Download Our App

Follow us

Home » ರಾಜಕೀಯ » ಮುಡಾ ಕೇಸ್​ನಲ್ಲಿ ಮತ್ತೊಂದು ಬಿಗ್​ ಡೆವಲಪ್​​ಮೆಂಟ್​.. ಸಿಎಂ ಸಿದ್ದು ಆಪ್ತ ಮರಿಗೌಡಗೆ ED ಬುಲಾವ್​​..!

ಮುಡಾ ಕೇಸ್​ನಲ್ಲಿ ಮತ್ತೊಂದು ಬಿಗ್​ ಡೆವಲಪ್​​ಮೆಂಟ್​.. ಸಿಎಂ ಸಿದ್ದು ಆಪ್ತ ಮರಿಗೌಡಗೆ ED ಬುಲಾವ್​​..!

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 14 ನಿವೇಶನಗಳ ಕಂಟಕ ಯಾವಾಗ ಯಾರ ಬುಡಕ್ಕೆ ಬರುತ್ತದೆಯೋ ಗೊತ್ತಿಲ್ಲ. ಒಂದೆಡೆ ಲೋಕಾಯುಕ್ತ ಪೊಲೀಸರು, ಮತ್ತೊಂದೆಡೆ  ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯ ಕೂಡಾ ಹಗರಣವನ್ನು ಬಗೆಯುತ್ತಿದೆ. ಇದರ ನಡುವೆ ಮುಡಾ ಕೇಸ್​ನಲ್ಲಿ ಮತ್ತೊಂದು ಬಿಗ್​ ಡೆವಲಪ್​​ಮೆಂಟ್ ನಡೆದಿದೆ.

ಮುಡಾ ಕೇಸ್​​ಗೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಆಪ್ತ ಮರಿಗೌಡಗೆ ED ಬುಲಾವ್ ನೀಡಿದೆ. Ed ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ನೀಡಿದ ಹಿನ್ನಲೆ ಮೈಸೂರು ಮುಡಾದ ಮಾಜಿ ಅಧ್ಯಕ್ಷ ಕೆ.ಮರಿಗೌಡ ಬೆಂಗಳೂರಿನ ED ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗಿದ್ದಾರೆ.

ಮೈಸೂರು ಮುಡಾದ ಮಾಜಿ ಅಧ್ಯಕ್ಷ ಕೆ.ಮರಿಗೌಡ ಸಿಎಂ ಸೈಟ್​ ವಿವಾದ ವೇಳೆ ರಾಜೀನಾಮೆ ನೀಡಿದ್ದರು. ಸಿಎಂ ಸಿದ್ದು ಸೂಚನೆಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಮರಿಗೌಡರನ್ನು ಕರೆಸಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆ, ನಕಲಿ ಸಹಿ ಆರೋಪದಲ್ಲಿ ED ಅಧಿಕಾರಿಗಳು ಸಿಎಂ ಖಾಸಗಿ ಆಪ್ತ ಸಹಾಯಕ ಟಿ.ಸಿ​.ಕುಮಾರ್ ಮಾಡಿದ್ದರು. ಇನ್ನು ನಿನ್ನೆಯಷ್ಟೇ ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರ್​ನಾಯ್ಕ್​​ರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ತೀವ್ರ ವಿಚಾರಣೆ ನಡೆಸಿದೆ.

ಇದನ್ನೂ ಓದಿ : 3 ತಿಂಗಳಿಂದ ಆಂಬ್ಯುಲೆನ್ಸ್​ ನೌಕರರ ವೇತನ ವಿಳಂಬ.. ಮತ್ತೆ ಹೋರಾಟಕ್ಕೆ ಮುಂದಾದ 108 ಸಿಬ್ಬಂದಿಗಳು..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here