Download Our App

Follow us

Home » ಅಪರಾಧ » ರೇಣುಕಾಸ್ವಾಮಿ ಕಿಡ್ನಾಪ್​ ಸೀನ್ ಯಾವ ಸಿನಿಮಾಗೂ ಕಡಿಮೆ ಇಲ್ಲ : ಬಿಟಿವಿ ಬಳಿ ಇದೆ ಕಿಡ್ನಾಪ್​​ನ ಎಕ್ಸ್​ಕ್ಲೂಸಿಸ್​ ದೃಶ್ಯಗಳು..!

ರೇಣುಕಾಸ್ವಾಮಿ ಕಿಡ್ನಾಪ್​ ಸೀನ್ ಯಾವ ಸಿನಿಮಾಗೂ ಕಡಿಮೆ ಇಲ್ಲ : ಬಿಟಿವಿ ಬಳಿ ಇದೆ ಕಿಡ್ನಾಪ್​​ನ ಎಕ್ಸ್​ಕ್ಲೂಸಿಸ್​ ದೃಶ್ಯಗಳು..!

ಚಿತ್ರದುರ್ಗ : ರೇಣುಕಾಸ್ವಾಮಿ ಕಿಡ್ನಾಪ್​ ಸೀನ್​​ ಯಾವ ಸಿನಿಮಾಗೂ ಕಡಿಮೆ ಇಲ್ಲ. ಎಲ್ಲೆಲ್ಲಿ ಏನ್​ ಮಾಡ್ಬೇಕು, ಎಲ್ಲಿ ಯಾರು ಮೀಟ್​ ಆಗ್ಬೇಕು ಅನ್ನೊದನ್ನು ಡಿ ಗ್ಯಾಂಗ್​​​ ಪ್ರೀ ಪ್ಲಾನ್ ಮಾಡಿಕೊಂಡೇ ಬಂದಿತ್ತು. ರೇಣುಕಾಸ್ವಾಮಿ ಕಿಡ್ನಾಪ್​​ನ ಎಕ್ಸ್​ಕ್ಲೂಸಿಸ್​ ದೃಶ್ಯಗಳು ಬಿಟಿವಿ ಬಳಿ ಇದೆ. ಎಲ್ಲೂ ಇಲ್ಲದ ರಣರೋಚಕ ಡಿಟೇಲ್​​ ಬಿಟಿವಿಗೆ ಲಭ್ಯವಾಗಿದೆ.

ರೇಣುಕ ಕಿಡ್ನಾಪ್​​ನ ಮತ್ತೆರಡು ಸ್ಫೋಟಕ ವಿಡಿಯೋ BTVಗೆ ಲಭ್ಯವಾಗಿದ್ದು, 1 ನೇ CCTV ದೃಶ್ಯದಲ್ಲಿ ಬೆಳಿಗ್ಗೆ 9:40ಕ್ಕೆ ಜೆಸಿಆರ್ ರಸ್ತೆಯಲ್ಲಿ ರಘು ಅಂಡ್ ಗ್ಯಾಂಗ್ ರಣ ಹದ್ದಿನಂತೆ ಹೊಂಚು ಹಾಕಿತ್ತು. ಜೂನ್​​ 8ರಂದು ಸಮಯ ಸರಿಯಾಗಿ 9 ಗಂಟೆ 30 ನಿಮಿಷಕ್ಕೆ ರೇಣುಕಾಸ್ವಾಮಿ VRS ಲೇಔಟ್​ ಮನೆಯಿಂದ ತನ್ನ ಸ್ಕೂಟಿಯಲ್ಲಿ ಬಿಟ್ಟಿದ್ದ. ರಘು ಅಂಡ್ ಟೀಂ ತುರುವನೂರು ರಸ್ತೆಯಿಂದ ರೇಣುಕಾಸ್ವಾಮಿ ಬೆನ್ನು ಬಿದ್ದಿದ್ದರು. ಸ್ಕೂಟಿಯಲ್ಲಿ ರೇಣುಕಾಸ್ವಾಮಿ ಬೆನ್ನಟ್ಟಿ ಬಂದಿದ್ದ ದೃಶ್ಯ CCTV ಯಲ್ಲಿ ಸೆರೆಯಾಗಿದೆ. ರೇಣುಕಾಸ್ವಾಮಿ ತುರುವನೂರು ರಸ್ತೆಯ ಮೂಲಕ JCR ಬಡಾವಣೆ ಕಡೆ ಬಂದಿದ್ದ. ರೇಣುಕಾಸ್ವಾಮಿ ಸ್ಕೂಟಿ ಹಿಂದೆ ಅದೇ ರಸ್ತೆಯಲ್ಲಿ ಗ್ಯಾಂಗ್ ಬೆನ್ನು ಬಿದ್ದಿತ್ತು. JCR ಬಡಾವಣೆಯಲ್ಲಿ ಜೂನ್ 8 ಬೆಳಗ್ಗೆ 9.40ಕ್ಕೆ CCTV ದೃಶ್ಯದಲ್ಲಿ ಸೆರೆಯಾಗಿದೆ.

