Download Our App

Follow us

Home » ಜಿಲ್ಲೆ » ಚಿತ್ರನಟಿಯರಿಗೆ, ಸೋಶಿಯಲ್ ಮೀಡಿಯಾ ಸ್ಟಾರ್​​​ಗಳಿಗೆ, ಯೂಟ್ಯೂಬರ್ಸ್​ಗೆ ಕ್ಯಾಕರಿಸಿ ಉಗಿದ ರೇಣುಕಾಸ್ವಾಮಿ ತಂದೆ..!

ಚಿತ್ರನಟಿಯರಿಗೆ, ಸೋಶಿಯಲ್ ಮೀಡಿಯಾ ಸ್ಟಾರ್​​​ಗಳಿಗೆ, ಯೂಟ್ಯೂಬರ್ಸ್​ಗೆ ಕ್ಯಾಕರಿಸಿ ಉಗಿದ ರೇಣುಕಾಸ್ವಾಮಿ ತಂದೆ..!

ಚಿತ್ರದುರ್ಗ : ರೇಣುಕಾಸ್ವಾಮಿ ಮರ್ಡರ್​​​ ಕೇಸ್​​ನಲ್ಲಿ ನಟ ದರ್ಶನ್​​ ಮತ್ತು ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ. ನಟ ದರ್ಶನ್ ಜೈಲಿಗೆ ಹೋದ ಬಳಿಕ ಕೊಲೆಯಾದ ರೇಣುಕಾಸ್ವಾಮಿ ನನಗೂ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂದು ನಟಿಯರು, ಸೋಷಿಯಲ್​ ಮೀಡಿಯಾಸ್ಟಾರ್ಸ್​​, ಯೂಟ್ಯೂಬರ್ಸ್ ಹೇಳಿಕೊಂಡಿದ್ದರು. ಇದೀಗ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್​ ಕಳಿಸಿದ್ದ ಎಂದಿದ್ದ ಸಿನಿಮಾ ನಟಿಯರ ವಿರುದ್ಧ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ಆಕ್ರೋಶ ಹಾಕಿದ್ದಾರೆ.

ಈ ವಿಚಾರವಾಗಿ ಚಿತ್ರದುರ್ಗದಲ್ಲಿ ಕಿಡಿಕಾರಿದ ಕಾಶಿನಾಥ್ ಶಿವನಗೌಡ ಅವರು , ನನ್ನ ಮಗ ನಿಮಗೆ ಮೆಸೇಜ್ ಕಳಿಸಿದ್ರೆ ಯಾಕೆ ಪೊಲೀಸ್ ಕಂಪ್ಲೇಂಟ್​ ಕೊಡದೇ ಸುಮ್ಮನಿದ್ರಿ. ಕಂಪ್ಲೇಂಟ್​ ಕೊಟ್ಟಿದ್ರೆ ಆಗಲೇ ಕಾನೂನು ಕ್ರಮ ಆಗುತ್ತಿರಲಿಲ್ಲವೇ? ಈ ರೀತಿ ಚಿತ್ರಹಿಂಸೆ ಕೊಟ್ಟು ಕೊಲೆ‌ ಮಾಡಿದ್ದು ಇದ್ಕೆಲ್ಲಾ ಉತ್ತರನಾ? ಕಾನೂನು ಕೈಗೆ ತಗೊಂಡು ಹೆಣ್ಣಿನ ಜೀವನ ಹಾಳು ಮಾಡಿದ್ದು ಸರೀನಾ? ಎಂದು ನಟ- ನಟಿಯರು, ಚಿತ್ರರಂಗದವರಿಗೆ ಕಾಶಿನಾಥ್ ಶಿವನಗೌಡರ್ ಪ್ರಶ್ನಿಸಿದ್ದಾರೆ.

ಇನ್ನು ಕಾನೂನು ಕೈಗೆ ತಗೊಂಡು ಒಂದು ಹೆಣ್ಣಿನ ಜೀವನ ಹಾಳು ಮಾಡೋದು ಏನಿತ್ತು? ನಮ್ಮ ಇಡೀ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದ್ರಲ್ಲಾ ಸರೀನಾ?ವಯಸ್ಸಾದ ತಂದೆ-ತಾಯಿ, ಅಜ್ಜಿ, ನನ್ನ ಸೊಸೆ ನೋಡಿಕೊಳ್ಳೋರು ಯಾರು ? ಈ ರೀತಿ ರಾಕ್ಷಸ ಪ್ರವೃತ್ತಿ ಸಮರ್ಥಿಸಿಕೊಳ್ಳೋರಿಗೆ ಏನು ಹೇಳಬೇಕು? ಕಾನೂನು, ಕೋರ್ಟ್​, ಕಚೇರಿ ಬಿಟ್ಟು ಇಂಥಾ ಕೃತ್ಯ ಮಾಡಿದ್ದು ಸರೀನಾ ಎಂದಿದ್ದಾರೆ.

ಅವನು ತಪ್ಪು‌ ಮಾಡಿದ್ರೆ ಶಿಕ್ಷೆ ಆಗ್ತಿತ್ತು, ನಾನು ಅನುಭವಿಸಲಿ ಅಂತಿದ್ದೆ. ಚಿತ್ರಹಿಂಸೆ ಕೊಟ್ಟು ಕೊಲ್ಲೋದು ಯಾವ ಧರ್ಮ, ಚಿತ್ರರಂಗವೇ ಉತ್ತರ ಕೊಡಬೇಕು. ನಟ-ನಟಿಯರು ನನ್ನ ತಾಯಿ, ಹೆಂಡತಿ, ಸೊಸೆ ಸ್ಥಾನದಲ್ಲಿ ನಿಂತು ಯೋಚಿಸಲಿ ಎಂದು ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ನಟಿಯರು, ಸೋಷಿಯಲ್​​ ಸ್ಟಾರ್​, ಯೂಟ್ಯೂಬರ್​ ಮೇಲೆ ಗರಂ ಆಗಿದ್ದಾರೆ.

ಇದನ್ನೂ ಓದಿ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ​ ಅಧಿಕಾರ ಸ್ವೀಕರಿಸಿದ ಎ.ಎನ್ ರಘುನಂದನ್..!

Leave a Comment

DG Ad

RELATED LATEST NEWS

Top Headlines

ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ವಿಧಿವಶ..!

ನವದೆಹಲಿ : ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. 92 ವರ್ಷದ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಯ್ಲಲಿ ಇಂದು ಕೊನೆಯುಸಿರೆಳೆದಿದ್ದಾರೆ. ರಾತ್ರಿ 8

Live Cricket

Add Your Heading Text Here