ವಿಜಯನಗರ : ವಿಜಯನಗರದಲ್ಲಿ ಚಲಿಸುತ್ತಿದ್ದ ಸರ್ಕಾರಿ ಬಸ್ನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್ನಿಂದ 9 ತೊಲೆ ಚಿನ್ನದ ಒಡವೆ ಕಳ್ಳತನವಾಗಿದೆ. ಪ್ರಯಾಣಿಕರ ಸೋಗಿನಲ್ಲಿ ಅಂಬಮ್ಮ ಎಂಬುವವರ ಬಂಗಾರಕ್ಕೆ ಕನ್ನ ಹಾಕಿದ್ದು, ಹೊಸಪೇಟೆಯಿಂದ ಕೊಪ್ಪಳ ಕಡೆ ಹೊರಟಿದ್ದ ವೇಳೆ ಭಾರೀ ಹೈಡ್ರಾಮಾ ನಡೆದಿದೆ.
ಮುನಿರಾಬಾದ್ ಬಳಿ ಬಸ್ ನಿಲ್ಲಿಸಿ ಅಂಬಮ್ಮ ಹಾಗೂ ಅವರ ಮಗಳು ಬಂಗಾರವಿಲ್ಲವೆಂದು ರಾದ್ಧಾಂತ ಮಾಡಿದ್ದಾರೆ. ಹಾಗಾಗಿ ಡ್ರೈವರ್ 80 ಪ್ರಯಾಣಿಕರ ಸಮೇತ ಬಸ್ನ್ನೇ ಪೊಲೀಸ್ ಠಾಣೆಗೆ ತಂದಿದ್ದರು. ಹೊಸಪೇಟೆ ಪೊಲೀಸ್ ಠಾಣೆಯ PI ಲಖನ್ ಮಸುಗುಪ್ಪಿ ನೇತೃತ್ವದಲ್ಲಿ ಬಸ್ನಲ್ಲಿದ್ದ ಪ್ರಯಾಣಿಕರ ತಪಾಸಣೆ ನಡೆಸಿದ್ದಾರೆ.
80 ಮಂದಿ ಪ್ರಯಾಣಿಕರನ್ನು ಒಬ್ಬೊಬ್ಬರನ್ನಾಗಿ ಕೆಳಗಿಳಿಸಿ ಪೊಲೀಸರು ತಪಾಸಣೆ ನಡೆಸಿದ್ದು, ಎಲ್ಲರ ತಪಾಸಣೆ ನಡೆಸಿದ್ರೂ ಬಂಗಾರದ ಒಡವೆಗಳು ಪತ್ತೆಯಾಗಲಿಲ್ಲ. ಈ ಪ್ರಕರಣ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ವೇಷ ತೊಟ್ಟುಕೊಂಡು ಆಟ ಆಡ್ತಿದ್ದಾರೆ.. ಈ ಡೌವ್‌ಗಳು ಬೇಕಾ – ಚೈತ್ರಾ ಮೇಲೆ ತಿರುಗಿಬಿದ್ದ ಮನೆಮಂದಿ..!