Download Our App

Follow us

Home » ಸಿನಿಮಾ » 2 ವರ್ಷಗಳ ನಂತ್ರ ಶೂಟಿಂಗ್ ಅಖಾಡದಲ್ಲಿ ಯಶ್ – ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ರಾಕಿ ವಾಕಿಂಗ್ ವಿಡಿಯೋ ವೈರಲ್..!

2 ವರ್ಷಗಳ ನಂತ್ರ ಶೂಟಿಂಗ್ ಅಖಾಡದಲ್ಲಿ ಯಶ್ – ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ರಾಕಿ ವಾಕಿಂಗ್ ವಿಡಿಯೋ ವೈರಲ್..!

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಬಹಳ ದೊಡ್ಡಮಟ್ಟದಲ್ಲೇ ಈ ಸಿನಿಮಾ ಪ್ಲ್ಯಾನ್ ನಡೀತಿದೆ. ಕೆವಿಎನ್‌ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಅಭಿಮಾನಿಗಳಂತೂ ಈ ಚಿತ್ರ ನೋಡಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಅನೌನ್ಸ್ ಬಳಿಕ ಅಭಿಮಾನಿಗಳಿಗೆ ಯಾವುದೇ ಹೊಸ ಅಪ್‌ಡೇಟ್ ಸಿಗಲಿಲ್ಲ. 3 ತಿಂಗಳಿಂದ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಗದೇ ಅಭಿಮಾನಿಗಳು ಬೇಸರಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ರಾಕಿ ಅಭಿಮಾನಿಗಳು ಮನವಿ ಕೂಡ ಮಾಡುತ್ತಿದ್ದರು.

ಸದ್ಯ ರಾಕಿಭಾಯಿ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, 2 ವರ್ಷಗಳ ನಂತ್ರ ಶೂಟಿಂಗ್ ಅಖಾಡದಲ್ಲಿ ರಾಕಿಂಗ್ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಇದೀಗ ಯಶ್ ಗೋವಾದಲ್ಲಿ ಬೀಡುಬಿಟ್ಟಿದ್ದು, ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ರಾಕಿ ವಾಕಿಂಗ್ ಮಾಡೋ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಗುರು… ನಮ್ ಬಾಸ್ ಶೂಟಿಂಗ್ ವಿಡಿಯೋ ಸಿಕ್ತು ಅಂತ ಯಶ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಖುಷಿಯಿಂದ ವಿಡಿಯೋ ಶೇರ್ ಮಾಡಿಕೊಳ್ತಿದ್ದಾರೆ.

ಅದ್ದೂರಿ ಬಜೆಟ್​ನಲ್ಲಿ ‘ಟಾಕ್ಸಿಕ್​’ ಸಿನಿಮಾ ಮೂಡಿಬರಲಿದ್ದು, ಮಹಿಳಾ ಡೈರೆಕ್ಟರ್​ ಜೊತೆ ಯಶ್​ ಅವರು ಕೈ ಜೋಡಿಸಿರುವುದು ವಿಶೇಷವೆಂದೇ ಹೇಳಬಹುದು. ಈ ಸಿನಿಮಾ ಮಾಸ್​ ಆಗಿ ಮೂಡಿಬರಲಿದೆ ಎಂಬುದಕ್ಕೆ ಶೀರ್ಷಿಕೆಯೇ ಸಾಕ್ಷಿ ಒದಗಿಸುತ್ತಿದೆ. ಯಶ್ ಪ್ಲಾನ್ ಪ್ರಕಾರ ಶೂಟಿಂಗ್ ಮುಗಿಸಿದ್ರೆ, ಈ ವರ್ಷದ ಕೊನೆಯಲ್ಲಿ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ‘ಸತ್ಯ’ ಕಿರುಚಿತ್ರದ ಟ್ರೈಲರ್ ಬಿಡುಗಡೆ : ಇದು ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಥೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here