ರಾಷ್ಟ್ರ ಪ್ರಶಸ್ತಿ ವಿಜೇತ, ಕನ್ನಡ ಸ್ಟಾರ್ ನಟ ರಿಷಬ್ ಶೆಟ್ಟಿ ಹೊಸ ಅವತಾರ ತಾಳಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಪ್ಯಾನ್ ಇಂಡಿಯಾ ಹನುಮಾನ್ ನಂತರ ಬಹುನಿರೀಕ್ಷಿತ ಸೀಕ್ವೆಲ್ ಜೈ ಹನುಮಾನ್ ಸಿನಿಮಾ ಮಾಡಲು ಮತ್ತೆ ಸಜ್ಜಾಗಿದ್ದಾರೆ.
ಹೌದು, ಮೈತ್ರಿ ಮೂವಿ ಮೇಕರ್ಸ್‌ನೊಂದಿಗೆ ಪ್ರಶಾಂತ್ ವರ್ಮಾ ಕೈಜೋಡಿಸಿದ್ದಾರೆ. ಇದೀಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತ ಜೈ ಹನುಮಾನ್ ಚಿತ್ರತಂಡದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಜೈ ಹನುಮಾನ್ ಫಸ್ಟ್ ಲುಕ್ನಲ್ಲಿ ಕನ್ನಡದ ಸ್ಟಾರ್ ನಟ ಕಾಂತಾರಾದ ಮೂಲಕ ದೇಶಾದ್ಯಂತ ಭಾರೀ ಹವಾ ಕ್ರಿಯೇಟ್ ಮಾಡಿರೋ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ಅಂಜಯನೇಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಚಿತ್ರತಂಡದಿಂದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿದೆ. ಇನ್ನೂ ಹನುಮಾನ್ ಪಾತ್ರದಲ್ಲಿ ರಿಷಬ್ ಶೆಟ್ಟಿ ಅವರನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಜೊತೆಗೆ ಈ ಸಿನಿಮಾಗಾಗಿ ಬಹಳ ಕಾತುರದಿಂದ ಕಾಯುತ್ತಿದ್ದಾರೆ.
Post Views: 233