Download Our App

Follow us

Home » ರಾಜ್ಯ » ಒಂದು ವರ್ಷಕ್ಕೆ ಎತ್ತಂಗಡಿ, ಟ್ರಾನ್ಸ್​ಫರ್ ಟೆನ್ಷನ್​ನಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ರಿಲೀಫ್ – KAT ಕೋರ್ಟ್ ಮಹತ್ವದ ಆದೇಶ…!

ಒಂದು ವರ್ಷಕ್ಕೆ ಎತ್ತಂಗಡಿ, ಟ್ರಾನ್ಸ್​ಫರ್ ಟೆನ್ಷನ್​ನಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ರಿಲೀಫ್ – KAT ಕೋರ್ಟ್ ಮಹತ್ವದ ಆದೇಶ…!

ಬೆಂಗಳೂರು : ಒಂದು ವರ್ಷಕ್ಕೆ ಎತ್ತಂಗಡಿ, ಟ್ರಾನ್ಸ್​ಫರ್ ಅಂತ ಟೆನ್ಷನ್​ನಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಇದೀಗ ಬಿಗ್​ ರಿಲೀಫ್ ಸಿಕ್ಕಿದೆ. ಎರಡು ವರ್ಷಕ್ಕಿಂತ ಕಡಿಮೆ ಅವಧಿಯೊಳಗೆ ಟ್ರಾನ್ಸ್​ಫರ್ ಮಾಡದಂತೆ KAT ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಪೊಲೀಸ್ ಅಧಿಕಾರಿಗಳು ವರ್ಗವಣೆ ಎರಡು ವರ್ಷಕ್ಕೆ ನಿಗಧಿ ಮಾಡುವಂತೆ KAT ಕೋರ್ಟ್ ಮೊರೆ ಹೋಗಿದ್ದರು. 65ಕ್ಕೂ ಹೆಚ್ಚು ಇನ್ಸ್​ಪೆಕ್ಟರ್, DySP ಹಾಗೂ ಅಡಿಷನಲ್ SP ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ವರ್ಗವಣೆ ಗೊಂದಲಕ್ಕೆ ಬ್ರೇಕ್ ಹಾಕಿ ಆದೇಶ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ವಾದ-ಪ್ರತಿವಾದ ಆಲಿಸಿದ KAT ಕೋರ್ಟ್​ನಿಂದ ಇದೀಗ ಮಹತ್ವದ ಆದೇಶ ಹೊರಬಿದ್ದಿದೆ.

ಎರಡು ವರ್ಷಕ್ಕಿಂತ ಕಡಿಮೆ ಅವಧಿಯೊಳಗೆ ವರ್ಗವಣೆ ಮಾಡದಂತೆ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ. ಸರ್ಕಾರ ವರ್ಗವಣೆ ಸಂಬಂಧ ಯಾವುದಾದರೂ ಕಾನೂನು ಜಾರಿಗೆ ತಂದರೇ ಮಾತ್ರ ಪರಿಶೀಲನೆ ನಡೆಸಬಹುದು. ಆಡಳಿತಾತ್ಮಕ ದೃಷ್ಟಿಯಿಂದ ಎರಡು ವರ್ಷಕ್ಕೂ ಮುಂಚೆ ವರ್ಗವಣೆ ಮಾಡದಂತೆ ಆದೇಶ ಹೊರಡಿಸಿದೆ. ಸದ್ಯ KAT ಆದೇಶದಿಂದ ಟ್ರಾನ್ಸ್ ಫರ್ ಟೆನ್ಷನ್​ನಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಫುಲ್ ರಿಲೀಫ್ ಸಿಕ್ಕಿದೆ.

ಇದನ್ನೂ ಓದಿ : ಕರಿ ನೆರಳ ಛಾಯೆಯಲ್ಲಿ ವಯನಾಡು.. ಏರುತ್ತಲೇ ಇದೆ ಸಾವಿನ ಸಂಖ್ಯೆ, 200ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here