Download Our App

Follow us

Home » ಅಪರಾಧ » ಮೇ.8ರವರೆಗೆ ಮಾಜಿ ಸಚಿವ ಹೆಚ್​.ಡಿ ರೇವಣ್ಣ SIT ಕಸ್ಟಡಿಗೆ​..!

ಮೇ.8ರವರೆಗೆ ಮಾಜಿ ಸಚಿವ ಹೆಚ್​.ಡಿ ರೇವಣ್ಣ SIT ಕಸ್ಟಡಿಗೆ​..!

ಬೆಂಗಳೂರು : ಮಹಿಳೆಯ ಕಿಡ್ನಾಪ್​ ಕೇಸ್​ನಲ್ಲಿ ಪ್ರಮುಖ ಆರೋಪಿಯಾಗಿರುವ ರೇವಣ್ಣನನ್ನು ಮೇ.4ರಂದು ಅರೆಸ್ಟ್ ಮಾಡಿದ್ದಾರೆ. ಬಂಧನಕ್ಕೊಳಗಾಗಿರುವ ಹೆಚ್.ಡಿ ರೇವಣ್ಣ ಅವರನ್ನು ಕೋರ್ಟ್ ನಾಲ್ಕು ದಿನಗಳ ಕಾಲ ಎಸ್‌ಐಟಿ ವಶಕ್ಕೆ ಒಪ್ಪಿಸಿದೆ.

ವಶಕ್ಕೆ ಕೊಡ್ತಿದ್ದಂತೆ SIT ವಿಚಾರಣೆ ಶುರು ಮಾಡಿದ್ದು, ಮೇ 8 ರವರೆಗೆ ಕೋರ್ಟ್ SIT ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಇಂದು ಬೆಳಗ್ಗೆ 9 ರಿಂದ SIT ಅಧಿಕಾರಿಗಳು ಮತ್ತೆ ವಿಚಾರಣೆ ಆರಂಭಿಸಲಿದ್ದಾರೆ. ಕಿಡ್ನಾಪ್ ಪ್ರಕರಣ ಸೇರಿ ಮೂರೂ ಕೇಸ್​ಗಳ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ಕಿಡ್ನಾಪ್​​ಗೂ ನನಗೂ ಸಂಬಂಧ ಇಲ್ಲ ಎಂದು ರೇವಣ್ಣ ಹೇಳಿದ್ದಾರೆ. ಈ ಕೇಸ್​ನಲ್ಲಿ ರೇವಣ್ಣ ಪಾತ್ರದ ಬಗ್ಗೆ SIT ತನಿಖೆ ನಡೆಸುತ್ತಿದೆ. ಇಂದು SIT ಅಧಿಕಾರಿಳು ಅಸಲಿ ವಿಚಾರಣೆ ಶುರು ಮಾಡಲಿದ್ದಾರೆ. ಸಂತ್ರಸ್ಥೆ ಹೇಳಿಕೆ, ಎರಡನೇ ಆರೋಪಿ ಹೇಳಿಕೆ ಇಟ್ಕೊಂಡು ವಿಚಾರಣೆ ನಡೆಸಲಿದ್ದಾರೆ.

ಮೈಸೂರು ಜಿಲ್ಲೆ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದ ಮೇಲೆ ಎಚ್‌ಡಿ ರೇವಣ್ಣ ಅವರನ್ನು ಬಂಧಿಸಲಾಗಿದೆ. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳಿವೆ ಎನ್ನಲಾದ ಪೆನ್‌ಡ್ರೈವ್ ಬಹಿರಂಗವಾದ ಬಳಿಕ ತಾಯಿ ನಾಪತ್ತೆಯಾಗಿದ್ದಾರೆ ಎಂದು ಮಗ ದೂರು ನೀಡಿದ್ದರು. ನಾಪತ್ತೆಯಾಗಿದ್ದ ಮಹಿಳೆ ರೇವಣ್ಣ ಅವರ ಆಪ್ತನ ತೋಟದ ಮನೆಯಲ್ಲಿ ಪತ್ತೆಯಾಗಿದ್ದಾರೆ. 

ಇದನ್ನೂ ಓದಿ : ರಾಜ್ಯದಲ್ಲಿ ನಾಳೆ ಎರಡನೇ ಹಂತದ ಚುನಾವಣೆ..!​​​

Leave a Comment

DG Ad

RELATED LATEST NEWS

Top Headlines

ಬೆಂಗಳೂರು ದಕ್ಷಿಣ ಘೋಷಣೆ ಬೆನ್ನಲ್ಲೇ ಇಂದು ಮಹತ್ವದ ಸಭೆ ಕರೆದ ಡಿಸಿಎಂ ಡಿಕೆಶಿ..!

ಬೆಂಗಳೂರು : ತೀವ್ರ ವಿರೋಧದ ನಡುವೆ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ

Live Cricket

Add Your Heading Text Here