Download Our App

Follow us

Home » ಅಪರಾಧ » ರಾಜ್ಯದಲ್ಲಿ ಮತ್ತೊಂದು ಬೃಹತ್ ನೇಮಕಾತಿ ಹಗರಣ ಬಯಲು – ಸಾರಿಗೆ ಇಲಾಖೆಯಲ್ಲಿ ಕೋಟಿ-ಕೋಟಿ ಅವ್ಯವಹಾರ..!

ರಾಜ್ಯದಲ್ಲಿ ಮತ್ತೊಂದು ಬೃಹತ್ ನೇಮಕಾತಿ ಹಗರಣ ಬಯಲು – ಸಾರಿಗೆ ಇಲಾಖೆಯಲ್ಲಿ ಕೋಟಿ-ಕೋಟಿ ಅವ್ಯವಹಾರ..!

ಬೆಂಗಳೂರು :  ಲೋಕಾಯುಕ್ತ ತನಿಖೆಯಿಂದ PSI ನೇಮಕಾತಿ ಹಗರಣದಂತೆಯೇ ರಾಜ್ಯದಲ್ಲಿ ಮತ್ತೊಂದು ಬೃಹತ್ ನೇಮಕಾತಿ ಹಗರಣ ಬಯಲಾಗಿದೆ. ಬ್ರೇಕ್ ಇನ್ಸ್​ಪೆಕ್ಟರ್​​ಗಳಾದ ​​​ಕೃಷ್ಣೇಗೌಡ, ನವೀನ್​​​​, ಎಂಡಿ ಪಾಟೀಲ್ 2023ರ ಬ್ರೇಕ್ ಇನ್ಸ್​ಪೆಕ್ಟರ್​​ಗಳ ನೇಮಕಾತಿಯಲ್ಲಿ ಕೋಟಿ ಕೋಟಿ ಲಂಚ ವಸೂಲಿ ಮಾಡಿದ ಆರೋಪ ಕೇಳಿ ಬಂದಿದೆ.

ಇದೀಗ ಸಾರಿಗೆ ಇಲಾಖೆಯಲ್ಲಿ ಕೋಟಿ-ಕೋಟಿ ಅವ್ಯವಹಾರದ ಆರೋಪ ಕೇಳಿಬಂದಿದ್ದು, 2023ರ ಬ್ರೇಕ್ ಇನ್ಸ್​ಪೆಕ್ಟರ್​​ಗಳ ನೇಮಕಾತಿಯಲ್ಲಿ 33 ಮಂದಿಯಿಂದ ಒಬ್ಬ ರಾಜಕಾರಣಿ ಮತ್ತು ಅಧಿಕಾರಿಗಳು  4 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖೆಯಿಂದ ಹಗರಣ ಬಯಲಾಗಿದೆ.

ಲೋಕಾಯುಕ್ತ ತನಿಖೆಯಿಂದ ಹಗರಣ ಬಯಲಾದ ಕಾರಣ ಕೋಟಿ-ಕೋಟಿ ಲಂಚ ಪಡೆದ ಮೂವರು ಬ್ರೇಕ್​​ ಇನ್ಸ್​ಪೆಕ್ಟರ್​ಗಳು ಜೈಲು ಪಾಲಗುವ ಸಾಧ್ಯತೆಗಳಿದ್ದು, ಈಗಾಗಲೇ  ಬ್ರೇಕ್​​ ಇನ್ಸ್​ಪೆಕ್ಟರ್​ಗಳಾದ​​​ ಕೃಷ್ಣೇಗೌಡ, ನವೀನ್​​​​, ಎಂಡಿ ಪಾಟೀಲ್​​​ಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ.

ಇನ್ಸ್​ಪೆಕ್ಟರ್​​​​ ಕೃಷ್ಣೇಗೌಡ,
                 ಇನ್ಸ್​ಪೆಕ್ಟರ್​​​​ ಕೃಷ್ಣೇಗೌಡ

 

ದೂರಿನ ಪ್ರಕಾರ ನೇಮಕಾತಿ ಪತ್ರ ನೀಡಲು ಹಣ ಪಡೆದಿರುವ ​​​​ ಬ್ರೇಕ್​​ ಇನ್ಸ್​ಪೆಕ್ಟರ್​​​ ನವೀನ್, DySP ಬಸವರಾಜ್ ಮುಂದೆ ಹಾಜರಾಗಿದ್ದಾರೆ. DySP ಮುಂದೆ ಹಾಜರಾದ ನವೀನ್  ಇನ್ನೂ ಉತ್ತರ ಕೊಡದೇ ಸಮಯಾವಕಾಶ ಕೇಳಿದ್ದಾರೆ. ಇನ್ನು ಲೋಕಾಯುಕ್ತ DySP ಮುಂದೆ ಸಾಕ್ಷಿ ಕೊಟ್ಟಿರುವ ದೂರುದಾರ ಡಿ.ಎನ್.ಬೆಟ್ಟೇಗೌಡ ಅವರು, 33 ನೇಮಕಾತಿ ಪತ್ರ ಪಡೆಯಲು ರಾಜಕಾರಣಿಗಳು 3 ಕೋಟಿ ಮತ್ತು ಅಧಿಕಾರಿಗಳು 1 ಕೋಟಿ ರೂಪಾಯಿ ಪಡೆದಿರುವ ಆಡಿಯೋವನ್ನು ಸಾಕ್ಷಿಯನ್ನು ಸಮೇತ ನೀಡಿದ್ದಾರೆ. ಡಿ.ಎನ್.ಬೆಟ್ಟೇಗೌಡ ಅವರು 2023 ಏಪ್ರಿಲ್​​​ನಲ್ಲಿ ನಡೆದಿರುವ ಬ್ರೇಕ್​​​ ಇನ್ಸ್​ಪೆಕ್ಟರ್​​​ ನೇಮಕಾತಿ ಹಗರಣದ ಬಗ್ಗೆ ನೀಡಿರುವ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡಿರು ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಇನ್ಸ್​ಪೆಕ್ಟರ್ ನವೀನ್
     ಇನ್ಸ್​ಪೆಕ್ಟರ್ ನವೀನ್

ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ : ಬಾಂಬಾರ್ ಜೊತೆ ಸಂಪರ್ಕ ಹೊಂದಿದ್ದ ಇಬ್ಬರನ್ನು ವಶಕ್ಕೆ ಪಡೆದ NIA..!

Leave a Comment

DG Ad

RELATED LATEST NEWS

Top Headlines

ನ್ಯೂ ಇಯರ್​ ಹೊತ್ತಲ್ಲಿ ಫ್ಯಾನ್ಸ್​ಗೆ ರಾಕಿ ಭಾಯ್​ ಶಾಕ್ – ಬರ್ತಡೇ ಸೆಲೆಬ್ರೇಷನ್​ಗೆ ಯಶ್​ ಬ್ರೇಕ್​!

ಬೆಂಗಳೂರು : 2025ರ ಹೊಸ ವರ್ಷಕ್ಕೆ ದಿನಗಣನೇ ಶುರುವಾಗಿರುವ ಹೊತ್ತಿನಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ ಕೊಟ್ಟಿದ್ದಾರೆ. ಈ ವರ್ಷವೂ ತಮ್ಮ ಹುಟ್ಟು

Live Cricket

Add Your Heading Text Here