ಚಿತ್ರದುರ್ಗ : ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ನಟ ದರ್ಶನ್ ಮತ್ತು ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ನಟ ದರ್ಶನ್ ಜೈಲಿಗೆ ಹೋದ ಬಳಿಕ ಕೊಲೆಯಾದ ರೇಣುಕಾಸ್ವಾಮಿ ನನಗೂ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂದು ನಟಿಯರು, ಸೋಷಿಯಲ್ ಮೀಡಿಯಾಸ್ಟಾರ್ಸ್, ಯೂಟ್ಯೂಬರ್ಸ್ ಹೇಳಿಕೊಂಡಿದ್ದರು. ಇದೀಗ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳಿಸಿದ್ದ ಎಂದಿದ್ದ ಸಿನಿಮಾ ನಟಿಯರ ವಿರುದ್ಧ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ಆಕ್ರೋಶ ಹಾಕಿದ್ದಾರೆ.
ಈ ವಿಚಾರವಾಗಿ ಚಿತ್ರದುರ್ಗದಲ್ಲಿ ಕಿಡಿಕಾರಿದ ಕಾಶಿನಾಥ್ ಶಿವನಗೌಡ ಅವರು , ನನ್ನ ಮಗ ನಿಮಗೆ ಮೆಸೇಜ್ ಕಳಿಸಿದ್ರೆ ಯಾಕೆ ಪೊಲೀಸ್ ಕಂಪ್ಲೇಂಟ್ ಕೊಡದೇ ಸುಮ್ಮನಿದ್ರಿ. ಕಂಪ್ಲೇಂಟ್ ಕೊಟ್ಟಿದ್ರೆ ಆಗಲೇ ಕಾನೂನು ಕ್ರಮ ಆಗುತ್ತಿರಲಿಲ್ಲವೇ? ಈ ರೀತಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದು ಇದ್ಕೆಲ್ಲಾ ಉತ್ತರನಾ? ಕಾನೂನು ಕೈಗೆ ತಗೊಂಡು ಹೆಣ್ಣಿನ ಜೀವನ ಹಾಳು ಮಾಡಿದ್ದು ಸರೀನಾ? ಎಂದು ನಟ- ನಟಿಯರು, ಚಿತ್ರರಂಗದವರಿಗೆ ಕಾಶಿನಾಥ್ ಶಿವನಗೌಡರ್ ಪ್ರಶ್ನಿಸಿದ್ದಾರೆ.
ಇನ್ನು ಕಾನೂನು ಕೈಗೆ ತಗೊಂಡು ಒಂದು ಹೆಣ್ಣಿನ ಜೀವನ ಹಾಳು ಮಾಡೋದು ಏನಿತ್ತು? ನಮ್ಮ ಇಡೀ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದ್ರಲ್ಲಾ ಸರೀನಾ?ವಯಸ್ಸಾದ ತಂದೆ-ತಾಯಿ, ಅಜ್ಜಿ, ನನ್ನ ಸೊಸೆ ನೋಡಿಕೊಳ್ಳೋರು ಯಾರು ? ಈ ರೀತಿ ರಾಕ್ಷಸ ಪ್ರವೃತ್ತಿ ಸಮರ್ಥಿಸಿಕೊಳ್ಳೋರಿಗೆ ಏನು ಹೇಳಬೇಕು? ಕಾನೂನು, ಕೋರ್ಟ್, ಕಚೇರಿ ಬಿಟ್ಟು ಇಂಥಾ ಕೃತ್ಯ ಮಾಡಿದ್ದು ಸರೀನಾ ಎಂದಿದ್ದಾರೆ.
ಅವನು ತಪ್ಪು ಮಾಡಿದ್ರೆ ಶಿಕ್ಷೆ ಆಗ್ತಿತ್ತು, ನಾನು ಅನುಭವಿಸಲಿ ಅಂತಿದ್ದೆ. ಚಿತ್ರಹಿಂಸೆ ಕೊಟ್ಟು ಕೊಲ್ಲೋದು ಯಾವ ಧರ್ಮ, ಚಿತ್ರರಂಗವೇ ಉತ್ತರ ಕೊಡಬೇಕು. ನಟ-ನಟಿಯರು ನನ್ನ ತಾಯಿ, ಹೆಂಡತಿ, ಸೊಸೆ ಸ್ಥಾನದಲ್ಲಿ ನಿಂತು ಯೋಚಿಸಲಿ ಎಂದು ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ನಟಿಯರು, ಸೋಷಿಯಲ್ ಸ್ಟಾರ್, ಯೂಟ್ಯೂಬರ್ ಮೇಲೆ ಗರಂ ಆಗಿದ್ದಾರೆ.
ಇದನ್ನೂ ಓದಿ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಎ.ಎನ್ ರಘುನಂದನ್..!