶ್ರೀಮಂತರಿಗೂ ಗಾಳ ಹಾಕಲಾಗಿದೆ. ನಟಿ ಮಣಿಯರು ಮೊದಲು ಪರಿಚಯ ಮಾಡಿಕೊಳ್ಳುವುದು ನಂತರ ಬೆಂಗಳೂರಿನ ಪ್ರತಿಷ್ಠಿತ ಫೈವ್​​​ ಸ್ಟಾರ್ ಹೊಟೇಲ್​ಗಳಿಗೆ ಕರೆಸೋದು, ಕ್ಯಾಂಡಲ್ ಲೈಟ್ ಡಿನ್ನರ್​ಗೆ ಕರೆದುಕೊಂಡು ಹೋಗಿ ಬೆಂಗಳೂರು ಹೊರವಲಯದ ಕೆಲವು ಫಾರ್ಮ್​​ಹೌಸ್​ಗಳಲ್ಲಿ, ರೆಸಾರ್ಟ್​ಗಳಲ್ಲಿ ಗಾಂಜಾ ಪಾರ್ಟಿ ಮತ್ತು ಡ್ರಗ್ಸ್ ಪಾರ್ಟಿ ಮಾಡಿಸುತ್ತಾರೆ ಎನ್ನಲಾಗಿದೆ.

ಇನ್ನು ದುಬೈ , ಥೈಲ್ಯಾಂಡ್, ಮಾಲ್ಡೀವ್ಸ್​ಗೆ ಕರೆದೊಯ್ಯೋದು ಬಳಿಕ ಫೋಟೋ, ವಿಡಿಯೋ ತೋರಿಸಿ ಬ್ಲಾಕ್​ಮೇಲ್​ ಮಾಡಿಸುವ ದಂಧೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಸ್ಯಾಂಡಲ್​​​​ವುಡ್​ನ 15 ಹೀರೋಯಿನ್​ಗಳ ವಿರುದ್ದ ಕೇಳಿಬಂದಿದೆ. ಈ ನಟಿ ಮಣಿಯರು ರಾಜಕಾರಣಿಗಳು, ಉದ್ಯಮಿಗಳಿಂದ ಹಣ ಕಿತ್ತು ಬಿಂದಾಸ್​ ಲೈಫ್​​ ನಡೆಸುತ್ತಿದ್ದು, ಈ ಹಣದಲ್ಲಿ ಫ್ಲಾಟ್, ಬಂಗಲೆ, BMW ಕಾರನ್ನು ಖರೀದಿ ಮಾಡಿದ್ದಾರೆ. RR ನಗರ, JP ನಗರ, ನಾಗರಭಾವಿ, ಹೆಸರುಘಟ್ಟ ರಸ್ತೆ, ಯಲಹಂಕಗಳಲ್ಲಿ ನಟಿ ಮಣಿಯರು ಕೋಟಿ-ಕೋಟಿ ಆಸ್ತಿ ಮಾಡಿದ್ದಾರೆ.

ಸದ್ಯ ಈ ದಂಧೆ ನಡೆಸುತ್ತಿರುವ ನಟಿ ಮಣಿಯರ ಆಸ್ತಿಯ ಸಂಪೂರ್ಣ ವಿವರಣೆ ನೀಡಿ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಈ 15 ಮಂದಿಯ ಫೋನ್ ನಂಬರ್​ಗಳನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇವರೆಲ್ಲರ ಬಗ್ಗೆ ರಹಸ್ಯ ತನಿಖೆ ನಡೆಸಿ ಹಲವರ ಜೀವ ಉಳಿಸಿ ಎಂದು ಪತ್ರ ಬರೆಯಲಾಗಿದೆ. ರಹಸ್ಯ ಪತ್ರ ರಾಜ್ಯ ಸರ್ಕಾರಕ್ಕೆ ತಲುಪಿದ್ದು, 5 ಮಂದಿ ಹಿರಿತೆರೆ ನಟಿಯರು, 10 ಸೀರಿಯಲ್​ ನಟಿಯರು ಸೇರಿ 15 ಮಂದಿ ನಟಿ ಮಣಿಯರ ಸಂಪೂರ್ಣ ಜಾತಕ ಪತ್ರದಲ್ಲಿದೆ. ಯಾರಿಗೆ ಬ್ಲಾಕ್​ ಮೇಲ್​ ಮಾಡಿದ್ದಾರೆ ಈ 15 ನಟಿಯರು? ಐಷಾರಾಮಿ ಕಾರ್​​​ ಖರೀದಿಸೋದು ಯಾರು? ಎಲ್ಲಿ ಐಶಾರಾಮಿ ಫ್ಲಾಟ್​, ಬಂಗಲೆ ತಗೆದುಕೊಂಡಿದ್ದಾರೆ? ಎಲ್ಲೆಲ್ಲಿ ಗಾಂಜಾ ಡ್ರಗ್ಸ್ ಪಾರ್ಟಿ ಮಾಡಿದ್ದರು? ಯಾರ ಜೊತೆ ಫಾರಿನ್ ಟ್ರಿಪ್ ಮಾಡಿದ್ದರು? ರಾಜಕಾರಣಿಗಳು ಯಾರು? ಅವರ ಮಕ್ಕಳು ಯಾರು? ಉದ್ಯಮಿಗಳ್ಯಾರು? ಎಲ್ಲವನ್ನೂ ರಹಸ್ಯ ಪತ್ರದಲ್ಲಿದೆ ಸಂಪೂರ್ಣ ಜಾತಕ ಸಮೇತ ಉಲ್ಲೇಖಿಸಲಾಗಿದೆ. ಸದ್ಯ ಆ ಇಬ್ಬರು ನಟಿಯರು ಬರೆದಿರೋ ಪತ್ರ ಸ್ಯಾಂಡಲ್​​​​ವುಡ್ ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಸುನಾಮಿ ಸೃಷ್ಟಿಸುತ್ತಾ ಎಂದು ಕಾದು ನೋಡಬೇಕು.

ಇದನ್ನೂ ಓದಿ : ಕಾಸ್ಟಿಂಗ್ ಕೌಚ್​​ಗೆ ಕೋಟಿ ಕೊಟಿ ಕುಳಗಳ ಹಿಂದೆ ಹೋಗೋರೆ ಕಾರಣ – ನಟಿ ಮೇಘನಾ ಸಾಕ್ಷಿ ಸ್ಫೋಟಕ ಹೇಳಿಕೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here