ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರವಾಗಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದರ್ಶನ್ ಗ್ಯಾಂಗ್ ವಿಚಾರಣೆ ಮುಂದುವರಿದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾಗೌಡ ಪವಿತ್ರಾ ಗೌಡ, ವಿನಯ್, ಪ್ರದೋಷ್ ಸೇರಿ 14 ಮಂದಿಯ ಕ್ರೈಂ ರೆಕಾರ್ಡ್ ಓಪನ್ ಆಗಿದೆ.
ದರ್ಶನ್, ಪವಿತ್ರಾಗೌಡ ಸೇರಿ 14 ಮಂದಿಯ ಕ್ರೈಂ ರೆಕಾರ್ಡ್ ಓಪನ್ ಮಾಡಿ ಪೊಲೀಸರು ಸಹಿ ಪಡೆದಿದ್ದಾರೆ. ಹೀಗಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪಿಯಾಗಿ ಸ್ಯಾಂಡಲ್ವುಡ್ ಹೀರೋ ಕ್ರೈಂ ರೆಕಾರ್ಡ್ ಸೇರಿದ್ದಾರೆ.
ಬೆಂಗಳೂರು CCRB ಕಚೇರಿಯಲ್ಲಿ ದರ್ಶನ್ ಕ್ರೈಂ ಹಿಸ್ಟರಿ ಎನ್ ರೋಲ್ ಆಗಿದೆ. ದರ್ಶನ್ ಫಿಂಗರ್ ಪ್ರಿಂಟ್, ದೇಹದ ಬೇರೆ ಗುರುತುಗಳನ್ನ ಎಂಟ್ರಿ ಮಾಡಿ, ಫೋಟೋ ಸಮೇತ ಯಾವುದೇ ಮುಲಾಜಿಲ್ದೇ ಪೊಲೀಸರು ಕೊಲೆ ಆರೋಪಿ ಅಂತಾ ರೆಕಾರ್ಡ್ ಬಿಲ್ಡ್ ಮಾಡಿದ್ದಾರೆ.
ದರ್ಶನ್ ಕ್ರೈಂ ರೆಕಾರ್ಡ್ ಓಪನ್ :
- ಹೆಸರು – ದರ್ಶನ್ ಅಲಿಯಾಸ್ ತೂಗುದೀಪ ದರ್ಶನ್
- ವಯಸ್ಸು – 47,
- ತಂದೆ ಹೆಸರು- ಶ್ರೀನಿವಾಸ್
- ವಿಳಾಸ- ನಂ- 217, ಐಡಿಯಲ್ ಹೊಮ್ಸ್ ಟೌನ್ ಷಿಪ್, RR ನಗರ, ಬೆಂಗಳೂರು
- ಎತ್ತರ- 6 ಅಡಿ, 3 ಇಂಚು,
- ಬಣ್ಣ- ಬಿಳಿ, ವೃತ್ತಿ-
- ಸಿನಿಮಾ ನಟ
- ಪ್ರಕರಣದ ವಿವರ- 250/2024 IPC- 302,201
ಇದನ್ನೂ ಓದಿ : ಅಭಿನವ ಕೆಂಪೇಗೌಡ ಹೆಚ್.ಎಂ ಕೃಷ್ಣಮೂರ್ತಿಯವರು ನಟಿಸಿ, ನಿರ್ಮಿಸಿರುವ “ನಾಡಸಿಂಹ ಕೆಂಪೇಗೌಡ” ಹಾಡು ಬಿಡುಗಡೆ..!