Download Our App

Follow us

Home » ಮೆಟ್ರೋ » ರಾಕ್‌ಲೈನ್‌ ವೆಂಕಟೇಶ್‌ ಮಾಲೀಕತ್ವದ ರಾಕ್‌ಲೈನ್‌ ಮಾಲ್ ಸೀಜ್.!

ರಾಕ್‌ಲೈನ್‌ ವೆಂಕಟೇಶ್‌ ಮಾಲೀಕತ್ವದ ರಾಕ್‌ಲೈನ್‌ ಮಾಲ್ ಸೀಜ್.!

ಬೆಂಗಳೂರು : ಬೆಂಗಳೂರಲ್ಲಿ ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ಮಾಲ್​​ನ್ನು ಬಾಕಿ ತೆರಿಗೆ ಪಾವತಿಸದ ಕಾರಣ BBMP ಅಧಿಕಾರಿಗಳು ಇಂದು ಸೀಜ್ ಮಾಡಿದ್ದಾರೆ.

ರಾಕ್ ಲೈನ್ ಮಾಲ್ 2011 ರಿಂದ 2023 ರವರೆಗೆ 11.51 ಕೋಟಿ ರೂ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದೆ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿದ್ದು, ಬಾಕಿ ತೆರಿಗೆ ಪಾವತಿಸಲು ಈಗಾಗಲೇ ಡಿಮಾಂಡ್ ನೋಟೀಸ್ ನೀಡಿದ್ದರು. ಆದರೂ ತೆರಿಗೆಯನ್ನು ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ.

ತೆರಿಗೆ ಪಾವತಿ ಬಾಕಿ ಉಳಿಸಿಕೊಂಡ ಆರೋಪದ ಮೇಲೆ ಇಂದು ಕಂದಾಯ ಅಧಿಕಾರಿ ಈಶ್ವರ್ ನೇತೃತ್ವದಲ್ಲಿ ರಾಕ್ ಲೈನ್ ಮಾಲ್ ಅನ್ನು ಸೀಜ್ ಮಾಡಲಾಗಿದೆ. ಸ್ಥಳಕ್ಕೆ ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತರಾದ ಬಾಲಶೇಖರ್, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

ಇದನ್ನೂ ಓದಿ : ಶಾಸಕ ಕೆ.ಗೋಪಾಲಯ್ಯಗೆ ಕೊಲೆ ಬೆದರಿಕೆ : ಮಾಜಿ ಕಾರ್ಪೊರೇಟರ್ ಪದ್ಮರಾಜ್​​ ವಿರುದ್ಧ ಆರೋಪ..!

Leave a Comment

DG Ad

RELATED LATEST NEWS

Top Headlines

‘ಎನ್ 1’ ಕ್ರಿಕೆಟ್ ಅಕಾಡೆಮಿಯಿಂದ ಹೊಸ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ..!

ಕಿರುತೆರೆ ಕಲಾವಿದರಿಗಾಗಿ TPL-ಟೆಲಿವಿಷನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನಮೆಂಟ್ ನಡೆಸಿಕೊಂಡು ಬರುತ್ತಿರುವ ‘ಎನ್ 1’ ಕ್ರಿಕೆಟ್ ಅಕಾಡೆಮಿಯು ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ

Live Cricket

Add Your Heading Text Here