ಬೆಂಗಳೂರು : ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಬಂಧನದಲ್ಲಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಸಂಕಷ್ಟ ಮುಂದುವರಿದಿದೆ. ಈ ಕೇಸ್ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
ಎಸ್ಐಟಿ ಬಂಧನದ ಬಳಿಕ ಹೆಚ್.ಡಿ ರೇವಣ್ಣ ಅವರು ಜಾಮೀನಿಗಾಗಿ ಜನಪ್ರತಿನಿಧಿಗಳ ಕೋರ್ಟ್ ಮೊರೆ ಹೋಗಿದ್ದರು. ಇಂದು ಜಾಮೀನಿನ ಅರ್ಜಿ ವಿಚಾರಣೆ ಮುಂದುವರಿದಿದ್ದು, ರೇವಣ್ಣ ಪರ ಸೀನಿಯರ್ ಕೌನ್ಸಿಲ್ ಸಿ.ವಿ ನಾಗೇಶ್ ಹಾಜರಿದ್ದರು. ಎಸ್ಐಟಿ ಪರ SPP ಜಯ್ನಾ ಕೋಠಾರಿ ಅವರು ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರ ಬೆಳಿಗ್ಗೆ 11.30ಕ್ಕೆ ಮುಂದೂಡಿದೆ. ಈ ಹಿನ್ನೆಲೆ ಹೆಚ್ಡಿ ರೇವಣ್ಣಗೆ ಇಂದು ಕೂಡ ಜಾಮೀನು ಸಿಗಲಿಲ್ಲ. ಇನ್ನೂ 5 ದಿನ ರೇವಣ್ಣಗೆ ಜೈಲೇ ಗತಿ.
ಇದನ್ನೂ ಓದಿ : ಪೆನ್ ಡ್ರೈವ್ ಕೇಸ್ಗೆ ಬಿಗ್ ಟ್ವಿಸ್ಟ್ – ರಾಜ್ಯಪಾಲರ ಭೇಟಿಗೆ ಮುಂದಾದ ಮಾಜಿ ಸಿಎಂ ಹೆಚ್ಡಿಕೆ..!
Post Views: 114