CCTV ದೃಶ್ಯ-02ರಲ್ಲಿ ರೇಣುಕಾಸ್ವಾಮಿ ಬೆಳಿಗ್ಗೆ 9:41ಕ್ಕೆ ಗಾಯತ್ರಿ ಸರ್ಕಲ್​​ನಿಂದ BD ರಸ್ತೆ ಮೂಲಕ ಸಂಚಾರ ಮಾಡಿದ್ದ. ಈ ವೇಳೆ ಆರೋಪಿಗಳು ನ್ಯಾಷನಲ್ ಹೋಟೆಲ್ ಸಮೀಪ ಹಿಂದೆಯೇ
ಫಾಲೋ ಮಾಡುತ್ತಲೇ ಹೋಗಿದ್ದಾರೆ. ಸಿಸಿಟಿವಿ ದೃಶ್ಯ-03ರಲ್ಲಿ ಬೆಳಗ್ಗೆ 9:48ಕ್ಕೆ ಬಾಲಾಜಿ ಬಾರ್ ಮುಂಭಾಗದಲ್ಲಿ ರಘು, ಜಗ್ಗ, ಅನು ಟೀಂ ಆಟೋ ಅಡ್ಡ ಹಾಕುವ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಕಿಡ್ನಾಪ್​ ಟೀಂ ಸ್ಕೂಟಿ ಪಕ್ಕದಲ್ಲಿ ಹಾಕಿಸಿ ಆಟೋಗೆ ಹತ್ತಿಸಿಕೊಂಡಿದೆ. ಜಗ್ಗನ ಆಟೋದ ಹಿಂದೆ ನಟ ದರ್ಶನ್ ಇರುವ ಫೋಟೋ ಕೂಡ ಪತ್ತೆಯಾಗಿದೆ.

ಸಿಸಿಟಿವಿ ದೃಶ್ಯ-04ರಲ್ಲಿ ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗದ ಕುಂಚಿಗನಾಳ್ ಪೆಟ್ರೋಲ್ ಬಂಕ್​​ ಬಳಿ ರೇಣುಕಾಸ್ವಾಮಿಯನ್ನು ಆಟೋದಿಂದ ಕಾರಿಗೆ ಶಿಪ್ಟ್ ಮಾಡಿದ್ದಾರೆ. ಈ ವೇಳೆ ಗ್ಯಾಂಗ್​​ ರವಿಯ ಬಾಡಿಗೆ ಕಾರನ್ನು ಬಳಸಿಕೊಂಡಿದ್ದಾರೆ. ರವಿ ಕಾರ್​ ಓಡಿಸಿದ್ದು, ರಘು, ಜಗ್ಗ, ಅನುಕುಮಾರ್​​​ ಜೊತೆಗಿದ್ದರು. ಸಿಸಿಟಿವಿ ದೃಶ್ಯ-05ರಲ್ಲಿ ಬೆಳಗ್ಗೆ 11 ಗಂಟೆಗೆ ಹಿರಿಯೂರಿನ ಗೋಯಿಲಾಳ್​​ ಟೋಲ್​​ಯಿಂದ ರೇಣುಕಾಸ್ವಾಮಿಯನ್ನು ಗ್ಯಾಂಗ್ ಬೆಂಗಳೂರಿಗೆ ಕರೆದೊಯ್ದಿದೆ. ಸಿಸಿಟಿವಿ ದೃಶ್ಯದಲ್ಲಿ ರವಿಯ ETIOS ಕಾರ್​​ ಟೋಲ್​​ನಲ್ಲಿ ಗೋಚರವಾಗಿದೆ.

ಇದನ್ನೂ ಓದಿ : ಬಕ್ರೀದ್ ಸಂಭ್ರಮಾಚರಣೆ ಹಿನ್ನೆಲೆ ಬೆಂಗಳೂರಲ್ಲಿ ಭರ್ಜರಿ ಕುರಿ ವ್ಯಾಪಾರ : ಇಲ್ಲಿದೆ ಬಜಾರ್ ರೇಟ್ ಡಿಟೇಲ್ಸ್..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here