Download Our App

Follow us

Home » ಅಪರಾಧ » ಮೇ.31ರಂದು ಭಾರತಕ್ಕೆ ವಾಪಾಸ್ ಬರ್ತಿನಿ : ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಬಿಟ್ಟ ಪ್ರಜ್ವಲ್ ರೇವಣ್ಣ..!

ಮೇ.31ರಂದು ಭಾರತಕ್ಕೆ ವಾಪಾಸ್ ಬರ್ತಿನಿ : ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಬಿಟ್ಟ ಪ್ರಜ್ವಲ್ ರೇವಣ್ಣ..!

ಬೆಂಗಳೂರು : ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ  ಪ್ರಜ್ವಲ್ ರೇವಣ್ಣ ಬರೋಬ್ಬರಿ ತಿಂಗಳ ನಂತರ ಇದೀಗ ಪ್ರತ್ಯಕ್ಷರಾಗಿದ್ದಾರೆ. ಕೊನೆಗೂ ಮುಖ ತೋರಿಸಿದ ಪ್ರಜ್ವಲ್​ ರೇವಣ್ಣ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹರಿ ಬಿಟ್ಟಿದ್ದಾರೆ.

ವಿದೇಶದಿಂದಲೇ ಪ್ರಜ್ವಲ್​ ರೇವಣ್ಣ ರಿಲೀಸ್​ ಮಾಡಿದ ​ಮೀಡಿಯಾದಲ್ಲಿ, ಮೇ 31 ರಂದು ಬೆಂಗಳೂರಿಗೆ ಬಂದೇ ಬರ್ತಿನಿ. SIT ವಿಚಾರಣೆಯನ್ನು ನಾನು ಎದುರಿಸುತ್ತೇನೆ. ತಾತ, ತಂದೆ-ತಾಯಿ ಜನರ ಆರ್ಶೀವಾದ ಇದೆ. ನನ್ನ ಕಾರ್ಯಕರ್ತರಿಗೆ ನಾನು ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

ನನ್ನ ಪ್ರವಾಸ ಮೊದಲೇ ನಿಗದಿಯಾಗಿತ್ತು. ಏಪ್ರಿಲ್​ 26ಕ್ಕೆ ಎಲೆಕ್ಷನ್​ ಮುಗಿದಿತ್ತು. ಏಪ್ರಿಲ್​ 26 ರಂದು ಕೇಸ್​ ದಾಖಲಾಗಲಿಲ್ಲ. ನಾನು ನಿಗದಿತ ಪ್ರವಾಸದಂತೆ ಬಂದಿದ್ದೆ. ಹಾಸನದಲ್ಲಿ ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.

ಇನ್ನೂ ನಾನು ಮಾನಸಿಕ ಖಿನ್ನವಾಗಿದ್ದೆ. ಇಷ್ಟು ದಿನ ಒಂಟಿಯಾಗಿ ರೂಮ್​ನಲ್ಲಿದ್ದೇ. ಈ ಬೆಳವಣಿಗೆಯಿಂದ ಡಿಪ್ರೆಶನ್​ಗೆ ಹೋಗಿದ್ದೆ. ನನ್ನ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ.
ಹಾಸನದಲ್ಲೇ ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ರಾಹುಲ್​ ಗಾಂಧಿ ನನ್ನ ಬಗ್ಗೆ ಏನ್​ ಮಾತನಾಡಿದ್ದಾರೆ ಗೊತ್ತು. ಷಡ್ಯಂತ್ರದ ಬಗ್ಗೆ ನನಗೆ ಎಲ್ಲಾ ಗೊತ್ತು. ಬೆಂಗಳೂರಿಗೆ ಬಂದ್ಮೇಲೆ ಎಲ್ಲಾವನ್ನು ಹೇಳುವೆ ಎಂದು ನಿಗೂಢ ಸ್ಥಳದಿಂದಲೇ ಪ್ರಜ್ವಲ್ ರೇವಣ್ಣ ವಿಡಿಯೋ ರಿಲೀಸ್​ ಮಾಡಿದ್ದಾರೆ.

ಇದನ್ನೂ ಓದಿ : ನಟ ಧ್ರುವ ಸರ್ಜಾ ಜಿಮ್​ ಟ್ರೈನಿ ಮೇಲೆ ಹ*ಲ್ಲೆ – ದಾಳಿಕೋರರ ಟಾರ್ಗೆಟ್​ ಆಗಿದ್ದವರು ಯಾರು..?

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here