Download Our App

Follow us

Home » ಜಿಲ್ಲೆ » ಕಲಬುರಗಿಯಲ್ಲಿ ಬಸ್ ಕಂಡಕ್ಟರ್ ಆದ ಶಾಲಾ ವಿದ್ಯಾರ್ಥಿನಿ : ವಿಡಿಯೋ ವೈರಲ್..!

ಕಲಬುರಗಿಯಲ್ಲಿ ಬಸ್ ಕಂಡಕ್ಟರ್ ಆದ ಶಾಲಾ ವಿದ್ಯಾರ್ಥಿನಿ : ವಿಡಿಯೋ ವೈರಲ್..!

ಕಲಬುರಗಿ : ಶಾಲಾ ವಿದ್ಯಾರ್ಥಿನಿಯೊಬ್ಬಳು ಬಸ್ ಕಂಡಕ್ಟರ್ ಆಗಿ ಪ್ರಯಾಣಿಕರಿಗೆ ಟಿಕೆಟ್ ನೀಡುವ ಮೂಲಕ ಗಮನ ಸೆಳೆದಿದ್ದಾಳೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿಯಲ್ಲಿ ವಿದ್ಯಾರ್ಥಿನಿ ವಿದ್ಯಾ ಟಿಕೆಟ್ ವಿತರಣೆ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ.

ಅಫ್ಜಲಪುರ ಪಟ್ಟಣದಿಂದ ಘತ್ತರಗಾ ಗ್ರಾಮ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್‌ನಲ್ಲಿ ವಿದ್ಯಾರ್ಥಿನಿ ಟಿಕೆಟ್ ವಿತರಣೆ ಮಾಡಿದ್ದು, ಇಟಿಎಂ ಟಿಕೆಟ್ ಮಿಷನ್ ಪಡೆದು ಹೇಗೆ ನಿರ್ವಹಿಸಬೇಕೆಂಬುದರ ಬಗ್ಗೆ ಮಾಹಿತಿ ಪಡೆದು ವಿದ್ಯಾ ಟಿಕೆಟ್ ನೀಡಿದ್ದಾಳೆ. ಬಸ್‌ನಲ್ಲಿ ಪ್ರಯಾಣಿಕರಿಗೆ ಶಕ್ತಿ ಯೋಜನೆ ಹಾಗೂ ಸಾಮಾನ್ಯ ಟಿಕೆಟ್ ವಿತರಿಸಿದ್ದಾಳೆ.

ವಿದ್ಯಾರ್ಥಿನಿ ವಿದ್ಯಾ ಭವಿಷ್ಯದಲ್ಲಿ ಸಾರಿಗೆ ಇಲಾಖೆಯಲ್ಲಿ ಬಸ್ ಕಂಡಕ್ಟರ್ ಆಗುವ ಕನಸು ಕಟ್ಟಿಕೊಂಡಿದ್ದಾಳೆ. ಹಾಗಾಗಿ ತನ್ನ ಆಸೆಯನ್ನು ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾಳೆ. ವಿದ್ಯಾರ್ಥಿನಿಯ ಕನಸಿಗೆ ಸ್ಪಂದಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಟಿಕೆಟ್ ವಿತರಣೆಯ ತರಬೇತಿ ನೀಡಿದ್ದಾರೆ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯಗೆ 10 ಸಾವಿರ ದಂಡ : ಜನಪ್ರತಿನಿಧಿಗಳ ಕೋರ್ಟ್‌ ಸೂಚನೆ..!

Leave a Comment

DG Ad

RELATED LATEST NEWS

Top Headlines

ಅಭ್ಯರ್ಥಿ ಡಿಸೈಡ್ ಮಾಡೋದು ಬಿಜೆಪಿ ವರಿಷ್ಠರು ಮತ್ತು ನಾನು – ಯೋಗೇಶ್ವರ್​ಗೆ HDK ಟಾಂಗ್​​​..!

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ತೆರವಾಗಿರುವ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ನಡುವೆ ಚನ್ನಪಟ್ಟಣ

Live Cricket

Add Your Heading Text Here