Download Our App

Follow us

Home » ಕ್ರೀಡೆ » ಆರ್‌ಸಿಬಿ ಹೆಸರು, ಜರ್ಸಿ ಚೇಂಜ್ – ಇದು “ಆರ್‌ಸಿಬಿ”ಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಖಡಕ್ ಸೂಚನೆ ನೀಡಿದ ಕಿಂಗ್ ಕೊಹ್ಲಿ…!

ಆರ್‌ಸಿಬಿ ಹೆಸರು, ಜರ್ಸಿ ಚೇಂಜ್ – ಇದು “ಆರ್‌ಸಿಬಿ”ಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಖಡಕ್ ಸೂಚನೆ ನೀಡಿದ ಕಿಂಗ್ ಕೊಹ್ಲಿ…!

ಬೆಂಗಳೂರು : ಮಾರ್ಚ್​ 22ರಿಂದ ಐಪಿಎಲ್‌ ಸೀಸನ್‌ 17 ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಸೆಣಸಾಡಲಿದೆ. ಈ ಮೆಗಾ ಟೂರ್ನಿಗೂ ಮುನ್ನವೇ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ ಭರ್ಜರಿಯಾಗಿ ನಡೆದಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಆರ್‌ಸಿಬಿ ತಂಡದ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಆರ್‌ಸಿಬಿಯ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ವೇದಿಕೆಯಲ್ಲಿ ಮಾತನಾಡುತ್ತಾ ಕೊಹ್ಲಿ ಅವರು ʼಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎಂದು ಹೇಳಿದ್ದಾರೆ. ಈ ವೇಳೆ ಕಾರ್ಯಕ್ರದಲ್ಲಿ ನೆರೆದಿದ್ದ ಅಭಿಮಾನಿಗಳು ಪುಲ್ ಖುಷಿ ಆಗಿ ಶಿಳ್ಳೆ, ಚಪ್ಪಾಳೆಯೊಂದಿಗೆ ಕೊಹ್ಲಿಯನ್ನು ಕೊಂಡಾಡಿದ್ದಾರೆ.

       

ಇತ್ತ ನಿರೀಕ್ಷೆಯಂತೆ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಆರ್‌ಸಿಬಿ ತನ್ನ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರ್‌ ಇನ್ಮುಂದೆ “ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು” ಎಂದು ಬದಲಾಗಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಆರ್‌ಸಿಬಿ, ‘ನಾವು ಪ್ರೀತಿಸುವ ನಗರ, ನಾವು ಸ್ವೀಕರಿಸುವ ಪರಂಪರೆ ಮತ್ತು ಇದು ನಮ್ಮ ಹೊಸ ಅಧ್ಯಾಯದ ಸಮಯ. ನಿಮಗೆ ಪ್ರಸ್ತುತಪಡಿಸಲಾಗುತ್ತಿದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಮ್ಮ ತಂಡ, ನಿಮ್ಮ RCB!’ ಎಂದು ಬರೆದುಕೊಂಡಿದೆ.

ಇದರ ಜೊತೆಗೆ ಹೆಸರು ಬದಲಾಯಿಸಿರುವ ಲೋಗೋ ಹಾಗೂ ನೀಲಿ ಬಣ್ಣ ಹೊಸ ಜೆರ್ಸಿ ತೊಟ್ಟಿರುವ ಆರ್‌ಸಿಬಿ ತಂಡದ ಆಟಗಾರರು ಫೋಟೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 2024 ರ ಐಪಿಎಲ್‌ಗೆ ಆರ್‌ಸಿಬಿ ಆಟಗಾರರು ಹೊಸ ಹೆಸರು ಮತ್ತು ಜೆರ್ಸಿಯೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರೆ.

ಕಾರ್ಯಕ್ರಮಕ್ಕೂ ಮುನ್ನ ಡಬ್ಲ್ಯೂಪಿಎಲ್‌-2024 ಟ್ರೋಫಿ ಗೆದ್ದ ಮಹಿಳಾ ಆಟಗಾರ್ತಿಯರಿಗೆ ಪುರುಷರ ತಂಡವು ಕಾರ್ಯಕ್ರಮದಲ್ಲಿ ಭವ್ಯ ಸ್ವಾಗತ ಕೋರಿತು. ಡಬ್ಲ್ಯೂಪಿಎಲ್‌ ಟ್ರೋಫಿ ಹಿಡಿದು ಮಹಿಳಾ ತಂಡದ ನಾಯಕಿ ಫೀಲ್ಡಿಗೆ ಎಂಟ್ರಿ ಕೊಡುತ್ತಾರೆ. ಅವರ ಜೊತೆ ತಂಡದ ಆಟಗಾರರು ಸಾಲಾಗಿ ಬರುತ್ತಾರೆ. ಇವರನ್ನು ಆರ್‌ಸಿಬಿ ತಂಡದ ಪುರುಷ ಆಟಗಾರರು ಸಾಲಾಗಿ ನಿಂತು ಚಪ್ಪಾಳೆ ತಟ್ಟಿ ಸ್ವಾಗತ ಕೋರುತ್ತಾರೆ. ಈ ದೃಶ್ಯದ ವೀಡಿಯೋವನ್ನು ಆರ್‌ಸಿಬಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಐಪಿಎಲ್ 2024 ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದ್ದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಮೂಲಕ 17ನೇ ಆವೃತ್ತಿಯ ಐಪಿಎಲ್​ ಆರಂಭವಾಗಲಿದೆ.

ಇದನ್ನೂ ಓದಿ : ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ “ಮಾರ್ಟಿನ್” ಚಿತ್ರದ ಡಬ್ಬಿಂಗ್ ಮುಕ್ತಾಯ..!

Leave a Comment

DG Ad

RELATED LATEST NEWS

Top Headlines

ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್ – ಶೀಘ್ರವೇ KMFನಿಂದ ‘ನಂದಿನಿ ದೋಸೆ ಹಿಟ್ಟು’ ಬಿಡುಗಡೆ..!

ಬೆಂಗಳೂರು : ದೋಸೆ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಶೀಘ್ರವೇ ಕೆಎಂಎಫ್​ನಿಂದ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ನಂದಿನಿ ಬ್ರ್ಯಾಂಡ್ ಅಡಿ

Live Cricket

Add Your Heading Text Here