ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರೋ “ಭೀಮ” ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಸುಮಾರು 250ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಭೀಮಾ ಚಿತ್ರ ಬಿಡುಗಡೆಯಾಗಿದ್ದು, ಈಗಾಗಲೇ ಹಲವೆಡೆ ಥಿಯೇಟರ್ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಮಿಡ್ ನೈಟ್ ಶೋ, ಫ್ಯಾನ್ ಶೋ ಯಾವುದೂ ಇಲ್ಲದೇ ಏಕಕಾಲದಲ್ಲಿ ಭೀಮ ಸಿನಿಮಾ ಎಲ್ಲೆಡೆ ಪ್ರದರ್ಶನ ನಡೆಸಲಾಗಿದೆ. ಈಗಾಗಲೇ ಸಖತ್ ಕ್ರೇಜ್ ಹುಟ್ಟಿಸಿರೋ ಭೀಮ ಸಿನಿಮಾ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. ಇಂದು ನಾಗರಪಂಚಮಿ ಹಬ್ಬದ ಜೊತೆ ಭೀಮನ ಹಬ್ಬವನ್ನು ದುನಿಯಾ ವಿಜಯ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಸಿನಿಮಾಗಳ ಆರ್ಭಟಕ್ಕೆ “ಭೀಮ” ಚಾಲನೆ ನೀಡಿದ್ದು, ಡ್ರಗ್ ಮಾಫಿಯಾ ಕಥಾಹಂದರಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಲಗ ನಂತ್ರ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟ ದುನಿಯಾ ವಿಜಯ್ ಸಕ್ಸಸ್ ಆಗಿದ್ದಾರೆ.
ಕೃಷ್ಣ ಸಾರ್ಥಕ್, ಜಗದೀಶ್ ಜಂಟಿಯಾಗಿ ನಿರ್ಮಿಸಿರೋ ಈ ಸಿನಿಮಾದ ಕರಲ್ ಫುಲ್ ಸಾಂಗ್ ಮೂಲಕ ಟ್ರೆಂಡ್ ಕ್ರಿಯೇಟ್ ಮಾಡಿದೆ. ದುನಿಯಾ ವಿಜಿ ಆ್ಯಕ್ಟಿಂಗ್ಗೆ ಪ್ರೇಕ್ಷಕರು ಫಿದಾ ಆಗಿದ್ದು, ರಾ ಆ್ಯಕ್ಷನ್ ಜೊತೆಗೆ ಬ್ಯೂಟಿಫುಲ್ ಲವ್ ಸ್ಟೋರಿ ಇರುವ ಈ ಚಿತ್ರದಲ್ಲಿ ಯುವ ನಟಿ ಅಶ್ವಿನಿ ನಾಯಕಿಯಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ.
ಈಗಾಗಲೇ ಬ್ಯಾಡ್ ಬಾಯ್ಸ್, ಐ ಲವ್ ಯೂ ಕಣೆ, ನೂರು ರೂಪಾಯಿ ಮಿಕ್ಸ್ ಎಂಬ ಹಾಡುಗಳು ಸೆನ್ಸೇಷನ್ ಕ್ರಿಯೇಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಭೀಮನ ಫಸ್ಟ್ ಎಂಟ್ರಿ ನೋಡಿ ಥಿಯೇಟರ್ ಒಳಗೆ ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಭೀಮ ಕ್ರೇಜ್ ಜೋರಾಗಿದ್ದು, ಥಿಯೇಟರ್ ಬಳಿ ನೂರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ದೊಡ್ಡ ಪರದೆ ಮೇಲೆ ತಮ್ಮ ನೆಚ್ಚಿನ ನಟನನ್ನು ಅಭಿಮನಿಗಳು ಕಣ್ತುಂಬಿಕೊಂಡಿದ್ದಾರೆ.
ಇದನ್ನೂ ಓದಿ : ದೆಹಲಿ ಅಬಕಾರಿ ನೀತಿ ಹಗರಣ – ಮನೀಶ್ ಸಿಸೋಡಿಯಾಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್..!