ಚುನಾವಣಾ ಬಾಂಡ್ ಯೋಜನೆಯ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಯೋಜನೆಯು ಸಂವಿಧಾನ ಬಾಹಿರವಾಗಿದೆ. ಹೀಗಾಗಿ ಬಾಂಡ್ಗಳನ್ನು ರದ್ದು ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಚುನಾವಣಾ ಬಾಂಡ್ ಬಗ್ಗೆ ಕಾನೂನು ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ಎಲೆಕ್ಷನ್ ಬಾಂಡ್ನಿಂದ ಕಪ್ಪು ಹಣ ನಿಗ್ರಹ ಅಸಾಧ್ಯವಾಗಿದ್ದು, ಎಲೆಕ್ಟೋರಲ್ ಬಾಂಡ್‌ಗಳು ಸಂವಿಧಾನಕ್ಕೆ ವಿರುದ್ಧವಾಗಿದೆ.
2019ರ ನಂತರದ ಎಲೆಕ್ಟೋರಲ್ ಇ-ಬಾಂಡ್ಗಳ ಕುರಿತು SBIನಿಂದ ಕೋರ್ಟ್ ಮಾಹಿತಿ ಕೇಳಿದೆ. ಇದೀಗ ಎಲೆಕ್ಷನ್ ಇ-ಬಾಂಡ್ಗಳನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಎಲೆಕ್ಟೋರಲ್ ಇ-ಬಾಂಡ್ಗಳ ಸಿಂಧುತ್ವದ ಬಗ್ಗೆ ಅರ್ಜಿ ಪ್ರಶ್ನೆ ಮಾಡಿತ್ತು, ಸಿಜೆಐ ನೇತೃತ್ವದ ಸಾಂವಿಧಾನಿಕ ಪೀಠ ಅರ್ಜಿ ವಿಚಾರಣೆ ಮಾಡಿತ್ತು.
ಬ್ಯಾಂಕ್ಗಳು ಎಲೆಕ್ಟೋರಲ್ ಬಾಂಡ್ ನಿಲ್ಲಿಸುವಂತೆ ಕೋರ್ಟ್ ಆದೇಶ ನೀಡಿದ್ದು, ಎಲೆಕ್ಷನ್ ಇ-ಬಾಂಡ್‌ಗಳು ಆರ್ಟಿಕಲ್ 19(1A)ಉಲ್ಲಂಘನೆಯಾಗಿದೆ.
ಚುನಾವಣಾ ಬಾಂಡ್ ಯೋಜನೆಯನ್ನು ಟೀಕಿಸಿದ ಸುಪ್ರೀಂ ಕೋರ್ಟ್, ರಾಜಕೀಯ ಪಕ್ಷಗಳು ಪಡೆಯುತ್ತಿರುವ ಹಣದ ಬಗ್ಗೆ ಮಾಹಿತಿ ಪಡೆಯುವುದು ಬಹಳ ಮುಖ್ಯ ಎಂದು ಹೇಳಿದೆ. ಚುನಾವಣಾ ಬಾಂಡ್‌ಗಳು ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠವು ಕಳೆದ ವರ್ಷ ನವೆಂಬರ್ 2 ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು, ಅದು ಇಂದು ಪ್ರಕಟವಾಯಿತು.
ಇದನ್ನೂ ಓದಿ : ಮಂಗಳೂರು ಸ್ಕೂಲ್ ಬಳಿ ಪ್ರತಿಭಟನೆ ಪ್ರಕರಣ : MLA ವೇದವ್ಯಾಸ ಕಾಮತ್ ಸೇರಿ 6 ಮಂದಿ ವಿರುದ್ಧ FIR..!