ಮೈಸೂರು : ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಾಯಕರು ಜಂಟಿಯಾಗಿ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ಮೈತ್ರಿ ನಾಯಕರ ಪಾದಯಾತ್ರೆಗೆ ಕೌಂಟರ್ ನೀಡಲು ಜನಾಂದೋಲನ ಸಭೆ ನಡೆಸಿದ್ದು, ಕೊನೆ ದಿನವಾದ ಇಂದು ಮೈಸೂರಿನಲ್ಲಿ ಬೃಹತ್ ಜನಾಂದೋಲನ ಸಭೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಈ ಬೃಹತ್ ಸಮಾವೇಶದಲ್ಲಿ ದೋಸ್ತಿಗಳ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ. ನನ್ನ ಜೊತೆ 136 ಮಂದಿ ಶಾಸಕರಿದ್ದಾರೆ. ಸರ್ಕಾರ ಉರುಳಿಸುವ ನಿಮ್ಮ ಸಂಚು ನಡೆಯಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ದೋಸ್ತಿ ನಾಯಕರ ವಿರುದ್ಧ ಗುಡುಗಿದ್ದಾರೆ.
ಆಗಸ್ಟ್ 9 ಕ್ವಿಟ್ ಇಂಡಿಯಾ ಚಳವಳಿಯ ದಿನ. ಆಗಸ್ಟ್ 9ರಂದೇ ಬಳ್ಳಾರಿ ಪಾದಯಾತ್ರೆ ಮಾಡಿದ್ದೆವು. ಮೈಸೂರಿನಲ್ಲಿ ಇಂದು ಸತ್ಯದ ಜಯಕ್ಕಾಗಿ ಆಂದೋಲನ ಮಾಡುತ್ತಿದ್ದೇವೆ. ಅಂದು ಬ್ರಿಟೀಷರ ವಿರುದ್ಧ, ಇಂದು NDA ವಿರುದ್ಧ ಹೋರಾಟ ಎಂದು ತಿಳಿಸಿದರು.
ಇನ್ನು ಸಿಎಂ ಪತ್ನಿ ಅಕ್ರಮವಾಗಿ ಸೈಟ್ ಪಡೆದಿಲ್ಲ. ತಮ್ಮ ಭೂಮಿ ಬಿಟ್ಟುಕೊಟ್ಟು ಬದಲಿ ಸೈಟ್ ಪಡೆದಿದ್ದಾರೆ. ಸೈಟ್ ದಾಖಲೆಗಳಿಗೆ ಸಿದ್ದರಾಮಯ್ಯ ಸೈನ್ ಮಾಡಿದ್ರಾ? ಸೈಟ್ ಕೊಟ್ಟವರೇ ಬಿಜೆಪಿ ಸಿಎಂ.ಬಿಜೆಪಿ ಅವಧಿಯಲ್ಲಿ 25 ಹಗರಣಗಳು ನಡೆದಿವೆ ಎಂದು ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಕ್ಲೀನ್ ಸ್ವಾಮಿಯಂತೆ. ವಿಜಯೇಂದ್ರ ನಿಮ್ಮ ತಂದೆ 2ಬಾರಿ ರಿಸೈನ್ ಮಾಡಿದ್ದೇಕೆ?ವಿದೇಶಕ್ಕೆ ಹಣ RTGS ಮಾಡಿದ್ಯಾರು? ಮಕ್ಕಳಿಗೋಸ್ಕರ ದಳದವ್ರು ಎಲ್ಲರನ್ನೂ ಪಕ್ಷದಿಂದ ಓಡಿಸಿದ್ದಾರೆ. ಸಿದ್ದು ಅಹಿಂದ ನಾಯಕ ಅಂತಾ ಟಾರ್ಗೆಟ್ ಮಾಡುತ್ತಿದ್ದಾರೆ. ಇನ್ನು ಸಿಎಂ, ಸಿಎಂ ಪತ್ನಿ ಕ್ಷಮಿಸಿದ್ರೂ ನಿಮ್ಮನ್ನ ಚಾಮುಂಡಿ ಕ್ಷಮಿಸಲ್ಲ ಎಂದು BJP-JDS ನಾಯಕರಿಗೆ ಡಿಕೆಶಿ ಡಿಚ್ಚಿ ಕೊಟ್ಟಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ‘ಭೀಮ’ನ ಅಬ್ಬರ – ಫಸ್ಟ್ ಡೇ.. ಫಸ್ಟ್ ಶೋ ಹೌಸ್ಫುಲ್ ಪ್ರದರ್ಶನ..!