Download Our App

Follow us

Home » ರಾಜ್ಯ » ಇಂದು ದ್ವಿತೀಯ ಪಿಯುಸಿ ಪರೀಕ್ಷೆ-03ರ ಫಲಿತಾಂಶ ಪ್ರಕಟ – ನೋಡೋದು ಹೇಗೆ? ಇಲ್ಲಿದೆ ಮಾಹಿತಿ..!

ಇಂದು ದ್ವಿತೀಯ ಪಿಯುಸಿ ಪರೀಕ್ಷೆ-03ರ ಫಲಿತಾಂಶ ಪ್ರಕಟ – ನೋಡೋದು ಹೇಗೆ? ಇಲ್ಲಿದೆ ಮಾಹಿತಿ..!

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ್ದ 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-03ರ ಫಲಿತಾಂಶ ಇಂದು ಪ್ರಕಟವಾಗಲಿದೆ. ಜುಲೈ 16ರ ಮಧ್ಯಾಹ್ನ 3 ಗಂಟೆಗೆ ಅಧಿಕೃತ http//karresults.nic.in ವೆಬ್​​ ಸೈಟ್​ನಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.

ಜೂನ್​ 24ರಿಂದ ಜುಲೈ 05ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-03 ನಡೆಸಲಾಗಿತ್ತು. ಕರ್ನಾಟಕದ ನಾನಾ ಜಿಲ್ಲೆ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಬಳಿಕ ಮೌಲ್ಯಮಾಪನವೂ ಮಾಡಲಾಗಿತ್ತು. ಇದೀಗ ಇಂದು ಫಲಿತಾಂಶ ಪ್ರಕಟಿಸಲಾಗುತ್ತಿದೆ. ದ್ವಿತೀಯ ಪಿಯುಸಿ ಮೊದಲ ವರ್ಷದ ಮೂರನೇ ಪರೀಕ್ಷೆ ರಾಜ್ಯದಲ್ಲಿ ಒಟ್ಟು 248 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಸಿಸಿಟಿವಿ ಕಣ್ಗಾವಲಿನಲ್ಲಿ ಪರೀಕ್ಷೆಗಳು ನಡೆದಿದ್ದವು. ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ವಿಚಕ್ಷಣ ದಳಗಳನ್ನು ನಿಯೋಜಿಸಲಾಗಿತ್ತು.

ಫಲಿತಾಂಶ ನೋಡುವುದು ಹೇಗೆ?

  • ಮೊದಲು, ಅಧಿಕೃತ ಕೆಎಸ್​​​​ಇಎಬಿ (KSEAB) ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಇತ್ತೀಚಿನ ಸುದ್ದಿ ವಿಭಾಗದಲ್ಲಿ 2ನೇ ಪಿಯುಸಿ ಪರೀಕ್ಷೆ 3 ಫಲಿತಾಂಶ ಲಿಂಕ್ ಮೇಲೆ ಕ್ಲಿಕ್​ ಮಾಡಿ.
  • ನೋಂದಣಿ ಸಂಖ್ಯೆ ಅಥವಾ ಜನ್ಮದಿನಾಂಕ ಮೂಲಕ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
  • ಒಮ್ಮೆ ನೀವು ವಿವರಗಳನ್ನು ಸಲ್ಲಿಸಿದ ಬಳಿಕ ಕ್ಯಾಪ್ಚಾವನ್ನು ನಮೂದಿಸಿ ಸಬ್​​ಮಿಟ್​​ ಬಟನ್ ಅನ್ನು ಕ್ಲಿಕ್​ ಮಾಡಿ.
  • ನಿಮ್ಮ 2ನೇ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶಗಳು ನಿಮ್ಮ ಪರದೆಯ ಮೇಲೆ ಗೋಚರಿಸುತ್ತದೆ.
  • ವೆಬ್‌ಸೈಟ್‌ನಿಂದ ತಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಕೊಳ್ಳಿ.

ಇದನ್ನೂ ಓದಿ : ಮುರುಘಾ ಶ್ರೀ ಬೆಳ್ಳಿ ಮೂರ್ತಿ ನಾಪತ್ತೆ ಕೇಸ್ ದಾಖಲಾಗ್ತಿದ್ದಂತೆ ಮಠದ ಆವರಣದಲ್ಲೇ ಪತ್ತೆ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here