Download Our App

Follow us

Home » ಅಪರಾಧ » ಅರಿಹಂತ್​​​​ ಜ್ಯುವೆಲ್ಲರ್ಸ್ ಮಾಲೀಕನ ಮನೆ ಲೂಟಿ ಪ್ರಕರಣ – ನೇಪಾಳಿಗಳ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ..!

ಅರಿಹಂತ್​​​​ ಜ್ಯುವೆಲ್ಲರ್ಸ್ ಮಾಲೀಕನ ಮನೆ ಲೂಟಿ ಪ್ರಕರಣ – ನೇಪಾಳಿಗಳ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ..!

ಬೆಂಗಳೂರು : ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಅರಿಹಂತ್ ಜ್ಯುವೆಲ್ಲರ್ಸ್ ಮಾಲೀಕನ ಮನೆ ಕಳ್ಳತನ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವು ತಂದೊಡ್ಡಿದೆ. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ದೋಚಿದ ಖದೀಮರು ನೇಪಾಳಕ್ಕೆ ಎಸ್ಕೇಪ್​ ಆಗಿರುವ ಮಾಹಿತಿಯಿದೆ. ಸದ್ಯ ಆರೋಪಿಗಳ ಪತ್ತೆ ಹಾಗೂ ಕಳವಾದ ಆಭರಣಗಳ ಪತ್ತೆ ಕಾರ್ಯ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಇನ್ನು, ನೇಪಾಳಿಗಳ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮನೆ ಕೆಲಸಕ್ಕಿದ್ದ ನಾಮರಾಜ್ ಮತ್ತು ಆತನ ಸ್ನೇಹಿತ  ಎರಡು ಬ್ಯಾಗ್​​​ಗಳಲ್ಲಿ ಬೆನ್ನ ಮೇಲೆ ಕೆಜಿಗಟ್ಟಲೆ ಚಿನ್ನ, ಬೆಳ್ಳಿ, ನಗದು ಹೊತ್ತು ಸಾಗಿದ್ದ ಸಿಸಿಟಿವಿ ದೃಶ್ಯ ಇದೀಗ ಎಲ್ಲೆಡೆ ವೈರಲ್​ ಆಗಿದೆ. ನಾಮರಾಜ್ ಹಾಗೂ ಆತನ ಸ್ನೇಹಿತ ಹಣ ಸೇರಿ ಸುಮಾರು 15 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದು, ಮನೆಯ ಲಿಫ್ಟ್ ಪಕ್ಕದ ರೂಂಗೆ ಹೋಗಿ ವಾಪಸ್ ಬರ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆ ಬಳಿಕ ಬೈಕ್​​ನಲ್ಲಿ ಮನೆಯಿಂದ ನೇರವಾಗಿ ಯಶವಂತಪುರ ರೈಲು ನಿಲ್ದಾಣಕ್ಕೆ ಹೋಗಿದ್ದರು. ಸದ್ಯ ನೇಪಾಳಕ್ಕೆ ಇಬ್ಬರು ಖದೀಮರು ಎಸ್ಕೇಪ್​ ಆಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಕಳ್ಳತನಕ್ಕೂ ಮುನ್ನ ನಾಮರಾಜ್ ಆತನ ಪತ್ನಿಯನ್ನು ರೈಲು ನಿಲ್ದಾಣಕ್ಕೆ ಕಳಿಸಿದ್ದ ಎನ್ನಲಾಗಿದೆ. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಕಳ್ಳರಿಗೆ ವಿಜಯನಗರ ಪೊಲೀಸರ ಶೋಧ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ : ನವೆಂಬರ್ 1ರಂದು ಜಾತ್ರೆಯ ನಿಮಿತ್ತ ಅರಿಹಂತ್ ಜ್ಯುವೆಲ್ಲರ್ಸ್ ಮಾಲೀಕ ಸುರೇಂದ್ರ ಕುಮಾರ್​ ಜೈನ್​ ಅವರ ಕುಟುಂಬ ಗುಜರಾತ್‌ನ ಗಿರ್ನಾರಿಗೆ ತೆರಳಿತ್ತು. ನವೆಂಬರ್ 3ರಂದು ಸುರೇಂದ್ರ ಕುಮಾರ್ ಜೈನ್ ಮನೆಯಲ್ಲಿ ಕಳವಾಗಿತ್ತು. ಮನೆಯಲ್ಲಿದ್ದ ಚಿನ್ನಾಭರಣ, ನಗದು, ಬೆಳ್ಳಿ ಸೇರಿದಂತೆ ಸುಮಾರು 15 ಕೋಟಿ ಮೌಲ್ಯದ ವಸ್ತುಗಳನ್ನು ಮನೆ ಕೆಲಸಕಿದ್ದ ನಾಮರಾಜ್​ ದೋಚಿ ಪರಾರಿಯಾಗಿದ್ದ. ನವೆಂಬರ್ 7ರಂದು ಸುರೇಂದ್ರ ಕುಮಾರ್ ಜೈನ್​ ಅವರ ಕುಟುಂಬ ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ : ಮುಡಾ ಕೇಸ್​ನಲ್ಲಿ ಮತ್ತೊಂದು ಬಿಗ್​ ಡೆವಲಪ್​​ಮೆಂಟ್​.. ಸಿಎಂ ಸಿದ್ದು ಆಪ್ತ ಮರಿಗೌಡಗೆ ED ಬುಲಾವ್​​..!

Leave a Comment

DG Ad

RELATED LATEST NEWS

Top Headlines

ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಇನ್ಸ್​ಪೆಕ್ಟರ್​ ಅಯ್ಯಣ್ಣ ರೆಡ್ಡಿ ಅರೆಸ್ಟ್..!

ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಶಾಸಕ ಮುನಿರತ್ನ ಮಾಡಿರೋ ಹನಿಟ್ರ್ಯಾಪ್​​ಗೆ ಇನ್ಸ್ಪೆಕ್ಟರ್

Live Cricket

Add Your Heading Text Here