ಬಿಗ್ ಬಾಸ್ ಕನ್ನಡ ಸೀಸನ್ 11ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿಯ ಸ್ಪರ್ಧಿಗಳು, ಜಗಳ, ಪರಸ್ಪರ ನಿಂದನೆ, ಜಿದ್ದಾ-ಜಿದ್ದಿನಲ್ಲೇ ಹೆಚ್ಚು ತೊಡಗಿದ್ದಾರೆ. ಗೆಲ್ಲುವ ಕಾರಣಕ್ಕೆ ನಿಯಮಗಳನ್ನು ಸಹ ಮುರಿದಿದ್ದಾರೆ. ಇದೀಗ ಮಂಗಳವಾರದ ಎಪಿಸೋಡ್ನ ಹೊಸ ಪ್ರೋಮೋ ಒಂದು ಬಿಡುಗಡೆ ಆಗಿದ್ದು, ಮನೆಯ ಸ್ಪರ್ಧಿಗಳು ಮತ್ತೊಂದು ನಿಯಮ ಮುರಿದಿದ್ದಾರೆ. ನಿಯಮ ಮುರಿದ ಕೆಲವೇ ನಿಮಿಷಗಳಲ್ಲಿ ಬಿಗ್ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೆ ಕಠಿಣವಾದ ಶಿಕ್ಷೆ ನೀಡಿದ್ದಾರೆ.
ಹೌದು, ಬಿಗ್ ಬಾಸ್ ಮನೆಯಲ್ಲಿ ನಡೆಯುವ ಟಾಸ್ಕ್‌ಗಳಿಗೆ ಗಾರ್ಡನ್ ಏರಿಯಾದಲ್ಲಿ ಪ್ರಾಪರ್ಟಿ ಹಾಗೂ ಅಗತ್ಯವಾದ ವಸ್ತುಗಳನ್ನು ರಹಸ್ಯವಾಗಿ ಇಡಲಾಗುತ್ತದೆ. ಬಿಗ್ ಬಾಸ್ ರೂಲ್ಸ್ ಬುಕ್‌ನಲ್ಲಿ ತಿಳಿಸುವವರೆಗೂ ಅದನ್ನು ಯಾವ ಸ್ಪರ್ಧಿಗಳಿಗೆ ನೋಡಲು ಅವಕಾಶ ಇರುವುದಿಲ್ಲ. ಇದು ಬಿಗ್ ಬಾಸ್ ಮನೆಯಲ್ಲಿರುವ ಬಹಳ ಪ್ರಮುಖವಾದ ನಿಯಮ.
ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ನೀಡುವ ಮುಂಚೆ ಬಿಗ್ ಬಾಸ್ ಮನೆಗೆ ಪರದೆ ಎಳೆಯಲಾಗುತ್ತದೆ. ಪರದೆ ಎಳೆದ ಸಮಯದಲ್ಲಿ ಮನೆಯ ಸದಸ್ಯರು ಅದನ್ನು ಮೀರಿ ಇಣುಕಿ ನೋಡುವಂತಿಲ್ಲ. ಆದರೆ ಇಂದು ಬಿಗ್ ಬಾಸ್ ಮನೆಯ ಕೆಲ ಸ್ಪರ್ಧಿಗಳು ಅತಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ.
ನರಕ ನಿವಾಸಿಗಳಾದ ಮಾನಸಾ, ಮೋಕ್ಷಿತಾ ಹಾಗೂ ಶಿಶಿರ್ ಬಿಗ್ ಬಾಸ್ ಮನೆಯಲ್ಲಿ ಪರದೆ ಎಳೆದಿದ್ದರೂ ಗಾರ್ಡನ್ ಏರಿಯಾ ಕಡೆಗೆ ಹೋಗಿ ಬಂದಿದ್ದಾರೆ. ಮಾನಸಾ ಅವರಂತೂ ಅಲ್ಲಿ ನೋಡಿ ಬಂದ ಟಾಸ್ಕ್ ಪ್ರಾಪರ್ಟಿ ಬಗ್ಗೆ ಇತರ ಸ್ಪರ್ಧಿಗಳ ಜೊತೆ ಚರ್ಚಿಸಿದ್ದಾರೆ. ಮುಂದಿನ ಟಾಸ್ಕ್ ಗೇಮ್ ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು ಓಡಿ ಹೋಗುವ ತರಹ ಇರೋದು. ನಾಲ್ಕು ಬೆಲ್ಟ್ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ರೂಲ್ಸ್ ಬ್ರೇಕ್ ಆಗುತ್ತಿದ್ದಂತೆ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. Blinds down ಆಗಿದ್ದಾಗ ಅದರಿಂದ ಆಚೆಗೆ ಇಣುಕಿ ನೋಡವಂತಿಲ್ಲ ಅನ್ನೋದು ಈ ಮನೆಯ ತುಂಬಾ ಮುಖ್ಯವಾದ ನಿಯಮ. ಈಗಷ್ಟೇ ಆ ಮೂಲ ನಿಯಮವನ್ನು ಕೆಲವು ಸದಸ್ಯರು ಉಲ್ಲಂಘಿಸಿದ್ದಾರೆ. ಈ ಕ್ಷಣದಿಂದ ಬಿಗ್ ಬಾಸ್ ಮನೆಯ ಎಲ್ಲಾ ಸದಸ್ಯರನ್ನು ನಾಮಿನೇಟ್ ಮಾಡುತ್ತಿದ್ದಾರೆ ಎಂದಿದ್ದಾರೆ. ಕೆಲವರು ಮಾಡಿರುವ ತಪ್ಪಿನಿಂದ ಇಡೀ ಮನೆಯವರೇ ಶಿಕ್ಷೆಗೆ ಗುರಿಯಾಗುವಂತೆ ಆಗಿದೆ.
ಇದನ್ನೂ ಓದಿ : ಜಮ್ಮು-ಕಾಶ್ಮೀರ, ಹರಿಯಾಣ ಫಲಿತಾಂಶ : ಟ್ವೀಟ್ನಲ್ಲೇ ಕಾಂಗ್ರೆಸ್ಗೆ ಕುಟುಕಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ..!